ಜಾಗ್ವಾರ್ ಯುದ್ಧ ವಿಮಾನ ಅಪಘಾತ: ತಿಂಗಳ ಹಿಂದಷ್ಟೇ ಜನಿಸಿದ್ದ ಗಂಡು ಮಗುವಿಗೆ ತಂದೆಯಾಗಿದ್ದ IAF ಪೈಲಟ್ ಸಾವು!
ಹರಿಯಾಣದ ರೋಹ್ಟಕ್ನ ಖೇರಿ ಸಾಧ್ ಗ್ರಾಮದ ಸಿಂಧು ಅವರು ಮಂಗಳವಾರ ಸಂಜೆ ವೀಡಿಯೊ ಕರೆ ಮಾಡಿ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು.

ಚಂಡೀಗಢ: ರಾಜಸ್ಥಾನದ ಚುರೂ ಬಳಿ ಬುಧವಾರ ಸಂಭವಿಸಿದ ಭಾರತೀಯ ವಾಯುಪಡೆಯ (IAF) ಜಾಗ್ವಾರ್ ತರಬೇತಿ ವಿಮಾನ ಅಪಫಾತದಲ್ಲಿ ಮೃತಪಟ್ಟ ಇಬ್ಬರು ಪೈಲಟ್ ಗಳ ಪೈಕಿ ಒಬ್ಬರಾದ ಸ್ಕ್ವಾಡ್ರನ್ ಲೀಡರ್ ಲೋಕೇಂದ್ರ ಸಿಂಗ್ ಸಿಂಧು ಅವರು ಒಂದು ತಿಂಗಳ ಹಿಂದಷ್ಟೇ ಜನಿಸಿದ ಮುದ್ದು ಮಗುವಿನ ತಂದೆಯಾಗಿದ್ದರು. ದುರಂತಕ್ಕೂ ಮುನ್ನಾ ಹರಿಯಾಣದಲ್ಲಿ ಕುಟುಂಬ ಆ ಸಂಭ್ರಮಾಚರಣೆಯಲ್ಲಿತ್ತು.
ಹರಿಯಾಣದ ರೋಹ್ಟಕ್ನ ಖೇರಿ ಸಾಧ್ ಗ್ರಾಮದ ಸಿಂಧು ಅವರು ಮಂಗಳವಾರ ಸಂಜೆ ವೀಡಿಯೊ ಕರೆ ಮಾಡಿ ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು. ದುರಂತಕ್ಕೂ ಕೆಲ ಗಂಟೆಗಳ ಮುನ್ನಾ ತಮ್ಮ ಕುಟುಂಬದೊಂದಿಗೆ ಸಂದೇಶ ವಿನಿಮಯ ಮಾಡಿಕೊಂಡಿದ್ದರು. ಸಾಮಾನ್ಯ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದರು ಎನ್ನಲಾಗಿದೆ.
ಗುರುವಾರ ರೋಹ್ಟಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧು ಅವರ ಕುಟುಂಬದ ಕೆಲ ಸದಸ್ಯರು, ತಿಂಗಳ ಹಿಂದೆ ಇದೇ ದಿನದಂದು ಜನಿಸಿದ ಸಿಧು ಮಗನ ತಿಂಗಳ ಹುಟ್ಟುಹಬ್ಬವನ್ನು ಕುಟುಂಬದವರು ಆಚರಿಸುತ್ತಿದ್ದರು. ಆದರೆ ದುರದೃಷ್ಟ ಏನಾಗಿದೆ ಎಂದು ಯಾರಿಗೂ ತಿಳಿದಿಲ್ಲ ಎಂದರು.
ಜಾಗ್ವಾರ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಮತ್ತೋರ್ವ ಪೈಲಟ್ ರಿಷಿರಾಜ್ ಸಿಂಗ್ (23). ಘಟನೆಯ ನಂತರ ಅಪಘಾತದ ಕಾರಣ ಪತ್ತೆಗೆ ತನಿಖಾ ನ್ಯಾಯಾಲಯವನ್ನು ರಚಿಸಲಾಗಿದೆ ಎಂದು ಐಎಎಫ್ ಹೇಳಿದೆ.
ಸಿಂಧು ತನ್ನ ಪತ್ನಿ, ಒಂದು ತಿಂಗಳ ಮಗ, ಸಹೋದರ, ಸಹೋದರಿ, ಪೋಷಕರು ಮತ್ತು ಅಜ್ಜಿಯರನ್ನು ಅಗಲಿದ್ದಾರೆ ಎಂದು ಅವರ ಅಜ್ಜ ಬಲ್ವಾನ್ ಸಿಂಗ್ ಹೇಳಿದ್ದಾರೆ.
ಅವರಿಗೆ ಒಂದು ಮಗುವಿದೆ, ಇಂದಿಗೆ ಆ ಮಗುವಿಗೆ ಒಂದು ತಿಂಗಳು ತುಂಬಿದೆ. ಮಂಗಳವಾರ ಅವರೊಂದಿಗೆ ವಿಡಿಯೋ ಕಾಲ್ ನಲ್ಲಿ ಅವರೊಂದಿಗೆ ಮಾತನಾಡಿದ್ದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



