ರಾಜಸ್ಥಾನ: ಇಂಡೋ-ಪಾಕ್ ಗಡಿ ಬಳಿ ಡ್ರೋನ್ ಪತ್ತೆ; BSF ಪರಿಶೀಲನೆ, ಸ್ಥಳದಲ್ಲಿ ತೀವ್ರ ಕಟ್ಟೆಚ್ಚರ
ಗುರುವಾರ ಇಂದು ಬೆಳಿಗ್ಗೆ 9.45ರ ಸುಮಾರಿಗೆ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು ಪತ್ತೆಹಚ್ಚಿದರು.

ಜೈಪುರ: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನುಪ್‌ಗಢದ ಭಾರತ-ಪಾಕಿಸ್ತಾನ ಗಡಿಯ ಬಳಿ ಅನುಮಾನಾಸ್ಪದ ಡ್ರೋನ್‌ನಂತಹ ವಸ್ತು ಪತ್ತೆಯಾಗಿದ್ದು, ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿದ್ದಾರೆ.
ಗುರುವಾರ ಇಂದು ಬೆಳಿಗ್ಗೆ 9.45ರ ಸುಮಾರಿಗೆ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು ಪತ್ತೆಹಚ್ಚಿದರು. ಅದನ್ನು ಗಮನಿಸಿದ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅನುಪ್‌ಗಢ ಸ್ಟೇಷನ್ ಹೌಸ್ ಆಫೀಸರ್ (SHO) ಈಶ್ವರ್ ಜಂಗಿದ್ ಅವರು, ತಕ್ಷಣ ಗಡಿ ಭದ್ರತಾ ಪಡೆ (BSF)ಗೆ ಮಾಹಿತಿ ನೀಡಿ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.
ಬಿಎಸ್ಎಫ್ ವಶಕ್ಕೆ ಪಡೆದಿರುವ ಡ್ರೋನ್ 5ರಿಂದ 7 ಅಡಿ ಉದ್ದವಿದ್ದು ಬಹುತೇಕ ಹಾನಿಗೊಳಗಾಗಿದೆ. ಅದರ ಕ್ಯಾಮೆರಾ ಮಾಡ್ಯೂಲ್ ಮುರಿದಿದೆ ಎಂದು ತಿಳಿದುಬಂದಿದೆ.
ಡ್ರೋನ್ ಮೂಲ ಮತ್ತು ಉದ್ದೇಶವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಅನುಪ್‌ಗಢ ಸ್ಟೇಷನ್ ಹೌಸ್ ಆಫೀಸರ್ ಜಂಗೀದ್ ಅವರು ತಿಳಿಸಿದ್ದಾರೆ.
ನಾವು ಡ್ರೋನ್ ಅನ್ನು ವಶಪಡಿಸಿಕೊಂಡಿದ್ದೇವೆ. ಆ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳವನ್ನು ಸಹ ಕರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡ್ರೋನ್ ಅನ್ನು ಅದರ ಮೂಲ ಮತ್ತು ಉದ್ದೇಶವನ್ನು ನಿರ್ಧರಿಸಲು ವಿಧಿವಿಜ್ಞಾನ ಮತ್ತು ತಾಂತ್ರಿಕ ವಿಶ್ಲೇಷಣೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಅನುಮಾನಾಸ್ಪದ ಡ್ರೋನ್ ಗಡಿಯಾಚೆಯಿಂದ ಬಂದಿದೆಯೇ ಅಥವಾ ಯಾವುದೇ ಕಾರ್ಯಾಚರಣೆ ಸಮಯದಲ್ಲಿ ನಮ್ಮ ಸೇನಾ ಪಡೆಗಳಿಂದಲೇ ಹಾರಿಸಲಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ, ಇದಕ್ಕೆ ಪಾಕಿಸ್ತಾನ ಸಂಪರ್ಕ ಕುರಿತು ದೃಢೀಕರಿಸಲು ಸಾಧ್ಯವಿಲ್ಲ, ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ಈ ವಿಷಯವನ್ನು ಅತ್ಯಂತ ಸೂಕ್ಷ್ಮತೆಯಿಂದ ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



