ಮಹಾಯುತಿಯಲ್ಲಿ ಭಿನ್ನಮತ: ಅಜಿತ್ ಪವಾರ್ ಸಚಿವಾಲಯ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿ- ಶಿವಸೇನಾ ಸಚಿವ ಟೀಕೆ
ಹಂಚಿಕೆಯಾದ ಹಣವನ್ನು ಆಗಾಗ ಡೈವರ್ಟ್ ಮಾಡುವ ಬದಲು ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆಯನ್ನು ಮುಚ್ಚುವುದು ಉತ್ತಮ ಎಂದು ಶಿವಸೇನೆ ಸಚಿವರು ಕಿಡಿ ಕಾರಿದ್ದಾರೆ.

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಜಿತ್ ಪವಾರ್ ನೇತೃತ್ವದ ಹಣಕಾಸು ಇಲಾಖೆಯು ನನ್ನ ಗಮನಕ್ಕೆ ತರದೇ ನನ್ನ ಇಲಾಖೆಯಿಂದ ಹಣವನ್ನು "ಅಕ್ರಮ"ವಾಗಿ ಡೈವರ್ಟ್ ಮಾಡಿದೆ ಎಂದು ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಸಚಿವ ಮತ್ತು ಶಿವಸೇನಾ ನಾಯಕ ಸಂಜಯ್ ಶಿರ್ಸತ್ ಅವರು ಶನಿವಾರ ಆರೋಪಿಸಿದ್ದಾರೆ.
ಹಂಚಿಕೆಯಾದ ಹಣವನ್ನು ಆಗಾಗ ಡೈವರ್ಟ್ ಮಾಡುವ ಬದಲು ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆಯನ್ನು ಮುಚ್ಚುವುದು ಉತ್ತಮ ಎಂದು ಶಿವಸೇನೆ ಸಚಿವರು ಕಿಡಿ ಕಾರಿದ್ದಾರೆ.
ಸಚಿವರ ಈ ಆಕ್ರೋಶ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದು.
"ಅವರು ಈ ಹಿಂದೆ (ಬಜೆಟ್ ಸಮಯದಲ್ಲಿ) ನನ್ನನ್ನು ಕತ್ತಲೆಯಲ್ಲಿಟ್ಟು ನನ್ನ ಇಲಾಖೆಯಿಂದ 7,000 ಕೋಟಿ ರೂ.ಗಳನ್ನು ಬೇರೆಡೆಗೆ ತಿರುಗಿಸಿದ್ದರು. ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆ ಕಾರ್ಯನಿರ್ವಹಿಸುವುದನ್ನು ಬಯಸದಿದ್ದರೆ ಅಥವಾ ಹಣವನ್ನು ಖರ್ಚು ಮಾಡಲು ಬಯಸದಿದ್ದರೆ, ಅವರು ಈ ಇಲಾಖೆಯನ್ನು ಮುಚ್ಚಬೇಕು. ಇದು ಅನ್ಯಾಯ. ಇದರ ಹಿಂದಿನ ಕಾರಣ ನನಗೆ ಗೊತ್ತಿಲ್ಲ" ಎಂದು ಶಿರ್ಸತ್ ಛತ್ರಪತಿ ಸಂಭಾಜಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಾಮಾಜಿಕ ನ್ಯಾಯ ಇಲಾಖೆಗೆ ಹಂಚಿಕೆಯಾಗಿದ್ದ 413.30 ಕೋಟಿ ರೂ.ಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ವರದಿಯಾದ ಬಗ್ಗೆ ಶಿರ್ಸತ್ ಆಕ್ರೋಶ ವ್ಯಕ್ತಪಡಿಸಿದರು. ಶಿವಸೇನಾ ಶಾಸಕರು ಈ ವಿಷಯವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
"ಹಣವನ್ನು ಈ ರೀತಿ ಡೈವರ್ಟ್ ನಾಡುವುದು ಕಾನೂನುಬದ್ಧವಲ್ಲ. ಹಣಕಾಸು ಇಲಾಖೆಯ ಈ ಉದ್ಧಟತನ ತಪ್ಪು. ಅವರ ಕ್ರಮ ತಪ್ಪು. ನಾನು ಅದನ್ನು ವಿರೋಧಿಸುತ್ತೇನೆ" ಎಂದು ಶಿವಸೇನೆ ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



