ದೇಶ

"ದೇಶದ ಭದ್ರತೆಗೆ ಧಕ್ಕೆ ತಂದ್ರೆ ಬಿಡಲ್ಲ": ರಿಸಿನ್ ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕನಿಗೆ ಜೈಲಿನಲ್ಲಿ ಕೈದಿಗಳಿಂದ ಧರ್ಮದೇಟು; ವೈದ್ಯ ಉಗ್ರ ಆಸ್ಪತ್ರೆಗೆ ದಾಖಲು!

ಈತನನ್ನು ಬಂಧಿಸಿ ಹೈದರಾಬಾದ್​ನಿಂದ ಬಂಧಿಸಿ ಗುಜರಾತ್ನ ಸಬರಮತಿ ಜೈಲಿನಲ್ಲಿರಿಸಲಾಗಿತ್ತು. ಈತನ ದೇಶದ್ರೋಹ ಕೃತ್ಯ ತಿಳಿದ ಜೈಲಿನ ಕೈದಿಗಳು ಆಕ್ರೋಶಗೊಂಡು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

"ದೇಶದ ಭದ್ರತೆಗೆ ಧಕ್ಕೆ ತಂದ್ರೆ ಬಿಡಲ್ಲ": ರಿಸಿನ್ ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕನಿಗೆ ಜೈಲಿನಲ್ಲಿ ಕೈದಿಗಳಿಂದ ಧರ್ಮದೇಟು; ವೈದ್ಯ ಉಗ್ರ ಆಸ್ಪತ್ರೆಗೆ ದಾಖಲು!
ಉಗ್ರ ವೈದ್ಯ ಡಾ. ಅಹ್ಮದ್ — online desk
Published On :

ಅಹ್ಮದಾಬಾದ್: ರಿಸಿನ್ ಎಂಬ ರಾಸಾಯನಿಕ ಬಳಸಿ ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರ ಡಾ. ಅಹ್ಮದ್ ಗೆ ಗುಜರಾತ್ ಜೈಲಿನಲ್ಲಿ ಭರ್ಜರಿ ಧರ್ಮದೇಟು ಬಿದ್ದಿದೆ.

ಈತನನ್ನು ಬಂಧಿಸಿ ಹೈದರಾಬಾದ್​ನಿಂದ ಬಂಧಿಸಿ ಗುಜರಾತ್ನ ಸಬರಮತಿ ಜೈಲಿನಲ್ಲಿರಿಸಲಾಗಿತ್ತು. ಈತನ ದೇಶದ್ರೋಹ ಕೃತ್ಯ ತಿಳಿದ ಜೈಲಿನ ಕೈದಿಗಳು ಆಕ್ರೋಶಗೊಂಡು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿದ್ದ ಕೈದಿಗಳು ಡಾ. ಅಹ್ಮದ್ ಮೇಲೆ ದಾಳಿ ಮಾಡಿದ್ದಾರೆ. ಉಗ್ರನಿಗೆ ಥಳಿಸಿದ ಪ್ರಕರಣದ ಸಂಬಂಧ ತನಿಖೆ ಜಾರಿಯಲ್ಲಿದೆ.

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸದೇ ಇದ್ದಿದ್ದರೆ ಈತನ ಜೀವಕ್ಕೇ ಅಪಾಯ ಉಂಟಾಗುತ್ತಿತ್ತು. ಕೈದಿಗಳು ಈತನ ಮೇಲೆ ನಡೆಸಿದ ದಾಳಿಯ ತೀವ್ರತೆ ಆ ಪ್ರಮಾಣದಲ್ಲಿತ್ತು ಎಂದು ತಿಳಿದುಬಂದಿದೆ. ಸೆಲ್ ಹೊರಗೆ ನಿಂತಿದ್ದ ಕಾವಲುಗಾರರು ಗದ್ದಲ, ಈತನ ಚೀರಾಟ ಕೇಳಿದ ತಕ್ಷಣ, ಧಾವಿಸಿ ಬಂದು ದಾಳಿ ಮಾಡುತ್ತಿದ್ದವರಿಂದ ಉಗ್ರನನ್ನು ದೂರ ಎಳೆದೊಯ್ದಿದ್ದಾರೆ. ಥಳಿತದಿಂದ ಉಗ್ರ ಡಾ. ಅಹ್ಮದ್ ಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೀನಾದಿಂದ ವೈದ್ಯಕೀಯ ಕೋರ್ಸ್‌ನ ಪದವಿ ಪೂರೈಸಿರುವ ಈತ, ಭಾರತದಲ್ಲಿ ವೃತ್ತಿ ನಡೆಸಲು ಅಗತ್ಯವಿರುವ ಎಂಸಿಐ ಪರೀಕ್ಷೆ ಪಾಸು ಮಾಡುವಲ್ಲಿ ವಿಫಲನಾಗಿದ್ದ. ಹರಳೆಣ್ಣೆ ತಯಾರಿಸಲು ಬಳಸುವ ಬೀಜದಿಂದ ಎಣ್ಣೆ ತೆಗೆದ ನಂತರ ಉಳಿಯುವ ಅತ್ಯಲ್ಪ ವಿಷವನ್ನೇ ಈತ ತನ್ನ ಕೃತ್ಯಕ್ಕೆ ಬಳಸಲು ಯೋಜನೆ ರೂಪಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.