ದೇಶ

ಸುಗಂಧ ದ್ರವ್ಯದ ಬಾಟಲಿಗಳ ಎಕ್ಸ್ಪೈರಿ ಡೇಟ್ ಬದಲಿಸುವಾಗ ಸ್ಫೋಟ; ಇಬ್ಬರು ಅಪ್ರಾಪ್ತರು ಸೇರಿ ನಾಲ್ವರಿಗೆ ಗಾಯ

ಮುಂಬೈ ಹೊರವಲಯದಲ್ಲಿರುವ ನಲ್ಲ ಸೊಪಾರಾದಲ್ಲಿರುವ ರೋಶ್ನಿ ಅಪಾರ್ಟ್‌ಮೆಂಟ್‌ನ ಮನೆ ಸಂಖ್ಯೆ 112 ರಲ್ಲಿ ಗುರುವಾರ ತಡರಾತ್ರಿ ಅವಘಡ ಸಂಭವಿಸಿದೆ.

ಸುಗಂಧ ದ್ರವ್ಯದ ಬಾಟಲಿಗಳ ಎಕ್ಸ್ಪೈರಿ ಡೇಟ್ ಬದಲಿಸುವಾಗ ಸ್ಫೋಟ; ಇಬ್ಬರು ಅಪ್ರಾಪ್ತರು ಸೇರಿ ನಾಲ್ವರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Published On :

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸುಗಂಧ ದ್ರವ್ಯದ ಬಾಟಲಿಗಳ ಎಕ್ಸ್ಪೈರಿ ದಿನಾಂಕವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದ ವೇಳೆ ಫ್ಲಾಟ್‌ವೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಮುಂಬೈ ಹೊರವಲಯದಲ್ಲಿರುವ ನಲ್ಲ ಸೊಪಾರಾದಲ್ಲಿರುವ ರೋಶ್ನಿ ಅಪಾರ್ಟ್‌ಮೆಂಟ್‌ನ ಮನೆ ಸಂಖ್ಯೆ 112 ರಲ್ಲಿ ಗುರುವಾರ ತಡರಾತ್ರಿ ಅವಘಡ ಸಂಭವಿಸಿದೆ. ಸಂತ್ರಸ್ತರನ್ನು ಮಹಾವೀರ್ ವಾದರ್ (41), ಸುನೀತಾ ವಾದರ್ (38), ಕುಮಾರ್ ಹರ್ಷವರ್ಧನ್ ವಾದರ್ (9) ಮತ್ತು ಕುಮಾರಿ ಹರ್ಷದಾ ವಾದರ್ (14) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಗಂಧ ದ್ರವ್ಯದ ಬಾಟಲಿಗಳ ಮುಕ್ತಾಯ ದಿನಾಂಕಗಳನ್ನು ಬದಲಾಯಿಸಲು ಪ್ರಯತ್ನಿಸುವ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಮಾರ್ ಹರ್ಷವರ್ಧನ್ ಅವರು ನಲ್ಲ ಸೊಪಾರಾದ ಲೈಫ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಮೂವರು ಅದೇ ಪ್ರದೇಶದ ಆಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.