ದೇಶ

Honeymoon Murder Case: ಆರೋಪಿ ಸೋನಂ ರಘುವಂಶಿ 119 ಬಾರಿ ಕರೆ; ಪ್ರಕರಣದಲ್ಲಿ ಅಚ್ಚರಿಯ ಹೊಸ ಹೆಸರು ಪತ್ತೆ!

ಹನಿಮೂನ್ ಗೆ ತೆರಳಿದ್ದ ವೇಳೆ ತನ್ನ ಪತಿ ರಾಜಾ ರಘುವಂಶಿಯನ್ನು ಸೋನಂ ಎಂಬ ಮಹಿಳೆ ಹತ್ಯೆ ಮಾಡಿಸಿದ್ದಳು.

Honeymoon Murder Case: ಆರೋಪಿ ಸೋನಂ ರಘುವಂಶಿ 119 ಬಾರಿ ಕರೆ; ಪ್ರಕರಣದಲ್ಲಿ ಅಚ್ಚರಿಯ ಹೊಸ ಹೆಸರು ಪತ್ತೆ!
ಸೋನಮ್ ಮತ್ತು ರಾಜಾ ರಘುವಂಶಿ — online desk
Published On :

ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಹೊರಬರಲು ಆರಂಭಿಸಿದೆ.

ಹನಿಮೂನ್ ಗೆ ತೆರಳಿದ್ದ ವೇಳೆ ತನ್ನ ಪತಿ ರಾಜಾ ರಘುವಂಶಿಯನ್ನು ಸೋನಂ ಎಂಬ ಮಹಿಳೆ ಹತ್ಯೆ ಮಾಡಿಸಿದ್ದಳು. ಈಗ ಪ್ರಕರಣದ ತನಿಖೆಯಲ್ಲಿ ಹೊಸ ಹೆಸರು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಈ ಹಿಂದೆ ಅಪರಿಚಿತನಾಗಿದ್ದ ಸಂಜಯ್ ವರ್ಮಾ, ರಾಜಾ ಅವರ ಪತ್ನಿ ಸೋನಮ್ ರಘುವಂಶಿ ಅವರೊಂದಿಗೆ ಮದುವೆಗೆ ಮೊದಲು ಮತ್ತು ನಂತರ ಅತಿ ಹೆಚ್ಚು ದೂರವಾಣಿ ಸಂಪರ್ಕ ಹೊಂದಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಪೊಲೀಸರು ಪಡೆದ ಕರೆ ದತ್ತಾಂಶ ದಾಖಲೆಗಳ ಪ್ರಕಾರ, ಮಾರ್ಚ್ 1 ಮತ್ತು ಮಾರ್ಚ್ 25 ರ ನಡುವೆ, ಸೋನಮ್ ಮತ್ತು ಸಂಜಯ್ 119 ದೂರವಾಣಿ ಕರೆಗಳಾಗಿವೆ. ಈ ಘಟನೆಯ ಬೆನ್ನಲ್ಲೇ ಸಂಜಯ್ ವರ್ಮಾ ಮೊಬೈಲ್ ಸಂಖ್ಯೆ ಪ್ರಸ್ತುತ ಸ್ವಿಚ್ ಆಫ್ ಆಗಿದೆ.

ಮೇ 23 ರಂದು, ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿ ರಾಜಾ ರಘುವಂಶಿ ಅವರನ್ನು ಹತ್ಯೆ ಮಾಡಿ, ವೀ ಸಾಡಾಂಗ್ ಜಲಪಾತದ ಬಳಿಯ ಕಣಿವೆಗೆ ಎಸೆದು ಹತ್ಯೆ ಮಾಡಲಾಗಿತ್ತು. 10 ದಿನಗಳ ನಂತರ ಅವರ ಶವವನ್ನು ವಶಪಡಿಸಿಕೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.