ಪಹಲ್ಗಾಮ್ ದಾಳಿಗೂ ಮುನ್ನ ಜಮ್ಮು ಮತ್ತು ಕಾಶ್ಮೀರದ 3 ಇತರ ತಾಣಗಳು ಭಯೋತ್ಪಾದಕರ ಹಿಟ್ ಲಿಸ್ಟ್ ನಲ್ಲಿ!
ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರು ಏಪ್ರಿಲ್ 15 ರಂದು ಪಹಲ್ಗಾಮ್ ತಲುಪಿದರು ಮತ್ತು ಸುಂದರವಾದ ಬೈಸರನ್ ಕಣಿವೆ ಸೇರಿದಂತೆ ಕನಿಷ್ಠ ನಾಲ್ಕು ಸ್ಥಳಗಳನ್ನು ಉಗ್ರರು ತಮ್ಮ ಹಿಟ್ ಲಿಸ್ಟ್ ನಲ್ಲಿ ಇರಿಸಿಕೊಂಡಿದ್ದರು.

ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿ ನಡೆಸಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕರು, ಘಟನೆಗೆ ಎರಡು ದಿನಗಳ ಮೊದಲು ಬೈಸರನ್ ಕಣಿವೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ದಾಳಿಗೆ ಸಂಬಂಧಿಸಿದಂತೆ ಬಂಧಿತ ಓವರ್ ಗ್ರೌಂಡ್ ವರ್ಕರ್ (OGW) ಗಳಲ್ಲಿ ಒಬ್ಬರ ವಿಚಾರಣೆಯ ಸಮಯದಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರು ಏಪ್ರಿಲ್ 15 ರಂದು ಪಹಲ್ಗಾಮ್ ತಲುಪಿದರು ಮತ್ತು ಸುಂದರವಾದ ಬೈಸರನ್ ಕಣಿವೆ ಸೇರಿದಂತೆ ಕನಿಷ್ಠ ನಾಲ್ಕು ಸ್ಥಳಗಳನ್ನು ಉಗ್ರರು ತಮ್ಮ ಹಿಟ್ ಲಿಸ್ಟ್ ನಲ್ಲಿ ಇರಿಸಿಕೊಂಡಿದ್ದರು. ಇತರ ಮೂರು ಸಂಭಾವ್ಯ ಗುರಿಗಳೆಂದರೆ ಅದು ಅರು ಕಣಿವೆ, ಸ್ಥಳೀಯ ಮನೋರಂಜನಾ ಉದ್ಯಾನವನ ಮತ್ತು ಬೇತಾಬ್ ಕಣಿವೆ ಭಯೋತ್ಪಾದಕರ ಕಣ್ಗಾವಲಿನಲ್ಲಿವೆ. ಈ ವಲಯಗಳಲ್ಲಿ ಹೆಚ್ಚಿದ ಭದ್ರತಾ ವ್ಯವಸ್ಥೆಗಳು ಭಯೋತ್ಪಾದಕರು ಅಲ್ಲಿ ದಾಳಿ ನಡೆಸುವುದನ್ನು ತಡೆಯಿತು ಎಂದು ಮೂಲಗಳು ಹೇಳುತ್ತವೆ.
