ದೇಶ

''ವಿರಾಟ್ ಕೊಹ್ಲಿಗಿಂತ, ಕೊಹ್ಲಿ ಅಭಿಮಾನಿಗಳು ದೊಡ್ಡ ಜೋಕರ್ ಗಳು'': ರಾಹುಲ್ ವೈದ್ಯ ಲೇವಡಿ!

ಹರ್ದವಿಂದರ್ ಸಂದು ಅವರ 'ಸಾರಿ ಉಮರ್ ಮೇನ್ ಜೋಕರ್' ಹಾಡನ್ನು ಹಾಡಿದ್ದಾರೆ. ನಿನ್ನೆಯಿಂದ ಇದು ನನ್ನ ನೆಚ್ಚಿನ ಹಾಡು ಎಂದು ಬರೆದುಕೊಂಡಿದ್ದಾರೆ.

''ವಿರಾಟ್ ಕೊಹ್ಲಿಗಿಂತ, ಕೊಹ್ಲಿ ಅಭಿಮಾನಿಗಳು ದೊಡ್ಡ ಜೋಕರ್ ಗಳು'': ರಾಹುಲ್ ವೈದ್ಯ ಲೇವಡಿ!
ರಾಹುಲ್ ವೈದ್ಯ, ವಿರಾಟ್ ಕೊಹ್ಲಿ
Published On :

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು "ಜೋಕರ್" ಎಂದು ಕರೆದು ವ್ಯಾಪಕ ಟೀಕೆ, ಟ್ರೋಲ್ ಗಳಿಗೆ ಗುರಿಯಾಗಿದ್ದ ಗಾಯಕ ರಾಹುಲ್ ವೈದ್ಯ, ಇದೀಗ ವಿರಾಟ್ ಕೊಹ್ಲಿ ಗಿಂತ ಕೊಹ್ಲಿ ಅಭಿಮಾನಿಗಳು ದೊಡ್ಡ ಜೋಕರ್ ಗಳು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಕೊಹ್ಲಿ ಅಭಿಮಾನಿಗಳು ತನ್ನನ್ನು ಮಾತ್ರ ನಿಂದಿಸುತ್ತಿಲ್ಲ, ನನ್ನ ಪತ್ನಿ ಮತ್ತು ಸಹೋದರಿಯನ್ನೂ ನಿಂದಿಸುತ್ತಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈಗ ನನ್ನನ್ನು ನಿಂದಿಸಿದರೆ fine. ಆದ್ರೆ ನನ್ನ ಹೆಂಡತಿ, ತಂಗಿಯನ್ನು ನಿಂದಿಸುತ್ತಿದ್ದೀರಾ. ಇದರಲ್ಲಿ ಅವರೇನೂ ಮಾಡಿಲ್ಲ. ಆದ್ದರಿಂದ ನಾನು ಹೇಳಿದ್ದು ಸರಿಯಾಗಿದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಜೋಕರ್ ಗಳು ಎಂದು ಬರೆದಿದ್ದಾರೆ.

ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಹುಲ್ ವೈದ್ಯ, ಹರ್ದವಿಂದರ್ ಸಂದು ಅವರ 'ಸಾರಿ ಉಮರ್ ಮೇನ್ ಜೋಕರ್' ಹಾಡನ್ನು ಹಾಡಿದ್ದಾರೆ. ನಿನ್ನೆಯಿಂದ ಇದು ನನ್ನ ನೆಚ್ಚಿನ ಹಾಡು ಎಂದು ಬರೆದುಕೊಂಡಿದ್ದಾರೆ.

ಅವನಿತ್ ಕೌರ್ ಫೋಟೋಗೆ ಲೈಕ್ ಕೊಟ್ಟ ಕೊಹ್ಲಿ:

ಬಾಲಿವುಡ್ ನಟಿ ಅವನಿತ್ ಕೌರ್ ಅವರ ಅಭಿಮಾನಿಗಳು ಫೋಸ್ಟ್ ಮಾಡಿದ್ದ ನಟಿಯ ಫೋಟೋಗೆ ವಿರಾಟ್ ಲೈಕ್ ಕೊಟ್ಟಿದ್ದರು. ಇದು ಸುದ್ದಿಯಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ವಿರಾಟ್ ಕೊಹ್ಲಿ, ನಾನು ಲೈಕ್ ಕೊಟ್ಟಿರುವುದಲ್ಲ. ಇನ್ ಸ್ಟಾಗ್ರಾಮ್ ಅಲ್ಗಾರಿದಮ್ ನಿಂದ ಆದ ತಪ್ಪು ಎಂದು ಹೇಳಿದ್ದರು.

ರಾಹುಲ್ ವೈದ್ಯನನ್ನು ಬ್ಲಾಕ್ ಮಾಡಿದ್ದ ಕೊಹ್ಲಿ:

ಈ ಸ್ಪಷ್ಟನೆಯನ್ನು ಟೀಕಿಸಿದ್ದ ರಾಹುಲ್ ವೈದ್ಯ ಅವರನ್ನು ಕೊಹ್ಲಿ ಇನ್ ಸ್ಟಾಗ್ರಾಮ್ ನಲ್ಲಿ ಬ್ಲಾಕ್ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ರಾಹುಲ್, ಕೊಹ್ಲಿ ಮತ್ತು ಅವರ ಅಭಿಮಾನಿ ಬಳಗವನ್ನು ಜೋಕರ್ ಎಂದು ಕರೆದಿದ್ದರು.

Story image

ಇದು ಇನ್ ಸ್ಟಾಗ್ರಾಮ್ ನ ತಪ್ಪು: ಇವತ್ತಿನಿಂದ ನಾನು ಯಾವ ಹುಡುಗಿಯ ಫೋಟೋಗೂ ಲೈಕ್ ಕೊಡಬಹುದು. ಹುಡುಗಿಯರೇ ಇದರಿಂದ ಬೇಸರ ಮಾಡಿಕೊಳ್ಳಬೇಡಿ. ಇದು ನನ್ನಿಂದ ಆದ ತಪ್ಪಲ್ಲ. ಇದು ಇನ್ ಸ್ಟಾಗ್ರಾಂ ಅಲ್ಗಾರಿದಮ್ ನಿಂದ ಆದ ತಪ್ಪು ಎಂದು ಕೊಹ್ಲಿಯನ್ನು ಲೇವಡಿ ಮಾಡಿದ್ದರು.

ನನ್ನನ್ನು ಕೊಹ್ಲಿ ಬ್ಲಾಕ್ ಮಾಡಿದ್ದಾರೆ. ಆದರೆ ಬ್ಲಾಕ್ ಮಾಡಿರುವುದು ಕೊಹ್ಲಿ ಎಂದು ನಾನು ಹೇಳೋದಿಲ್ಲ ಸ್ನೇಹಿತರೇ .. ಇದು ಇನ್ ಸ್ಟಾಗ್ರಾಮ್ ನ ತಪ್ಪು ಎಂದು ರಾಹುಲ್ ವೈದ್ಯ, ಕೊಹ್ಲಿಯ ಕಾಲೆಳೆದಿದ್ದರು.

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.