Bihar polls: ಅಭಿವೃದ್ಧಿ v/s ವಿನಾಶದ ನಡುವಿನ ಹೋರಾಟ ಎಂದ ಜೆಪಿ ನಡ್ಡಾ!
ಲಾಲು ಪ್ರಸಾದ್ ನೇತೃತ್ವದ ಪಕ್ಷವು 'ರಂಗದಾರಿ' (ಸುಲಿಗೆ), 'ಜಂಗಲ್ ರಾಜ್' (ಅರಾಜಕತೆ) ಮತ್ತು 'ದಾದಾಗಿರಿ' (ಬೆದರಿಕೆ) ಗಾಗಿ ನಿಂತಿದೆ ಎಂದು ಆರ್‌ಜೆಡಿ ವಿರುದ್ಧ ಕಿಡಿಕಾರಿದರು.

ಔರಂಗಾಬಾದ್: ಬಿಹಾರ ವಿಧಾನಸಭಾ ಚುನಾವಣೆಯು ಅಭಿವೃದ್ಧಿ ಮತ್ತು ವಿನಾಶದ ನಡುವಿನ ಹೋರಾಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಔರಂಗಾಬಾದ್ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಹಾರದ ವಿಧಾನಸಭಾ ಚುನಾವಣೆಯು ಎನ್‌ಡಿಎಯ 'ವಿಕಾಸ್' (ಅಭಿವೃದ್ಧಿ) ಮತ್ತು ಇಂಡಿಯಾ ಬ್ಲಾಕ್‌ನ 'ವಿನಾಶ್' (ವಿನಾಶ) ನಡುವಿನ ಹೋರಾಟವಾಗಿದೆ ಎಂದರು.
ಇದು "ತನ್ನ ಕಿರಿಯ ಮೈತ್ರಿ ಪಾಲುದಾರರನ್ನು ಮುಗಿಸುವ ಪರಾವಲಂಬಿ ಪಕ್ಷ" ಎಂದು ಆರೋಪಿಸಿದರು. ಲಾಲು ಪ್ರಸಾದ್ ನೇತೃತ್ವದ ಪಕ್ಷವು 'ರಂಗದಾರಿ' (ಸುಲಿಗೆ), 'ಜಂಗಲ್ ರಾಜ್' (ಅರಾಜಕತೆ) ಮತ್ತು 'ದಾದಾಗಿರಿ' (ಬೆದರಿಕೆ) ಗಾಗಿ ನಿಂತಿದೆ ಎಂದು ಆರ್‌ಜೆಡಿ ವಿರುದ್ಧ ಕಿಡಿಕಾರಿದರು.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಯುವಕರಿಗೆ ಉದ್ಯೋಗ ಒದಗಿಸುವ ಮತ್ತು ವಲಸೆ ಹೋಗುವುದನ್ನು ತಡೆಯುವ ಭರವಸೆ ಉಲ್ಲೇಖಿಸಿದ ಜೆ.ಪಿ. ನಡ್ಡಾ, ಆರ್‌ಜೆಡಿಯ ಇಂತಹ ಭರವಸೆಗಳು ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಪಕ್ಷ ಭಾಗಿಯಾಗಿರುವುದನ್ನು ನೆನಪಿಸುತ್ತದೆ ಎಂದರು.
ಬಿಹಾರದ ಪ್ರತಿ ಕುಟುಂಬಕ್ಕೂ ಸರ್ಕಾರಿ ನೌಕರಿ ಒದಗಿಸುವ ಆರ್‌ಜೆಡಿಯ ಚುನಾವಣಾ ಭರವಸೆಯನ್ನು ಟೀಕಿಸಿದ ನಡ್ಡಾ, ಸಂಬಳ ನೀಡಲು ಹಣವನ್ನು ಎಲ್ಲಿಂದ ತರ್ತಾರೆ ಎಂದು ಲೇವಡಿ ಮಾಡಿದರು.
ಚುನಾವಣೆಯಲ್ಲಿ ಗ್ಯಾಂಗ್ ಸ್ಟರ್- ರಾಜಕಾರಣಿ ದಿವಂಗತ ಎಂಡಿ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾಬ್‌ಗೆ ಟಿಕೆಟ್ ನೀಡಿದ್ದಕ್ಕಾಗಿ ಆರ್ ಜೆಡಿ ವಿರುದ್ಧ ಗುಡುಗಿದ ಅವರು,ಇದು ಬಿಹಾರದ ಬಗ್ಗೆ ಪಕ್ಷಕ್ಕೆ ಎಷ್ಟು ಕಾಳಜಿಯಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