ತನಿಖೆಯ ನೇತೃತ್ವ ವಹಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ವಿದೇಶಿ ಉಗ್ರಗಾಮಿಗಳನ್ನು ಬೆಂಬಲಿಸಿದ್ದಾರೆಂದು ನಂಬಲಾದ ಸುಮಾರು 20 OGW (ಆನ್ ಗ್ರೌಂಡ್ ವರ್ಕರ್) ಗಳನ್ನು ಗುರುತಿಸಿದೆ. ಅವರಲ್ಲಿ ಹಲವರನ್ನು ಬಂಧಿಸಲಾಗಿದೆ ಮತ್ತು ಇತರರ ಮೇಲೆ ಕಣ್ಣಿರಿಸಲಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ಕನಿಷ್ಠ ನಾಲ್ಕು OGW ಗಳು ಭಯೋತ್ಪಾದಕರಿಗೆ ವಿಚಕ್ಷಣ ಮತ್ತು ಲಾಜಿಸ್ಟಿಕಲ್ ಬೆಂಬಲದೊಂದಿಗೆ ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ದಾಳಿಗೂ ಮುನ್ನ ಈ ಪ್ರದೇಶದಲ್ಲಿ ಮೂರು ಉಪಗ್ರಹ ಫೋನ್‌ಗಳನ್ನು ಬಳಸಿದ್ದಕ್ಕೆ ಸಂಬಂಧಿಸಿದಂತೆ ಪುರಾವೆಗಳು ಸಹ ಹೊರಬಂದಿವೆ. ಈ ಎರಡು ಸಾಧನಗಳಿಂದ ಸಿಗ್ನಲ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ.
ದಾಳಿಗೆ ಸಂಬಂಧಿಸಿದಂತೆ NIA ಮತ್ತು ಗುಪ್ತಚರ ಸಂಸ್ಥೆಗಳು ಇಲ್ಲಿಯವರೆಗೆ 2,500 ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆ ನಡೆಸಿವೆ. ಇಲ್ಲಿಯವರೆಗೆ, 186 ಜನರನ್ನು ಹೆಚ್ಚಿನ ವಿಚಾರಣೆಗಾಗಿ ಬಂಧನದಲ್ಲಿಡಲಾಗಿದೆ.
ಪೆಹಲ್ಗಾಮ್ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಸಂಘಟಿತ ದಾಳಿಗಳನ್ನು ನಡೆಸಿವೆ. ವಿವಿಧ ಹುರಿಯತ್ ಕಾನ್ಫರೆನ್ಸ್ ಬಣಗಳು ಮತ್ತು ಜಮಾತ್-ಇ-ಇಸ್ಲಾಮಿಯಂತಹ ನಿಷೇಧಿತ ಸಂಘಟನೆಗಳ ಸದಸ್ಯರು ಮತ್ತು ಸಹಾನುಭೂತಿದಾರರಿಗೆ ಸಂಬಂಧಿಸಿದ ನಿವಾಸಗಳನ್ನು ಕುಪ್ವಾರಾ, ಹಂದ್ವಾರ, ಅನಂತ್‌ನಾಗ್, ಟ್ರಾಲ್, ಪುಲ್ವಾಮಾ, ಸೋಪೋರ್, ಬಾರಾಮುಲ್ಲಾ ಮತ್ತು ಬಂಡಿಪೋರಾ ಸೇರಿದಂತೆ ಅನೇಕ ಸ್ಥಳಗಳಲ್ಲಿ ಶೋಧಿಸಲಾಗಿದೆ.
NIA ಮೂಲಗಳ ಪ್ರಕಾರ, ಈ ಗುಂಪುಗಳ ನಿಷೇಧಿತ ಸ್ಥಾನಮಾನದ ಹೊರತಾಗಿಯೂ, ಪಾಕಿಸ್ತಾನಿ ಭಯೋತ್ಪಾದಕರಿಗೆ ಪಹಲ್ಗಾಮ್ ಹತ್ಯಾಕಾಂಡವನ್ನು ಯೋಜಿಸಲು ಮತ್ತು ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಬೆಂಬಲ ಜಾಲದ ಅಭಿವೃದ್ಧಿಗೆ ಅವರು ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ಕರೆ ದಾಖಲೆಗಳನ್ನು ಈಗ ತನಿಖೆ ಮಾಡಲಾಗುತ್ತಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ OGW ಗಳು ಮತ್ತು ಈ ಗುಂಪುಗಳ ಸದಸ್ಯರ ನಡುವಿನ ಸಂವಹನ ಸಂಪರ್ಕವನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



