ದೇಶ

'ನಾನು ಮತ್ತೆ ಬರುತ್ತೇನೆ': ಅತ್ಯಾಚಾರ ಎಸಗಿದ ಬಳಿಕ ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ತೆಗೆದಿಟ್ಟ ವ್ಯಕ್ತಿ!

ಮಹಿಳೆ ತನ್ನ ಫೋನ್‌ನಲ್ಲಿನ OTP ಪರಿಶೀಲಿಸಲು ಒಳಗೆ ಹೋದ ನಂತರ ಆರೋಪಿ ಆಕೆಯ ಮನೆಗೆ ಪ್ರವೇಶಿಸಿದ್ದಾನೆ.

'ನಾನು ಮತ್ತೆ ಬರುತ್ತೇನೆ': ಅತ್ಯಾಚಾರ ಎಸಗಿದ ಬಳಿಕ ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ತೆಗೆದಿಟ್ಟ ವ್ಯಕ್ತಿ!
ಸಾಂದರ್ಭಿಕ ಚಿತ್ರ
Published On :

ಪುಣೆ: ಇಲ್ಲಿನ ಐಷಾರಾಮಿ ವಸತಿ ಸೊಸೈಟಿಯಲ್ಲಿ ವಾಸಿಸುತ್ತಿದ್ದ 22 ವರ್ಷದ ಮಹಿಳೆ ಮೇಲೆ ಕೊರಿಯರ್ ವಿತರಣಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರ ಪ್ರಕಾರ, ಮಹಿಳೆ ತನ್ನ ಫೋನ್‌ನಲ್ಲಿನ OTP ಪರಿಶೀಲಿಸಲು ಒಳಗೆ ಹೋದ ನಂತರ ಆರೋಪಿ ಆಕೆಯ ಮನೆಗೆ ಪ್ರವೇಶಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿ ಸ್ಥಳದಿಂದ ಹೊರಟುಹೋಗಿದ್ದಾನೆ.

ಕೆಲವು ವರದಿಗಳ ಪ್ರಕಾರ, ಆರೋಪಿಯು ಮಹಿಳೆಯ ಮುಖಕ್ಕೆ ಏನನ್ನೋ ಸಿಂಪಡಿಸಿದ್ದು, ಕೃತ್ಯದ ಬಳಿಕ ಆತ ಸ್ಥಳದಿಂದ ಕಾಲ್ಕಿತ್ತ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಆರೋಪಿಯು ಫ್ಲಾಟ್‌ನಿಂದ ಹೊರಡುವ ಮುನ್ನ ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು 'ನಾನು ಮತ್ತೆ ಬರುತ್ತೇನೆ' ಎಂದು ಬರೆದಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ರಾಜ್‌ಕುಮಾರ್ ಶಿಂಧೆ ತಿಳಿಸಿದ್ದಾರೆ.

'ನಿನ್ನೆ ಸಂಜೆ 7.30ರ ಸುಮಾರಿಗೆ, ಬ್ಯಾಂಕ್ ಲಕೋಟೆಯೊಂದಿಗೆ ಡೆಲಿವರಿ ಬಾಯ್ 22 ವರ್ಷದ ಮಹಿಳೆಯ ಫ್ಲಾಟ್‌ಗೆ ತಲುಪಿದ್ದಾನೆ. ಕೊರಿಯರ್‌ ನೀಡಲು ಪಿನ್ ಕೇಳಿದ್ದಾನೆ. ಆಗ ಫೋನ್ ತರಲೆಂದು ಆಕೆ ಒಳಗಡೆ ಹೋದಾಗ, ಆತನು ಒಳ ಪ್ರವೇಶಿಸಿ ಬಾಗಿಲು ಮುಚ್ಚಿದ್ದಾನೆ ಮತ್ತು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ' ಎಂದರು.

'ಅಪರಾಧ ವಿಭಾಗದ ಐದು ಮತ್ತು ಐದು ವಲಯ ತಂಡಗಳು ಸೇರಿದಂತೆ ಹತ್ತು ತಂಡಗಳು ಈ ಪ್ರಕರಣದ ತನಿಖೆಯಲ್ಲಿ ತೊಡಗಿವೆ. ಮಹಿಳೆ ಸಂಜೆ 7.30 ರಿಂದ ಪ್ರಜ್ಞಾಹೀನಳಾಗಿದ್ದಳು. ಆಕೆಯ ಮೇಲೆ ಏನಾದರೂ ಸ್ಪ್ರೇ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ವಿಧಿವಿಜ್ಞಾನ ತಜ್ಞರನ್ನು ಕರೆಯಲಾಯಿತು. ಮಹಿಳೆಯ ಫೋನ್‌ನಲ್ಲಿ ಸೆಲ್ಫಿ ಕಂಡುಬಂದಿದೆ. ನಾವು ಅದನ್ನು ವಿಶ್ಲೇಷಿಸುತ್ತಿದ್ದೇವೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.