ದೇಶ

ಭಾರತ-ಪಾಕ್ ಉದ್ವಿಗ್ನತೆ: ರಷ್ಯಾದ 'ವಿಜಯ ದಿನ ಪರೇಡ್'ನಲ್ಲಿ ರಾಜನಾಥ್ ಸಿಂಗ್ ಸಹ ಭಾಗವಹಿಸಲ್ಲ!

ಮೇ 9ರಂದು ಮಾಸ್ಕೋದಲ್ಲಿ ರಷ್ಯಾ ನಡೆಯಲಿರುವ 'ವಿಜಯ ದಿನಾಚರಣೆ'ಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸುತ್ತಿಲ್ಲ.

ಭಾರತ-ಪಾಕ್ ಉದ್ವಿಗ್ನತೆ: ರಷ್ಯಾದ 'ವಿಜಯ ದಿನ ಪರೇಡ್'ನಲ್ಲಿ ರಾಜನಾಥ್ ಸಿಂಗ್ ಸಹ ಭಾಗವಹಿಸಲ್ಲ!
ರಾಜನಾಥ್ ಸಿಂಗ್
Published On :

ನವದೆಹಲಿ: ಮೇ 9ರಂದು ಮಾಸ್ಕೋದಲ್ಲಿ ರಷ್ಯಾ ನಡೆಯಲಿರುವ 'ವಿಜಯ ದಿನಾಚರಣೆ'ಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸುತ್ತಿಲ್ಲ. ಅವರ ಸ್ಥಾನದಲ್ಲಿ ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್ ಅಲ್ಲಿ ಭಾರತವನ್ನು ಪ್ರತಿನಿಧಿಸಬಹುದು.

ಅಧಿಕೃತ ಮೂಲಗಳು ಶನಿವಾರ ಈ ಮಾಹಿತಿಯನ್ನು ನೀಡಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಮೇ 9ರಂದು ಮಾಸ್ಕೋದಲ್ಲಿ ನಡೆಯಲಿರುವ ಸಮಾರಂಭಕ್ಕೆ ರಕ್ಷಣಾ ಖಾತೆ ರಾಜ್ಯ ಸಚಿವ ಸೇಠ್ ಅವರನ್ನು ಕಳುಹಿಸುವ ಸಾಧ್ಯತೆ ಇದೆ.

ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ಸೋವಿಯತ್ ಒಕ್ಕೂಟದ ವಿಜಯದ 80ನೇ ವರ್ಷಾಚರಣೆಯನ್ನು ಗುರುತಿಸಲು 'ವಿಜಯ ದಿನದ ಪರೇಡ್'ಗೆ ರಷ್ಯಾ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿತ್ತು. ಆದರೆ ಸಿಂಗ್ ಅದರಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಲಾಯಿತು. ಆದರೆ ಈಗ ಸೇಠ್ ಅವರು ಪರೇಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ 'ವಿಕ್ಟರಿ ಡೇ ಪೆರೇಡ್'ನಲ್ಲಿ ಭಾಗವಹಿಸಲು ರಷ್ಯಾ ಅನೇಕ ಸ್ನೇಹಪರ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದೆ. ಪ್ರಧಾನಿ ಮೋದಿ ಕಳೆದ ವರ್ಷ ಎರಡು ಬಾರಿ ರಷ್ಯಾಕ್ಕೆ ಭೇಟಿ ನೀಡಿ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವಾರ್ಷಿಕ ಶೃಂಗಸಭೆ ಮತ್ತು ಕಜನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ವರ್ಷ ರಷ್ಯಾದ ಅಧ್ಯಕ್ಷರು ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.