ಸ್ವದೇಶಿ, ಸ್ವಾವಲಂಬನೆಗೆ ಪರ್ಯಾಯವಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್
ಜಗತ್ತು ಪರಸ್ಪರ ಅವಲಂಬನೆಯ ಮೂಲಕ ಕಾರ್ಯನಿರ್ವಹಿಸುತ್ತದೆ, ಆದರೆ. ಪರಸ್ಪರ ಅವಲಂಬನೆಯು ಅಸಹಾಯಕತೆಯಾಗಿ ಬದಲಾಗಬಾರದು.

ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ವದೇಶಿ ಮತ್ತು ಸ್ವಾವಲಂಬನೆಯ ಮಹತ್ವವನ್ನು ಗುರುವಾರ ಒತ್ತಿ ಹೇಳಿದ್ದು, ಸ್ವದೇಶಿ ಮತ್ತು ಸ್ವಾವಲಂಬನೆಗೆ ಪರ್ಯಾಯವಿಲ್ಲ ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಜಾಗತಿಕ ಪರಸ್ಪರ ಅವಲಂಬನೆ ಒಂದು ವಾಸ್ತವವಾಗಿದ್ದರೂ, ಅದು ಕಡ್ಡಾಯವಾಗಬಾರದು ಎಂದು ಹೇಳಿದ್ದಾರೆ.
ಜಗತ್ತು ಪರಸ್ಪರ ಅವಲಂಬನೆಯ ಮೂಲಕ ಕಾರ್ಯನಿರ್ವಹಿಸುತ್ತದೆ, ಆದರೆ. ಪರಸ್ಪರ ಅವಲಂಬನೆಯು ಅಸಹಾಯಕತೆಯಾಗಿ ಬದಲಾಗಬಾರದು. ನಾವು ಆತ್ಮನಿರ್ಭರರಾಗಿರಬೇಕು ಮತ್ತು ನಮ್ಮ ಸ್ವಂತ ಇಚ್ಛೆಯ ಪ್ರಕಾರ ವರ್ತಿಸಬೇಕು ಎಂದು ತಿಳಿಸಿದರು.
ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕದ ಬಗ್ಗೆ ಮಾತನಾಡಿ, ಈ ಕ್ರಮಗಳು ಭಾರತಕ್ಕೆ ಬೆದರಿಕೆಯಾಗಲ್ಲ. ಬದಲಿಗೆ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುವುದನ್ನು ನೋಡಲುಯುವಜನರು ಮತ್ತು ಕೈಗಾರಿಕಾ ನಾಯಕರ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.
ಇದೇ ವೇಳೆ ಜಾಗತಿಕ ಆರ್ಥಿಕ ಕ್ರಮದಲ್ಲಿನ ನ್ಯೂನತೆಗಳ ಕುರಿತು ಎಚ್ಚರಿಕೆ ನೀಡಿದ ಅವರು, ಹೆಚ್ಚುತ್ತಿರುವ ಅಸಮಾನತೆ, ಸಂಪತ್ತಿನ ಕೇಂದ್ರೀಕರಣ, ಪರಿಸರ ನಾಶ ವಿಚಾರವನ್ನು ಪ್ರಸ್ತಾಪಿಸಿದರು.
ನೇಪಾಳದಲ್ಲಿ ಇತ್ತೀಚೆಗೆ ನಡೆದ ಜೆನ್ ಝಡ್ ಪ್ರತಿಭಟನೆಗಳ ಬಗ್ಗೆ ಮಾತನಾಡಿ, ಈ ಪ್ರತಿಭಟನೆಗಳು ಸರ್ಕಾರದ ಹಿಂಸಾತ್ಮಕ ಅಂತ್ಯಕ್ಕೆ ಕಾರಣವಾದವು. ಇಂತಹ ಘಟನೆಗಳು ವಿದೇಶಿ ಶಕ್ತಿಗಳಿಗೆ ಮಧ್ಯಪ್ರವೇಶಿಸಲು ಅವಕಾಶ ನೀಡುತ್ತವೆ ಎಂದು ಎಚ್ಚರಿಸಿದರು.
ಹಿಂಸಾತ್ಮಕ ದಂಗೆ ಯಾವುದಕ್ಕೂ ಕಾರಣವಾಗುವುದಿಲ್ಲ. ಅವು ಕೇವಲ ಅರಾಜಕತೆಗೆ ಕಾರಣವಾಗುತ್ತವೆ. ಅಶಾಂತಿ ವಿದೇಶಿ ಶಕ್ತಿಗಳಿಗೆ ಮಧ್ಯಪ್ರವೇಶಿಸಲು ಅವಕಾಶ ನೀಡುತ್ತದೆ ಎಂದರು.
ಭಾರತದ ನೆರೆಹೊರೆಯಲ್ಲಿನ ಕ್ರಾಂತಿ ಒಳ್ಳೆಯ ಸಂಕೇತವಲ್ಲ. ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಯಾವಾಗಲೂ ಕಾನೂನು ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕು ಎಂದರು. ಅರಾಜಕತೆಯ ವ್ಯಾಕರಣವನ್ನು ನಿಲ್ಲಿಸಬೇಕು ಎಂದರು.
ಇಂತಹ ಹಿಂಸಾತ್ಮಕ ಕ್ರಾಂತಿಗಳು ಯಾವುದೇ ನಿರ್ದಿಷ್ಟ ಫಲಿತಾಂಶವನ್ನು ತರುವುದಿಲ್ಲ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಈ ಮಾರ್ಗವನ್ನು ಬಳಸುವುದು ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದರು.
ಇಲ್ಲಿಯವರೆಗಿನ ಎಲ್ಲಾ ರಾಜಕೀಯ ಕ್ರಾಂತಿಗಳ ಇತಿಹಾಸವನ್ನು ನಾವು ನೋಡಿದರೆ, ಅವುಗಳಲ್ಲಿ ಯಾವುದೂ ತಮ್ಮ ಉದ್ದೇಶವನ್ನು ಸಾಧಿಸಿಲ್ಲ. ಸರ್ಕಾರಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿನ ಎಲ್ಲಾ ಕ್ರಾಂತಿಗಳು ಮುಂಚೂಣಿ ರಾಷ್ಟ್ರಗಳನ್ನು ಬಂಡವಾಳಶಾಹಿ ರಾಷ್ಟ್ರಗಳಾಗಿ ಪರಿವರ್ತಿಸಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



