Bengaluru Port ಧ್ವಂಸ ಮಾಡಿದ್ದೇವೆ: ಸಿಲ್ಕ್ ಬೋರ್ಡ್, ಗೊರಗುಂಟೆ ಪಾಳ್ಯ ನೌಕಾ ನೆಲೆಗಳಿಗೆ ಹಾನಿ ಕಂಡು ಜಗತ್ತೇ ಶಾಕ್; ಮತ್ತೆ ಅಪಹಾಸ್ಯಕ್ಕೀಡಾದ Pak!
ಇದಕ್ಕೂ ಮೊದಲು ಸ್ವತಃ ಪಾಕ್ ಪ್ರಧಾನಿ ಹಾಗೂ ಪಾಕ್ ರಕ್ಷಣಾ ಸಚಿವರು ಪಾಕ್ ಪರಾಕ್ರಮದ ಬಗ್ಗೆ ಮಾತನಾಡಿ ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೀಡಾಗಿದ್ದರು.

ಭಾರತ-ಪಾಕಿಸ್ತಾನದ ನಡುಗೆ ದಾಳಿ ಆರಂಭವಾದ ಬೆನ್ನಲ್ಲೆ ಪಾಕ್ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ನೆಟ್ಟಿಗರಿಗೆ ಭರ್ಜರಿ ಆಹಾರವಾಗತೊಡಗಿದೆ.
ಪಾಕಿಸ್ತಾನದ ಟ್ವಿಟರ್ ಖಾತೆಯ ಮೂಲಕ ವ್ಯಕ್ತಿಯೋರ್ವ ಭಾರತದ ದಾಳಿಗೆ ಪಾಕ್ ಸಮರ್ಥ ಉತ್ತರ ಕೊಟ್ಟಿದ್ದು, ಬೆಂಗಳೂರಿನ ಪೋರ್ಟ್ ಗಳನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಿರುವುದು ಇಡೀ ಸಾಮಾಜಿಕ ಜಾಲತಾಣವನ್ನು ನಗೆಗಡಲಲ್ಲಿ ತೇಲಿಸಿದೆ.
Bangalore Port destroyed By Pakistan Navy ಎಂದು ಬರೆದು ಪಾಕ್ ರಾಷ್ಟ್ರಧ್ವಜ ಚಿಹ್ನೆಯನ್ನು ಹಾಕಿ ಫವಾದ್ ಉರ್ ರೆಹಮಾನ್ ಎಂಬ ವ್ಯಕ್ತಿ ಪೋಸ್ಟ್ ಮಾಡಿದ್ದಾನೆ. ಈತನ ಪೋಸ್ಟ್ ಜಾಲತಾಣದಾದ್ಯಂತ ಅಪಹಾಸ್ಯಕ್ಕೆ ಗುರಿಯಾಗಿದ್ದು, ಭರ್ಜರಿ ಟ್ರೋಲ್ ಆಗುತ್ತಿದೆ.ಈ ಪೋಸ್ಟ್ನ ಸ್ಕ್ರೀನ್ ಶಾಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೊರ್ಕಿಸ್ತಾನಕ್ಕೆ ಮಾತ್ರ ಗೋಚರಿಸುವ ಬೆಂಗಳೂರಿನ ಅದೃಶ್ಯದ ಬಂದರನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ವಿಜ್ಞಾನಿಗಳಿಗೆ ಧನ್ಯವಾದಗಳು ಎಂದು ಒಬ್ಬರು ಹಾಸ್ಯ ಮಾಡಿದ್ದರೆ. ಅರೆರೆ ಬೆಂಗಳೂರಿನಲ್ಲಿ ಬಂದರು ಇದ್ಯಾ? ನಮ್ಮಿಂದ ಯಾಕೆ ಪೋರ್ಟ್ ನ್ನು ಮರೆಮಾಚಲಾಯ್ತು ಎಂದು ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
"ಬೆಂಗಳೂರು ಬಂದರನ್ನು ನಾಶಪಡಿಸಿದ್ದಕ್ಕಾಗಿ ಪಾಕಿಸ್ತಾನಕ್ಕೆ ಅಭಿನಂದನೆಗಳು ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಗೋರಗುಂಟೆಪಾಳ್ಯ, ಕೆಂಗೇರಿ ಮತ್ತು ವೈಟ್ಫೀಲ್ಡ್ ನೌಕಾ ನೆಲೆಗಳಲ್ಲಿನ ಸುಧಾರಿತ ರಕ್ಷಣಾ ಪ್ರತಿಬಂಧಕ ವ್ಯವಸ್ಥೆಗಳನ್ನು ಅವರು ಹೇಗೆ ಭೇದಿಸಿದ್ದಾರೆ ಎಂಬುದನ್ನು ನೋಡಿ ಇಡೀ ಜಗತ್ತು ಆಘಾತಕ್ಕೊಳಗಾಗಿದೆ. ಬೆಂಗಳೂರು ಸುರಕ್ಷಿತವಾಗಿರಲಿ" ಎಂದು ಮತ್ತೊಬ್ಬರು ಪಾಕಿಸ್ತಾನವನ್ನು ಭರ್ಜರಿಯಾಗಿ ಟ್ರೋಲ್ ಮಾಡಿದ್ದಾರೆ.
ಇದಕ್ಕೂ ಮೊದಲು ಸ್ವತಃ ಪಾಕ್ ಪ್ರಧಾನಿ ಹಾಗೂ ಪಾಕ್ ರಕ್ಷಣಾ ಸಚಿವರು ಪಾಕ್ ಪರಾಕ್ರಮದ ಬಗ್ಗೆ ಮಾತನಾಡಿ ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೀಡಾಗಿದ್ದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ರಫೇಲ್ ಜೆಟ್ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೆ ನೀಡಿರುವುದು ಅಪಹಾಸ್ಯಕ್ಕೆ ಗುರಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


