85 ವರ್ಷಗಳ ಹಿಂದೆ RSS ಕಚೇರಿಗೆ ಭೇಟಿ ನೀಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್!
ಭೇಟಿ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಆರ್‌ಎಸ್‌ಎಸ್ ಅನ್ನು ತಾನು ಆತ್ಮೀಯತೆಯ ಭಾವನೆಯಿಂದ ನೋಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು

ಮುಂಬೈ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು 85 ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) 'ಶಾಖೆಗೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿಕೊಂಡಿದೆ.
ಭೇಟಿ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಆರ್‌ಎಸ್‌ಎಸ್ ಅನ್ನು ತಾನು ಆತ್ಮೀಯತೆಯ ಭಾವನೆಯಿಂದ ನೋಡಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದು RSS ಸಂವಹನ ವಿಭಾಗವಾದ ವಿದರ್ಭ ಪ್ರಾಂತ್ಯದ ವಿಶ್ವ ಸಂವಾದ ಕೇಂದ್ರ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಡಾ. ಅಂಬೇಡ್ಕರ್ ಅವರು ಜನವರಿ 2, 1940 ರಂದು ಸತಾರಾ ಜಿಲ್ಲೆಯ ಕರಾಡ್‌ನಲ್ಲಿರುವ ಆರ್‌ಎಸ್‌ಎಸ್ 'ಶಾಖಾ' ಕಚೇರಿಗೆ ಭೇಟಿ ನೀಡಿದ್ದ ಅಂಬೇಡ್ಕರ್, ಅಲ್ಲಿನ ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿದ್ದರು. ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಂಘವನ್ನು ಆತ್ಮೀಯತೆಯ ಭಾವನೆಯಿಂದ ನೋಡುತ್ತೇನೆ ಎಂದು ಹೇಳಿದ್ದರು.

Watch | ಅಂಬೇಡ್ಕರ್ ಸೋಲಿಸಲು ಕಾಂಗ್ರೆಸ್ ಪಿತೂರಿ, ಬಾಬಾ ಸಾಹೇಬ್ ಬೆನ್ನಿಗೆ ನಿಂತಿದ್ದು RSS- Tejasvi Surya
ಆರ್‌ಎಸ್‌ಎಸ್ ಶಾಖೆಗೆ ಡಾ ಅಂಬೇಡ್ಕರ್ ಭೇಟಿಯ ಕುರಿತು ಜನವರಿ 9, 1940 ರಂದು ಮರಾಠಿ ದೈನಿಕ "ಕೇಸರಿ" ಯಲ್ಲಿ ವರದಿ ಪ್ರಕಟಿಸಲಾಗಿದೆ ಎಂದು ಸುದ್ದಿಯ ಕ್ಲಿಪಿಂಗ್ ನೊಂದಿಗೆ VKS ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


