ಉತ್ತರ ಭಾರತದ ಹಲವೆಡೆ ಭಾರಿ ಪ್ರವಾಹ, ಭೂ ಕುಸಿತಕ್ಕೆ ಇದೇ ಕಾರಣ! ಕೇಂದ್ರ, ರಾಜ್ಯಗಳಿಂದ ಉತ್ತರ ಬಯಸಿದ ಸುಪ್ರೀಂ ಕೋರ್ಟ್!
ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿನ ಭಾರಿ ಭೂಕುಸಿತ ಮತ್ತು ಪ್ರವಾಹವನ್ನು ನೋಡಿದ್ದೇವೆ. ಪ್ರವಾಹದಲ್ಲಿ ಅಪಾರ ಪ್ರಮಾಣದ ಮರಗಳು ತೇಲಿಬರುತ್ತಿರುವುದು ಮಾಧ್ಯಮಗಳ ವರದಿಗಳಿಂದ ಗಮನಕ್ಕೆ ಬಂದಿದೆ

ನವದೆಹಲಿ: ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಭಾರಿ ಭೂಕುಸಿತ ಮತ್ತು ಪ್ರವಾಹಕ್ಕೆ ಅಕ್ರಮ ಮರ ಕಡಿಯುವಿಕೆ ಕಾರಣವಾಗಿದೆ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತಿತರ ಇತರ ರಾಜ್ಯಗಳಿಂದ ಪ್ರತಿಕ್ರಿಯೆ ಬಯಸಿದೆ.
"ಅಭಿವೃದ್ಧಿ ಮತ್ತು ಪರಿಸರ"ದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂಬುದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ .ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯ ಪೀಠ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿನ ಭಾರಿ ಭೂಕುಸಿತ ಮತ್ತು ಪ್ರವಾಹವನ್ನು ನೋಡಿದ್ದೇವೆ. ಪ್ರವಾಹದಲ್ಲಿ ಅಪಾರ ಪ್ರಮಾಣದ ಮರಗಳು ತೇಲಿಬರುತ್ತಿರುವುದು ಮಾಧ್ಯಮಗಳ ವರದಿಗಳಿಂದ ಗಮನಕ್ಕೆ ಬಂದಿದೆ. ಮೇಲ್ನೋಟಕ್ಕೆ ಅಕ್ರಮವಾಗಿ ಮರಗಳ ಕಡಿಯುವಿಕೆ ಕಂಡುಬಂದಿದೆ. ಹೀಗಾಗಿ ಪ್ರತಿವಾದಿಗಳಿಗೆ ನೋಟಿಸ್ ನೀಡಿ ಎಂದು ಸಿಜೆಐ ಹೇಳಿದರು.
ಅರ್ಜಿದಾರರಾದ ಅನಾಮಿಕಾ ರಾಣಾ ಪರ ಹಾಜರಿದ್ದ ವಕೀಲರಾದ ಆಕಾಶ್ ವಶಿಷ್ಠ ಮತ್ತು ಶುಭಂ ಉಪಾಧ್ಯಾಯ ಅವರಿಗೆ ನೋಟಿಸ್ ಮತ್ತು ಅರ್ಜಿಯ ಪ್ರತಿಯನ್ನು ಕೇಂದ್ರ ಏಜೆನ್ಸಿಯಲ್ಲಿ ಸಲ್ಲಿಸಲು ಪೀಠವು ಅನುಮತಿ ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪರಿಸ್ಥಿತಿಯನ್ನು ಗಮನಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಿಜೆಐ ಹೇಳಿದರು.
ಇದು ಗಂಭೀರ ಸಮಸ್ಯೆಯಾಗಿ ಕಂಡುಬರುತ್ತಿದೆ. ಸುತ್ತಲೂ ಹೆಚ್ಚಿನ ಸಂಖ್ಯೆಯ ಮರದ ದಿಮ್ಮಿಗಳು ಬೀಳುತ್ತಿರುವುದು ಕಂಡುಬಂದಿದೆ. ಇದು ಅಕ್ರಮವಾಗಿ ಮರಗಳನ್ನು ಕಡಿಯುವುದನ್ನು ತೋರಿಸುತ್ತದೆ. ಪಂಜಾಬ್ ಸ್ಥಿತಿಯನ್ನು ನೋಡಿದ್ದೇವೆ. ಸಂಪೂರ್ಣ ಹೊಲಗಳು ಮತ್ತು ಬೆಳೆಗಳು ಜಲಾವೃತವಾಗಿವೆ. ಅಭಿವೃದ್ಧಿಯನ್ನು ತಗ್ಗಿಸುವ ಕ್ರಮಗಳೊಂದಿಗೆ ಪರಿಸರ ಸಮತೋಲನಗೊಳಿಸಬೇಕಾಗಿದೆ ಎಂದು ಹೇಳಿದ ಸಿಜೆಐ, ಈ ವಿಷಯ ಕುರಿತು ಎರಡು ವಾರಗಳ ನಂತರ ವಿಚಾರಣೆ ಮಾಡುವುದಾಗಿ ಹೇಳಿ ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



