ದೇಶ

ಮೆದುಳು ತಿನ್ನುವ ಅಮೀಬಾ: ಅಪರೂಪದ ಸೋಂಕಿಗೆ ಕೇರಳದಲ್ಲಿ ಈವರೆಗೂ 17 ಮಂದಿ ಬಲಿ; ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಅನಿಶ್ಚಿತತೆ!

ಮೆದುಳು ತಿನ್ನುವ ಅಮೀಬಾ ಮಾರಕ ಸೋಂಕು ಕೇರಳ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಕಳೆದ 7 ತಿಂಗಳಿನಲ್ಲಿ ಒಟ್ಟು 17 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ತಿಂಗಳೊಂದರಲ್ಲೇ ಏಳು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಮೆದುಳು ತಿನ್ನುವ ಅಮೀಬಾ: ಅಪರೂಪದ ಸೋಂಕಿಗೆ ಕೇರಳದಲ್ಲಿ ಈವರೆಗೂ 17 ಮಂದಿ ಬಲಿ; ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಅನಿಶ್ಚಿತತೆ!
ಸಂಗ್ರಹ ಚಿತ್ರ
Published On :

ಕೋಝಿಕೋಡ್: ಕೇರಳದಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.

ಮೆದುಳು ತಿನ್ನುವ ಅಮೀಬಾ ಮಾರಕ ಸೋಂಕು ಕೇರಳ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಕಳೆದ 7 ತಿಂಗಳಿನಲ್ಲಿ ಒಟ್ಟು 17 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ತಿಂಗಳೊಂದರಲ್ಲೇ ಏಳು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಆರಂಭದಲ್ಲಿ ಆರೋಗ್ಯ ತಜ್ಞರು ನೀರಿನ ಕೊಳ, ಕೆರೆ ಅಥವಾ ಈಜುಕೊಳಗಳಲ್ಲಿ ಇಳಿದವರಲ್ಲಿ ಸೋಂಕು ತಗುಲುತತಿದೆ ಎಂದು ನಂಬಿದ್ದರು. ಕಲುಷಿತ ನೀರು ಮೂಗಿನ ಮೂಲಕ ದೇಹ ಪ್ರವೇಶಿಸಿ ಮೆದುಳು ತಲುಪುತ್ತಿದೆ ಎನ್ನಲಾಗುತ್ತಿತ್ತು. ಆದರೆ, ಇತ್ತೀಚೆಗೆ ಪತ್ತೆಯಾಗ ಕೆಲ ಪ್ರಕರಣಗಳು ಕಳವಳಗಳನ್ನು ಹೆಚ್ಚಿಸಲಿದೆ. ಕೊಳ, ಕೆರೆ, ಈಜುಕೊಳದಲ್ಲಿ ಒಡ್ಡಿಕೊಳ್ಳದ ಮೂರು ತಿಂಗಳ ಮಗುವಿನಲ್ಲಿ ಹಾಗೂ ಇತರರೂ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ, ಆರೋಗ್ಯ ತಜ್ಞರ ಊಹಿಗಳ ಕುರಿತು ಪ್ರಶ್ನೆಗಳು ಶುರುವಾಗುವಂತೆ ಮಾಡಿದೆ.

ಸೋಂಕುಗಳ ಸಂಖ್ಯೆ ಹೆಚ್ಚಾಗಿದ್ದರೂ ಕೇರಳದಲ್ಲಿ (ಶೇ.24) ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನಿಂದ ಮರಣ ಪ್ರಮಾಣವು ಜಾಗತಿಕ ಅಂಕಿ ಅಂಶಕ್ಕಿಂತ (ಶೇ.97) ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ರೋಗ ತಡೆಗಟ್ಟುವುದು, ಸೋಂಕಿನಿಂದ ದೂರ ಉಳಿಯುವುದು ಹೇಗೆ ಎಂಬುದರ ಬಗ್ಗೆ ಸ್ಪಷ್ಟತೆಗಳು ಸಿಗದ ಕಾರಣ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.