ದೇಶ

ಜೈಪುರದಲ್ಲಿ ತೀವ್ರ ಮಳೆ: ರಸ್ತೆ ಮೇಲೆ ನೀರಿಗೆ ಬಿದ್ದ ಮೊಬೈಲ್ ಫೋನ್ ಗೆ ಯುವಕ ಹತಾಶ ಹುಡುಕಾಟ; Viral Video

ಜೈಪುರದ ರಾಮನಿವಾಸ್ ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಭಾರೀ ಮಳೆಯಿಂದಾಗಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರಸ್ತೆ ತುಂಬಾ ನೀರು ನಿಂತಿತ್ತು.

ಜೈಪುರದಲ್ಲಿ ತೀವ್ರ ಮಳೆ: ರಸ್ತೆ ಮೇಲೆ ನೀರಿಗೆ ಬಿದ್ದ ಮೊಬೈಲ್ ಫೋನ್ ಗೆ ಯುವಕ ಹತಾಶ ಹುಡುಕಾಟ; Viral Video
ಮೊಬೈಲ್ ಫೋನ್ ಹುಡುಕುತ್ತಿರುವ ಯುವಕ
Published On :

ತೀವ್ರ ಧಾರಾಕಾರ ಮಳೆಯಿಂದ ರಸ್ತೆಯಲ್ಲಿ ಉಂಟಾದ ಪ್ರವಾಹದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದ ಮೊಬೈಲ್ ಫೋನ್ ನ್ನು ಜೈಪುರದ ಯುವಕನೊಬ್ಬ ಹತಾಶನಾಗಿ ಹುಡುಕುತ್ತಿರುವ ಹೃದಯ ವಿದ್ರಾವಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಭಾವನಾತ್ಮಕ ಘಟನೆಯನ್ನು ದಾರಿಹೋಕರು ವಿಡಿಯೋದಲ್ಲಿ ಸೆರೆಹಿಡಿದಿದ್ದು, ನೋಡಿದವರಿಗೆ ಅಯ್ಯೋ ಪಾಪ ಎನಿಸುತ್ತದೆ.

ಜೈಪುರದ ರಾಮನಿವಾಸ್ ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಭಾರೀ ಮಳೆಯಿಂದಾಗಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರಸ್ತೆ ತುಂಬಾ ನೀರು ನಿಂತಿತ್ತು. ಹಲ್ದಾರ್ ಎಂಬ ಯುವಕ ತನ್ನ ಆಕ್ಟಿವಾದಲ್ಲಿ ಸವಾರಿ ಮಾಡುತ್ತಿದ್ದಾಗ ಸ್ಕಿಡ್ ಆಗಿ ಬಿದ್ದಿದ್ದಾನೆ. ಆತ ಬೀಳುತ್ತಿದ್ದಂತೆ ಅವನ ಮೊಬೈಲ್ ಫೋನ್ ಕೂಡ ಜಾರಿ ಬಿದ್ದು ಹೋಗಿದೆ.

ದುಃಖಿತನಾಗಿದ್ದ ಹಲ್ದಾರ್, ತನ್ನ ಫೋನ್‌ಗಾಗಿ ಕೆಸರುಮಯ ನೀರಿನಲ್ಲಿ ತೀವ್ರವಾಗಿ ಹುಡುಕುತ್ತಿರುವುದು ಕಾಣುತ್ತಿದೆ. ಬಹಳ ಸಮಯ ಹುಡುಕಿದರೂ ಸಿಗಲಿಲ್ಲ. ಹತಾಶನಾಗಿ ಕೂತು ಅಳುತ್ತಿರುವ ದೃಶ್ಯ ಎಂಥವರ ಮನಸ್ಸನ್ನು ಕಲಕುವಂತಿದೆ.

ರಾಮ್ ನಿವಾಸ್ ಬಾಗ್ ಬಳಿಯ ಪ್ರದೇಶವು ಒಂದು ಬದಿಯಲ್ಲಿ ಇಳಿಜಾರನ್ನು ಹೊಂದಿದ್ದು, ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ಬಂದಾಗಲೆಲ್ಲಾ ರಸ್ತೆ ಮೇಲೆ ನೀರು ಸಂಗ್ರಹವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.