Putin-Modi: ಮೋದಿ ನಾಯಕತ್ವದ ಭಾರತ ಅತ್ಯಧಿಕ ಆರ್ಥಿಕ ಬೆಳವಣಿಗೆ; ವ್ಲಾಡಿಮಿರ್ ಪುಟಿನ್ ಶ್ಲಾಘನೆ
ಕ್ರೆಮ್ಲಿನ್‌ನ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ. ರಷ್ಯಾ- ಭಾರತದ ಸಂಬಂಧಗಳನ್ನು 'ರಾಷ್ಟ್ರೀಯ ಒಮ್ಮತದ ಆಧಾರದ ಮೇಲೆ' ಸ್ಥಿರವಾದದ್ದು ಎಂದು ಹೇಳಿರುವ ಪುಟಿನ್, ಮೋದಿಯವರ ನಾಯಕತ್ವದಲ್ಲಿ ಆಡಳಿತ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸಿದ್ದಾರೆ.

ನವದೆಹಲಿ: ಮೋದಿ ನಾಯಕತ್ವದ ಭಾರತ ಅತ್ಯಧಿಕ ಆರ್ಥಿಕ ಬೆಳವಣಿಗೆ ಸಾಧಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶ್ಲಾಘಿಸಿದ್ದಾರೆ.
ಹೌದು. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ವ್ಲಾಡಿಮಿರ್ ಪುಟಿನ್, ರಷ್ಯಾ ಮತ್ತು ಭಾರತ ನಡುವಿನ ಸದೃಢ ಸಂಬಂಧವನ್ನು ಪುನರುಚ್ಚರಿಸಿದ್ದಾರೆ. ರಷ್ಯಾ ಸರ್ಕಾರದ ಸದಸ್ಯರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯ ವಿವರಗಳನ್ನು ಪುಟಿನ್ ಹಂಚಿಕೊಂಡಿರುವುದಾಗಿ ಕ್ರೆಮ್ಲಿನ್‌ನ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ.
ರಷ್ಯಾ- ಭಾರತದ ಸಂಬಂಧಗಳನ್ನು 'ರಾಷ್ಟ್ರೀಯ ಒಮ್ಮತದ ಆಧಾರದ ಮೇಲೆ' ಸ್ಥಿರವಾದದ್ದು ಎಂದು ಹೇಳಿರುವ ಪುಟಿನ್, ಮೋದಿಯವರ ನಾಯಕತ್ವದಲ್ಲಿ ಆಡಳಿತ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಸಾಧನೆಗಳನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತ ಸಂಪೂರ್ಣ ಸ್ವತಂತ್ರ, ಸಾರ್ವಭೌಮ ನೀತಿಯನ್ನು ಅನುಸರಿಸುತ್ತಿದೆ. ಮುಖ್ಯವಾಗಿ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಟೆಲಿಗ್ರಾಂ ಮೂಲಕ ಶುಭಾಶಯ ಕಳುಹಿಸಿದ ಕೂಡಲೇ ಉಭಯ ನಾಯಕರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದು, ಉಭಯ ರಾಷ್ಟ್ರಗಳ ಸದೃಢ ಸಂಬಂಧದಲ್ಲಿ ಮೋದಿ ಅವರ ವೈಯಕ್ತಿಕ ಕೊಡುಗೆಗಳನ್ನು ಪುಟಿನ್ ಒತ್ತಿ ಹೇಳಿರುವುದಾಗಿ ಟಿವಿ ಬ್ರಿಕ್ಸ್ ವರದಿ ಮಾಡಿದೆ. ರಷ್ಯಾ ಧೀರ್ಘಕಾಲದ ಪ್ರಾಮಾಣಿಕ ಮಿತ್ರ ರಾಷ್ಟ್ರವಾಗಿದೆ. ರಷ್ಯಾ-ಭಾರತ ನಡುವಿನ ಸಂಬಂಧ ಅಭಿವೃದ್ಧಿ ಭಾರತದ ವಿದೇಶಾಂಗ ನೀತಿಯಲ್ಲಿ ಪ್ರಮುಖವಾಗಿದೆ ಎಂದು ಎಂದು MEA ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



