'ಭಾವನಾತ್ಮಕ ಮಾತುಕತೆ' ನಡೆಯುತ್ತಿದೆ: ರಾಜ್, ಉದ್ಧವ್ ಮೈತ್ರಿ ವದಂತಿ ಬಗ್ಗೆ ಸಂಜಯ್ ರಾವತ್
"ಮೈತ್ರಿ ಘೋಷಣೆಯಾಗಿಲ್ಲ. ಪ್ರಸ್ತುತ ಭಾವನಾತ್ಮಕ ಮಾತುಕತೆಗಳು ನಡೆಯುತ್ತಿವೆ" ಎಂದು ರಾವತ್ ತಿಳಿಸಿದ್ದಾರೆ.

ಮುಂಬೈ: ಶಿವಸೇನೆ(ಯುಬಿಟಿ) ಮತ್ತು ಎಂಎನ್ಎಸ್ ನಡುವೆ ಮೈತ್ರಿ ಘೋಷಣೆಯಾಗಿಲ್ಲ. ಆದರೆ ಇಬ್ಬರ ನಡುವೆ "ಭಾವನಾತ್ಮಕ ಮಾತುಕತೆ" ನಡೆಯುತ್ತಿದೆ ಎಂದು ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ.
ಇಂದು ವರದಿಗಾರರೊಂದಿಗೆ ಮಾತನಾಡಿದ ರಾವತ್, ಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಅಧ್ಯಕ್ಷ ಮತ್ತು ಸೋದರಸಂಬಂಧಿ ರಾಜ್ ಠಾಕ್ರೆ ಅವರೊಂದಿಗೆ ಮೈತ್ರಿಗೆ ಯಾವುದೇ ಪೂರ್ವಭಾವಿ ಷರತ್ತು ವಿಧಿಸಿಲ್ಲ ಎಂದು ಹೇಳಿದರು.
"ಮೈತ್ರಿ ಘೋಷಣೆಯಾಗಿಲ್ಲ. ಪ್ರಸ್ತುತ ಭಾವನಾತ್ಮಕ ಮಾತುಕತೆಗಳು ನಡೆಯುತ್ತಿವೆ" ಎಂದು ರಾವತ್ ತಿಳಿಸಿದ್ದಾರೆ.
"ಅವರು (ರಾಜ್ ಮತ್ತು ಉದ್ಧವ್) ಕುಟುಂಬ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಾರೆ. ಅವರು ಸಹೋದರರು" ಎಂದು ರಾಜ್ಯಸಭಾ ಸದಸ್ಯ ಹೇಳಿದ್ದಾರೆ.
ವಾರಗಳ ಹಿಂದೆ ರೆಕಾರ್ಡ್ ಮಾಡಲಾಗಿದ್ದ ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ರಾಜ್ ಠಾಕ್ರೆ ಅವರು, ಅವಿಭಜಿತ ಶಿವಸೇನೆಯಲ್ಲಿ ಉದ್ಧವ್ ಅವರೊಂದಿಗೆ ಕೆಲಸ ಮಾಡುವಾಗ ತಮಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ ನಂತರ, ಸೌಹಾರ್ದತೆಯ ಬಗ್ಗೆ ಗುಸುಗುಸು ಪ್ರಾರಂಭವಾಗಿದೆ.
ಆದಾಗ್ಯೂ, ರಾಜ್ ಠಾಕ್ರೆ ಅವರ ಹೇಳಿಕೆಗಳನ್ನು ಜನರು ತುಂಬಾ ಓದುತ್ತಿದ್ದಾರೆ ಎಂದು ಎಂಎನ್‌ಎಸ್‌ನ ಮುಂಬೈ ಅಧ್ಯಕ್ಷ ಮತ್ತು ಪಕ್ಷದ ವಕ್ತಾರ ಸಂದೀಪ್ ದೇಶಪಾಂಡೆ ಹೇಳಿದ್ದಾರೆ.
ಚುನಾವಣಾ ಮೈತ್ರಿ ಬಹಳ ದೂರದ ಮಾತು. ಆದರೆ ಮರಾಠಿ ಭಾಷೆ ಮತ್ತು ಜನರಿಗಾಗಿ ಶಿವಸೇನೆ(ಯುಬಿಟಿ) ಎಂಎನ್‌ಎಸ್‌ನ ಆಂದೋಲನವನ್ನು ಬೆಂಬಲಿಸಬೇಕು ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



