ತೆಲಂಗಾಣದಲ್ಲಿ ಮಹಾ ಶರಣಾಗತಿ: 37 ಮಾವೋವಾದಿಗಳು ಪೊಲೀಸರಿಗೆ ಶರಣು
ಶರಣಾದ ನಕ್ಸಲರಲ್ಲಿ ಮೂವರು ರಾಜ್ಯ ಸಮಿತಿ ಸದಸ್ಯರು, ಮೂವರು ವಿಭಾಗೀಯ ಸಮಿತಿ ಸದಸ್ಯರು, ಒಂಬತ್ತು ಪ್ರದೇಶ ಸಮಿತಿ ಸದಸ್ಯರು ಮತ್ತು 22 ಇತರ ಸಿಪಿಐ(ಮಾವೋವಾದಿ) ಸದಸ್ಯರು ಸೇರಿದ್ದಾರೆ.

ಹೈದರಾಬಾದ್: ರಾಜ್ಯ ಸಮಿತಿಯ ಮೂವರು ನಕ್ಸಲ್ ನಾಯಕರು ಸೇರಿದಂತೆ 37 ಮಾವೋವಾದಿಗಳು ಶನಿವಾರ ತೆಲಂಗಾಣ ಡಿಜಿಪಿ ಬಿ ಶಿವಧರ್ ರೆಡ್ಡಿ ಅವರಿಗೆ ಶರಣಾದರು.
ಶರಣಾದ ನಕ್ಸಲರಲ್ಲಿ ಮೂವರು ರಾಜ್ಯ ಸಮಿತಿ ಸದಸ್ಯರು, ಮೂವರು ವಿಭಾಗೀಯ ಸಮಿತಿ ಸದಸ್ಯರು, ಒಂಬತ್ತು ಪ್ರದೇಶ ಸಮಿತಿ ಸದಸ್ಯರು ಮತ್ತು 22 ಇತರ ಸಿಪಿಐ(ಮಾವೋವಾದಿ) ಸದಸ್ಯರು ಸೇರಿದ್ದಾರೆ ಎಂದು ಶಿವಧರ್ ರೆಡ್ಡಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯ ಸಮಿತಿಯ ಮೂವರು ಸದಸ್ಯರಾದ ಕೊಯ್ಯಡ ಸಾಂಬಯ್ಯ(49), ಅಲಿಯಾಸ್ ಆಜಾದ್, ಅಪ್ಪಾಸಿ ನಾರಾಯಣ, ಅಲಿಯಾಸ್ ರಮೇಶ್ (70), ಮತ್ತು ಮುಚ್ಚಕಿ ಸೋಮದ ಶರಣಾಗಿದ್ದಾರೆ. ಸಾಂಬಯ್ಯ ಮತ್ತು ನಾರಾಯಣ ತೆಲಂಗಾಣ ಸಮಿತಿಗೆ ಸೇರಿದವರಾಗಿದ್ದರೆ, ಸೋಮದ ಮಾವೋವಾದಿಗಳ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಭಾಗವಾಗಿದ್ದರು.
ಶರಣಾದ ಮಾವೋವಾದಿಗಳು ಒಂದು ಎಕೆ-47 ರೈಫಲ್, ಎರಡು ಎಸ್‌ಎಲ್‌ಆರ್ ರೈಫಲ್‌ಗಳು, ನಾಲ್ಕು 303 ರೈಫಲ್‌ಗಳು, ಒಂದು ಜಿ3 ರೈಫಲ್ ಮತ್ತು 346 ಸುತ್ತುಗಳ ಜೀವಂತ ಮದ್ದುಗುಂಡುಗಳನ್ನು ಹಸ್ತಾಂತರಿಸಿದ್ದಾರೆ.
ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಮುಖ್ಯವಾಹಿನಿಗೆ ಸೇರುವಂತೆ ಮಾಡಿದ ಮನವಿಗೆ ಮಾವೋವಾದಿಗಳು ಸ್ಪಂದಿಸಿದ್ದಾರೆ ಎಂದು ಶಿವಧರ್ ರೆಡ್ಡಿ ತಿಳಿಸಿದರು.
ನಿರಂತರ ಮಾವೋವಾದಿ ವಿರೋಧಿ ಕಾರ್ಯಾಚರಣೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಸಂಘಟನೆಯೊಳಗಿನ ಆಂತರಿಕ ಬಿರುಕುಗಳು ನಕ್ಸಲರು ಶರಣಾಗುವಂತೆ ಮಾಡಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



