ದೇಶ

Lok sabha: 35 ತಿದ್ದುಪಡಿ ಮಾಡಿ ಹಣಕಾಸು ಮಸೂದೆ 2025ಕ್ಕೆ ಲೋಕಸಭೆ ಅಂಗೀಕಾರ!

ಹಣಕಾಸು ಮಸೂದೆಗೆ ಅಂಗೀಕಾರ ಪಡೆಯುವ ಮೂಲಕ ಬಜೆಟ್ ಅನುಮೋದನೆ ಪ್ರಕ್ರಿಯೆಯು ಲೋಕಸಭೆಯಲ್ಲಿ ಪೂರ್ಣಗೊಂಡಂತಾಯಿತು.

Lok sabha: 35 ತಿದ್ದುಪಡಿ ಮಾಡಿ ಹಣಕಾಸು ಮಸೂದೆ 2025ಕ್ಕೆ ಲೋಕಸಭೆ ಅಂಗೀಕಾರ!
ಲೋಕಸಭೆ
Published On :

ನವದೆಹಲಿ: ಆನ್ ಲೈನ್ ಜಾಹೀರಾತುಗಳ ಮೇಲೆ ಶೇ. 6ರಷ್ಟು ಡಿಜಿಟಲ್ ತೆರಿಗೆ ರದ್ದತಿ ಸೇರಿದಂತೆ ಒಟ್ಟು 35 ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ 2025ಕ್ಕೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆಯಿತು.

ಹಣಕಾಸು ಮಸೂದೆಗೆ ಅಂಗೀಕಾರ ಪಡೆಯುವ ಮೂಲಕ ಬಜೆಟ್ ಅನುಮೋದನೆ ಪ್ರಕ್ರಿಯೆಯು ಲೋಕಸಭೆಯಲ್ಲಿ ಪೂರ್ಣಗೊಂಡಂತಾಯಿತು. ಮಸೂದೆಯನ್ನು ಈಗ ರಾಜ್ಯಸಭೆಯು ಪರಿಗಣಿಸಬೇಕಾಗಿದೆ. ಅಲ್ಲಿಯೂ ಅನುಮೋದನೆ ದೊರೆತಲ್ಲಿ 2025-26ನೇ ಸಾಲಿನ ಬಜೆಟ್ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ.

2025-26ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ವೆಚ್ಚದ ಗಾತ್ರ ಒಟ್ಟು ರೂ. 50.65 ಲಕ್ಷ ಕೋಟಿಯಾಗಿದೆ. ಇದು ಪ್ರಸಕ್ತ ಸಾಲಿಗೆ ಹೋಲಿಸಿದಲ್ಲಿ ಶೇ. 7.4 ರಷ್ಟು ಅಧಿಕವಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವು ರೂ.11. 22 ಲಕ್ಷ ಕೋಟಿ ಹಾಗೂ ಪರಿಣಾಮಕಾರಿ ಬಂಡವಾಳ ವೆಚ್ಚ ರೂ. 15. 48 ಲಕ್ಷ ಕೋಟಿಯಾಗಿದೆ. ತೆರಿಗೆ ಮೂಲಕ ಹರಿದು ಬರುವ ಆದಾಯ ಸಂಗ್ರಹವು ರೂ. 42. 70 ಲಕ್ಷ ಕೋಟಿಯಾಗಿದ್ದು, ಸಾಲದ ಮೊತ್ತ ರೂ. 14. 01 ಲಕ್ಷ ಕೋಟಿಯಾಗಿದೆ ಎಂದು ಪ್ರಸ್ತಾಪಿಸಿದೆ.

ಬಜೆಟ್ ದಾಖಲೆಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ರೂ. 5,41,850.21 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ಇದು ರೂ. 4,15,356.25 ಕೋಟಿಯಾಗಿತ್ತು. ಮುಂದಿನ ವರ್ಷಕ್ಕೆ ಕೇಂದ್ರ ಯೋಜನೆಗಳಿಗೆ ರೂ. 16.29 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ರೂ. 15.13 ಲಕ್ಷ ಕೋಟಿಯಷ್ಟಿತ್ತು.

ಪಡೆದ ಸಾಲಕ್ಕೆ ಹೆಚ್ಚಿನ ಮಾರುಕಟ್ಟೆ ಬಡ್ಡಿದರ, ಖಜಾನೆ ಬಿಲ್ಲುಗಳು, ಬಾಹ್ಯ ಸಾಲ, ಸಣ್ಣ ಉಳಿತಾಯ ಹಾಗೂ ಭವಿಷ್ಯ ನಿಧಿ, ರಕ್ಷಣಾ ಇಲಾಖೆಯಲ್ಲಿ ಅಧಿಕ ಬೇಡಿಕೆ ಸೇರಿದಂತೆ ಅನೇಕ ಕಾರಣದಿಂದ 2025-26ನೇ ಸಾಲಿನ ಬಜೆಟ್ ವೆಚ್ಚವೂ ಏರಿಕೆಯಾಗಿದೆ.

ಬಜೆಟ್ ನಲ್ಲಿ ರಾಜ್ಯಗಳ ಪಾಲು, ಸಾಲ, ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿದಂತೆ 2025-26ನೇ ಸಾಲಿನಲ್ಲಿ ರೂ. 25, 01, 284 ಕೋಟಿ ಮೀಸಲಿಡಲಾಗಿದೆ. 2025-26ನೇ ಸಾಲಿನಲ್ಲಿ ಜೆಡಿಪಿಯು ರೂ. 3,56,97,923 ಕೋಟಿಯಾಗಲಿದೆ. ಇದು 2024-25ರಲ್ಲಿ ರೂ.3. 24 ಲಕ್ಷ ಕೋಟಿ ಇತ್ತು ಎಂದು ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (NSO) ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.