ದೇಶ

'ಬಿಜೆಪಿ ಮಾತು ಕೇಳಿ ನಿಮ್ಮ ನಡುವೆ ಒಡಕು ಸೃಷ್ಟಿಸಬೇಡಿ': ಮುರ್ಷಿದಾಬಾದ್‌ನಲ್ಲಿ ಮಮತಾ ಮನವಿ

"ಬಾಬರಿ ಮಸೀದಿಯನ್ನು ಕೆಡವಿದಾಗಲೂ ನಾನು ಕಂಡ ಒಂದು ವಿಷಯವೆಂದರೆ ಮುರ್ಷಿದಾಬಾದ್‌ನಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ" ಎಂದು ಮಮತಾ ತಿಳಿಸಿದರು.

'ಬಿಜೆಪಿ ಮಾತು ಕೇಳಿ ನಿಮ್ಮ ನಡುವೆ ಒಡಕು ಸೃಷ್ಟಿಸಬೇಡಿ': ಮುರ್ಷಿದಾಬಾದ್‌ನಲ್ಲಿ ಮಮತಾ ಮನವಿ
ಮಮತಾ ಬ್ಯಾನರ್ಜಿ
Published On :

ಮುರ್ಷಿದಾಬಾದ್‌: ಮುರ್ಷಿದಾಬಾದ್‌ನ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಎರಡನೇ ದಿನವಾದ ಮಂಗಳವಾರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಹಿಂಸಾಚಾರ ನಡೆಸಲು ಹೊರಗಿನಿಂದ ರಾಜ್ಯಕ್ಕೆ ಗಲಭೆಕೋರರನ್ನು ಕರೆತರಲಾಗುತ್ತಿದೆ ಎಂದು ಆರೋಪಿಸಿದರು.

"ಬಿಜೆಪಿ ಅಥವಾ ಧಾರ್ಮಿಕ ಮೂಲಭೂತವಾದಿಗಳ" ಮಾತುಗಳನ್ನು ಕೇಳುವ ಮೂಲಕ ನಿಮ್ಮ ನಿಮ್ಮಲ್ಲೇ ಒಡಕು ಸೃಷ್ಟಿಸಬೇಡಿ ಎಂದು ಪಶ್ಚಿಮ ಬಂಗಾಳ ಸಿಎಂ ಜನರಿಗೆ ಮನವಿ ಮಾಡಿದರು.

"ಗಲಭೆಕೋರರನ್ನು ಹೊರಗಿನಿಂದ ಬಂಗಾಳಕ್ಕೆ ಕರೆತರಲಾಗುತ್ತಿದೆ, ಅವರಿಂದ ಪ್ರಚೋದನೆಗೆ ಒಳಗಾಗಬೇಡಿ... ಬಿಜೆಪಿ ಅಥವಾ ಯಾವುದೇ ಧಾರ್ಮಿಕ ಮೂಲಭೂತವಾದಿಗಳ ಮಾತುಗಳನ್ನು ಕೇಳಿ ನಿಮ್ಮಲ್ಲೇ ಒಡಕು ಸೃಷ್ಟಿಸಬೇಡಿ" ಎಂದು ಅವರು ಮುರ್ಷಿದಾಬಾದ್‌ನಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

"ಬಾಬರಿ ಮಸೀದಿಯನ್ನು ಕೆಡವಿದಾಗಲೂ ನಾನು ಕಂಡ ಒಂದು ವಿಷಯವೆಂದರೆ ಮುರ್ಷಿದಾಬಾದ್‌ನಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ" ಎಂದು ಮಮತಾ ತಿಳಿಸಿದರು.

ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಜನರು ಹಿಂಸಾಚಾರದಲ್ಲಿ ತೊಡಗಬಾರದು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

"ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ" ಎಂದು ಬ್ಯಾನರ್ಜಿ ಪ್ರತಿಪಾದಿಸಿದರು.

ಮಮತಾ ಬ್ಯಾನರ್ಜಿ ಅವರು ಪ್ರಸ್ತುತ ಜಿಲ್ಲೆಯ ಗಲಭೆ ಪೀಡಿತ ಪ್ರದೇಶಗಳ ಭೇಟಿಗಾಗಿ ಎರಡು ದಿನ ಮುರ್ಷಿದಾಬಾದ್‌ನಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.