'ನಾವು ನಮ್ಮ ಸೇನೆಯನ್ನು ದ್ವೇಷಿಸುತ್ತೇವೆ' ಎಂದ ಪಾಕ್ ಹುಡುಗರಿಗೆ ಗಾಯಕ ಅದ್ನಾನ್ ಸಮಿ ಹೇಳಿದ್ದು ಏನು?
ಅಜರ್‌ಬೈಜಾನ್‌ನ ಬಾಕು ಪ್ರವಾಸದ ಸಮಯದಲ್ಲಿ ಅವರು ಪಾಕಿಸ್ತಾನದ ಯುವಕರ ಗುಂಪಿನೊಂದಿಗೆ ನಡೆಸಿದ ಸಂವಾದವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ನವದೆಹಲಿ: ಪಾಕಿಸ್ತಾನದ ಸೇನೆಯು ಉತ್ತಮ ಪಡೆ ಅಲ್ಲ. ನಾನು ಆ ದೇಶದಿಂದ ಹೊರಬರಲು ಅದು ಪ್ರೇರೇಪಿಸಿತು ಎಂದು ಖ್ಯಾತ ಗಾಯಕ ಅದ್ನಾನ್ ಸಾಮಿ ಬಹಿರಂಗಪಡಿಸಿದ್ದಾರೆ.
ಅಜರ್‌ಬೈಜಾನ್‌ನ ಬಾಕು ಪ್ರವಾಸದ ಸಮಯದಲ್ಲಿ ಅವರು ಪಾಕಿಸ್ತಾನದ ಯುವಕರ ಗುಂಪಿನೊಂದಿಗೆ ನಡೆಸಿದ ಸಂವಾದವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
"ಬಾಕುವಿನ ಸುಂದರ ಬೀದಿಗಳಲ್ಲಿ ನಡೆಯುವಾಗ ಕೆಲವು ಪಾಕಿಸ್ತಾನಿ ಹುಡುಗರನ್ನು ಭೇಟಿಯಾದ್ದೇನು. "ಅವರು ಹೇಳಿದರು, "ಸರ್, ನೀವು ತುಂಬಾ ಅದೃಷ್ಟವಂತರು. ನೀವು ಒಳ್ಳೆಯ ಸಮಯದಲ್ಲಿ ಪಾಕಿಸ್ತಾನವನ್ನು ತೊರೆದಿದ್ದೀರಿ. ನಾವು ಕೂಡಾ ನಮ್ಮ ಪೌರತ್ವವನ್ನು ಬದಲಾಯಿಸಲು ಬಯಸುತ್ತೇವೆ. ನಾವು ನಮ್ಮ ಸೈನ್ಯವನ್ನು ದ್ವೇಷಿಸುತ್ತೇವೆ. ಅವರು ನಮ್ಮ ದೇಶವನ್ನು ನಾಶಪಡಿಸಿದ್ದಾರೆ! ಎಂದು ನನಗೆ ಹೇಳಿದರು. 'ನನಗೆ ಇದು ಬಹಳ ಹಿಂದೆಯೇ ತಿಳಿದಿತ್ತು! ಎಂದು ನಾನು ಉತ್ತರಿಸಿದೆ ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನಿ ತಂದೆ ಮತ್ತು ಭಾರತೀಯ ತಾಯಿಗೆ ಯುಕೆಯಲ್ಲಿ ಜನಿಸಿದ ಸಾಮಿ, 2001 ರಲ್ಲಿ ಭಾರತದಲ್ಲಿ ವಾಸಿಸಲು ಪ್ರಾರಂಭಿಸಿದರು. ಅವರು ಮೊದಲು ಸಂದರ್ಶಕರ ವೀಸಾ ಮತ್ತು ದ್ವಿಪೌರತ್ವವನ್ನು (ಪಾಕಿಸ್ತಾನ ಮತ್ತು ಕೆನಡಾ) ಹೊಂದಿದ್ದರು. 2016 ರಲ್ಲಿ ಅವರು ಭಾರತೀಯ ಪ್ರಜೆಯಾಗುತ್ತಾರೆ. ಸಾಮಿ ಇತರರಂತೆ ಪಹಲ್ಗಾಮ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ಮಾನವೀಯತೆಯ ವಿರುದ್ಧದ ಭಯಾನಕ ಅಪರಾಧ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



