ದೇಶ

ಗಾಜಿಯಾಬಾದ್: ಡೆಲಿವರಿ ಏಜೆಂಟ್‌ಗಳ ಸೋಗಿನಲ್ಲಿ ಬಂದೂಕು ತೋರಿಸಿ ಚಿನ್ನದಂಗಡಿ ದೋಚಿದ ಖದೀಮರು! Video

ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಪರಿಚಿತ ಇಬ್ಬರು ವ್ಯಕ್ತಿಗಳು ಅಂಗಡಿಯೊಳಗೆ ನುಗ್ಗಿ, ಲೂಟಿ ಮಾಡಿದ ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗುತ್ತಿರುವುದು ಸೆರೆಯಾಗಿದೆ.

ಗಾಜಿಯಾಬಾದ್: ಡೆಲಿವರಿ ಏಜೆಂಟ್‌ಗಳ ಸೋಗಿನಲ್ಲಿ ಬಂದೂಕು ತೋರಿಸಿ ಚಿನ್ನದಂಗಡಿ ದೋಚಿದ ಖದೀಮರು! Video
ಡೆಲಿವರಿ ಏಜೆಂಟರಂತೆ ಉಡುಪು ಧರಿಸಿ ದರೋಡೆ ಮಾಡಿದ ಇಬ್ಬರು ದುಷ್ಕರ್ಮಿಗಳು
Published On :

ಗಾಜಿಯಾಬಾದ್: ಇಲ್ಲಿನ ಆಭರಣ ಅಂಗಡಿಯೊಂದರಲ್ಲಿ ಹಗಲು ದರೋಡೆ ನಡೆದಿದ್ದು, ಡೆಲಿವರಿ ಏಜೆಂಟ್‌ಗಳಂತೆ ಉಡುಪು ಧರಿಸಿದ ಇಬ್ಬರು ವ್ಯಕ್ತಿಗಳು ಅಂಗಡಿಯಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿ 20 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಬೆಳ್ಳಿ ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಪರಿಚಿತ ಇಬ್ಬರು ವ್ಯಕ್ತಿಗಳು ಅಂಗಡಿಯೊಳಗೆ ನುಗ್ಗಿ, ಲೂಟಿ ಮಾಡಿದ ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗುತ್ತಿರುವುದು ಸೆರೆಯಾಗಿದೆ.

ಗುರುವಾರ ಲಿಂಕ್ ರಸ್ತೆ ಪ್ರದೇಶದ ಮಾನ್ಸಿ ಜ್ಯುವೆಲ್ಲರ್ಸ್‌ನಲ್ಲಿ ಈ ದರೋಡೆ ನಡೆದಿದೆ. ಇಬ್ಬರು ದರೋಡೆಕೋರರು ಅಂಗಡಿಯಿಂದ 20 ಕಿಲೋಗ್ರಾಂಗಳಿಗೂ ಹೆಚ್ಚು ಬೆಳ್ಳಿ ಮತ್ತು 125 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲವಾದರೂ, ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಕಣ್ಗಾವಲು ಬಳಸಿಕೊಂಡು ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ಗಾಜಿಯಾಬಾದ್ ಪೊಲೀಸರು ಬಹು ತಂಡಗಳನ್ನು ರಚಿಸಿದ್ದಾರೆ.

'ದುಷ್ಕರ್ಮಿಗಳು ಅಂಗಡಿಯಿಂದ 20 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಅನುಮಾನ ಬರದಂತೆ ಅವರು ಬ್ಲಿಂಕಿಟ್ ಮತ್ತು ಸ್ವಿಗ್ಗಿಯ ಸಮವಸ್ತ್ರವನ್ನು ಧರಿಸಿದ್ದರು' ಎಂದು ಉಪ ಪೊಲೀಸ್ ಆಯುಕ್ತ (ಟ್ರಾನ್ಸ್ ಹಿಂಡನ್) ನಿಮಿಷ್ ಪಾಟೀಲ್ ಹೇಳಿದ್ದಾರೆ.

'ಪ್ರಕರಣದ ತನಿಖೆಗಾಗಿ ನಾವು ಆರು ತಂಡಗಳನ್ನು ರಚಿಸಿದ್ದೇವೆ ಮತ್ತು ಶೀಘ್ರದಲ್ಲೇ ದರೋಡೆಕೋರರನ್ನು ಬಂಧಿಸಲಾಗುವುದು' ಎಂದು ಅಧಿಕಾರಿ ಹೇಳಿದರು.

ಒಬ್ಬ ದರೋಡೆಕೋರ ಹಳದಿ ಬ್ಲಿಂಕಿಟ್ ಟಿ-ಶರ್ಟ್, ಹೆಲ್ಮೆಟ್ ಮತ್ತು ಫೇಸ್ ಮಾಸ್ಕ್ ಧರಿಸಿರುವುದು ಕಂಡುಬರುತ್ತದೆ. ಮತ್ತೊಬ್ಬ ಕಿತ್ತಳೆ ಬಣ್ಣದ ಸ್ವಿಗ್ಗಿ ಸಮವಸ್ತ್ರದಲ್ಲಿ ಹೆಲ್ಮೆಟ್ ಧರಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.