ಹಣ ಅಥವಾ ಉದ್ಯೋಗ ಬೇಡ, ನನ್ನ ಪತಿಗೆ ಕೇವಲ ಹುತಾತ್ಮ ಸ್ಥಾನಮಾನ ನೀಡಿ: ಪಹಲ್ಗಾಮ್ ದಾಳಿಗೆ ಬಲಿಯಾದ ಶುಭಂ ಪತ್ನಿ!
ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯಲ್ಲಿ ಬಲಿಯಾದವರಲ್ಲಿ 31 ವರ್ಷದ ಶುಭಂ ದ್ವಿವೇದಿ ಕೂಡ ಸೇರಿದ್ದಾರೆ.

ಕಾನ್ಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದು 10 ದಿನ ಕಳೆದರೂ ಇಲ್ಲಿಯವರೆಗೂ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ದಾಳಿಯಲ್ಲಿ ಬಲಿಯಾದ ಉತ್ತರ ಪ್ರದೇಶದ ಶುಭಂ ದ್ವಿವೇದಿ ಪತ್ನಿ ಅಶಾನ್ಯಾ ಹೇಳಿದ್ದಾರೆ.
ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯಲ್ಲಿ ಬಲಿಯಾದವರಲ್ಲಿ 31 ವರ್ಷದ ಶುಭಂ ದ್ವಿವೇದಿ ಕೂಡ ಸೇರಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಅಶಾನ್ಯಾ, ನಾನು ಉದ್ಯೋಗ ಅಥವಾ ಪರಿಹಾರವನ್ನು ಬಯಸುತ್ತಿಲ್ಲ, ಆದರೆ ನನ್ನ ಪತಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದು ಬಯಸುತ್ತೇನೆ ಎಂದರು.
ಶುಭಂಗೆ ಹುತಾತ್ಮ ಸ್ಥಾನಮಾನ ಸಿಕ್ಕಿಲ್ಲ ಅಥವಾ ಹತ್ಯೆಗೆ ಕಾರಣರಾದ ಭಯೋತ್ಪಾದಕರನ್ನು ಸರ್ಕಾರ ನಿರ್ಮೂಲನೆ ಮಾಡಿಲ್ಲ."ನನಗೆ ಕೆಲಸ ಅಥವಾ ಹಣ ಬೇಡ. ನನ್ನ ಪತಿಗೆ ಹುತಾತ್ಮನ ಸ್ಥಾನಮಾನ ಮಾತ್ರ ಬೇಕು. ಈ ನೋವನ್ನು ನಾನು ನನ್ನ ಜೀವನದುದ್ದಕ್ಕೂ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.
ಮನೆಯಿಂದ ಹೊಗಲು ಭಯಪಡುತ್ತಿರುವ ಅಶಾನ್ಯಾ, ಮನೆಯ ಕೊಠಡಿಯಲ್ಲಿ ಶುಭಂ ಫೋಟೋ ಮತ್ತು ದಾಳಿಯ ಸಮಯದಲ್ಲಿ ಆತ ಧರಿಸಿದ್ದ ಶರ್ಟ್ ನೋಡುತ್ತಲೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.ದಾಳಿಯ ಆಘಾತವನ್ನು ನೆನಪಿಸಿಕೊಂಡ ಅವರು ಟೈರ್ ಸಿಡಿಯುವ ಅಥವಾ ದೊಡ್ಡ ಶಬ್ದವೂ ನನ್ನನ್ನು ನಡುಗಿಸುತ್ತದೆ ಎಂದು ಹೇಳಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚಿಗೆ ಶುಭಂ ದ್ವಿವೇದಿ ಅವರ ಕುಟುಂಬವನ್ನು ಭೇಟಿಯಾದಾಗ, ಆಶಾನ್ಯಾ ಬೇಡಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು. ಸಂಸತ್ತಿನಲ್ಲೂ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ರಾಹುಲ್ ಭರವಸೆ ನೀಡಿದ್ದಾರೆ ಎಂದು ಆಶಾನ್ಯಾ ಪಿಟಿಐಗೆ ತಿಳಿಸಿದರು.
ಹತ್ಯೆಯ ಹಿಂದೆ ಭಯೋತ್ಪಾದಕರ ವಿರುದ್ಧ ಸೂಕ್ತ ಮತ್ತು ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು ಮತ್ತೆ ಎಂದಾದರೂ ಕಾಶ್ಮೀರಕ್ಕೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತೀರಾ ಎಂದು ಕೇಳಿದಾಗ, "ಎಂದಿಗೂ ಇಲ್ಲ. ಒಮ್ಮೆಯೂ ಅಲ್ಲಿಗೆ ಹೋಗಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



