ದೇಶ

Gambhira Bridge: 3 ತಿಂಗಳ ಮೊದಲೇ ಮೇಲ್ಸೇತುವೆ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದ ವರದಿಗಾರ! Video

ಗುಜರಾತ್ ನ ವಡೋದರಾದ ಆನಂದ್ ಮತ್ತು ವಡೋದರಾ ಪ್ರದೇಶಗಳನ್ನು ಸಂಪರ್ಕಿಸುವ ಗಂಭೀರ ಸೇತುವೆ ಕುಸಿದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Gambhira Bridge: 3 ತಿಂಗಳ ಮೊದಲೇ ಮೇಲ್ಸೇತುವೆ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದ ವರದಿಗಾರ! Video
ಮೇಲ್ಸೇತುವೆ ಕುಸಿತ ಪ್ರಕರಣ
Published On :

ವಡೋದರ: ಗುಜರಾತ್‌ನ ವಡೋದರಾದಲ್ಲಿ ಸಂಭವಿಸಿದ ಮೇಲ್ಸೇತುವೆ ಕುಸಿತ ದುರಂತ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಸೇತುವೆಯ ಶಿಥಿಲಾವಸ್ಥೆಯ ಕುರಿತು ವರದಿಗಾರರೊಬ್ಬರು ಮೂರು ತಿಂಗಳ ಮೊದಲೇ ಎಚ್ಚರಿಸಿದ್ದರು ಎನ್ನಲಾಗಿದೆ.

ಹೌದು.. ಗುಜರಾತ್ ನ ವಡೋದರಾದ ಆನಂದ್ ಮತ್ತು ವಡೋದರಾ ಪ್ರದೇಶಗಳನ್ನು ಸಂಪರ್ಕಿಸುವ ಗಂಭೀರ ಸೇತುವೆ ಕುಸಿದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತದ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟ್ರಕ್, ಟ್ಯಾಂಕರ್ ಮತ್ತು ಕಾರುಗಳು ಸೇರಿದಂತೆ ಹಲವಾರು ವಾಹನಗಳು ನದಿಗೆ ಬಿದ್ದಿವೆ.

ಪ್ರಸ್ತುತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಗ್ರಾಮಸ್ಥರು, ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಐವರನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.

3 ತಿಂಗಳ ಮೊದಲೇ ಎಚ್ಚರಿಸಿದ್ದ ವರದಿಗಾರ

ಇನ್ನು ಈ ಸೇತುವೆ ಬಹಳ ಹಿಂದಿನಿಂದಲೂ ಶಿಥಿಲಾವಸ್ಥೆಯಲ್ಲಿದ್ದು ಅಪಾಯಕಾರಿಯಾಗಿತ್ತು. ಸ್ಥಳೀಯರು ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇದ್ದರು. ತುರ್ತು ದುರಸ್ತಿ ಮಾಡಬೇಕೆಂದು ಇಲ್ಲವೇ ಹೊಸದಾಗಿ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದರು. ಇದೇ ವಿಚಾರವಾಗಿ ವರದಿಗಾರನೋರ್ವ ಈ ಬಗ್ಗೆ ವರದಿ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಕುರಿತ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ವರದಿಗಾರನ ಈ ವಿಡಿಯೋದಲ್ಲಿ ಮೇಲ್ಸೇತುವೆಯಲ್ಲಿ ಬಿರುಕು ಮತ್ತು ಕಾಂಕ್ರೀಟ್ ಗಳಲ್ಲಿನ ಬಿರುಕಿನ ಕುರಿತು ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಈ ಮೇಲ್ಸೇತುವೆ ಮೇಲೆ ಭಾರಿ ವಾಹನಗಳು ಚಲಿಸಿದರು ಸೇತುವ ನಡುಗಿದಂತೆ ಭಾಸವಾಗುತ್ತದೆ. ಅಲ್ಲದೆ ಸೇತುವೆಯಲ್ಲಿನ ಜಾಯಿಂಟ್ ಗಳು ಬಿರುಕು ಬಿಟ್ಟಿರುವುದು ಸ್ಪಷ್ಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.