ಸಮಸ್ಯೆ ಪರಿಹಾರಕ್ಕೆ ಅಥವಾ ಅಗತ್ಯ ಬಿದ್ದಾಗ ಮಾತ್ರ ಜನ MNS ಬಗ್ಗೆ ಯೋಚಿಸುತ್ತಾರೆ, ಚುನಾವಣೆಯಲ್ಲಿ ಮರೆಯುತ್ತಾರೆ: ರಾಜ್ ಠಾಕ್ರೆ
ನೂತನ ವರ್ಷದ ಹಿನ್ನೆಲೆಯಲ್ಲಿ ಟ್ವಿಟರ್ ಸಂದೇಶ ನೀಡಿರುವ ಠಾಕ್ರೆ, ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಫಲಿತಾಂಶಗಳನ್ನು ಹಿಂದೆ ಇರಿಸಿ, ಮುಂದುವರಿಯುವಂತೆ ಮನವಿ ಮಾಡಿದರು.

ಮುಂಬೈ: ಯಾವುದೇ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸಲು, ಅವರಿಗೆ ಬೇಕಾದಾಗ ಮಾತ್ರ ಜನ ತಮ್ಮ ಪಕ್ಷದ ಬಗ್ಗೆ ಯೋಚನೆ ಮಾಡುತ್ತಾರೆ ಚುನಾವಣೆ ಸಂದರ್ಭದಲ್ಲಿ ಮರೆತುಬಿಡುತ್ತಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ನೂತನ ವರ್ಷದ ಹಿನ್ನೆಲೆಯಲ್ಲಿ ಟ್ವಿಟರ್ ಸಂದೇಶ ನೀಡಿರುವ ಠಾಕ್ರೆ, ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಫಲಿತಾಂಶಗಳನ್ನು ಹಿಂದೆ ಇರಿಸಿ, ಮುಂದುವರಿಯುವಂತೆ ಮನವಿ ಮಾಡಿದರು, ಶೀಘ್ರದಲ್ಲೇ ಅವರೊಂದಿಗೆ ಮಾತನಾಡುವುದಾಗಿ ಮತ್ತು ಮುಂದಿನ ಕ್ರಮದ ಬಗ್ಗೆ ವಿಶಾಲವಾದ ನಿರ್ದೇಶನವನ್ನು ನೀಡುವುದಾಗಿ ರಾಜ್ ಠಾಕ್ರೆ ಹೇಳಿದ್ದಾರೆ.
"....ಕೆಲವು ವಿಷಯಗಳು ಬದಲಾಗಿಲ್ಲ..... ಜನರು ಪ್ರತಿ ಸಮಸ್ಯೆಯ ಪರಿಹಾರಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಮತದಾನ ಮಾಡುವಾಗ ಅದನ್ನು ನಿರ್ಲಕ್ಷಿಸುತ್ತಾರೆ" ಎಂದು ಠಾಕ್ರೆ ಹೇಳಿದರು.
ನವೆಂಬರ್ 20 ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ 288 ವಿಧಾನಸಭಾ ಸ್ಥಾನಗಳ ಪೈಕಿ 125 ರಲ್ಲಿ ಎಂಎನ್‌ಎಸ್ ಸ್ಪರ್ಧಿಸಿತ್ತು ಆದರೆ ಯಾವುದೇ ಸ್ಥಾನ ಗಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ರಾಜ್ ಪುತ್ರ ಅಮಿತ್ ಠಾಕ್ರೆ ಕೂಡ ಮುಂಬೈನಲ್ಲಿ ಮಾಹಿಮ್‌ನಿಂದ ಸೋತಿದ್ದರು.
ಚುನಾವಣಾ ಫಲಿತಾಂಶದ ಕೆಲವೇ ವಾರಗಳಲ್ಲಿ, ರಾಜ್ಯದಲ್ಲಿ ಮರಾಠಿ ಭಾಷಿಕರ ವಿರುದ್ಧ "ದಬ್ಬಾಳಿಕೆ" ಪ್ರಾರಂಭವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ. ಈ ಪ್ರಕರಣಗಳಲ್ಲಿ MNS ಕ್ರಮ ತೆಗೆದುಕೊಳ್ಳುತ್ತದೆ ಎಂದು ಜನರು ನಿರೀಕ್ಷಿಸಿದ್ದರು, ನಿರೀಕ್ಷೆಯಂತೆ ಎಂಎನ್ಎಸ್ ಮಾಡಿದೆ ಎಂದು ಅವರು ಹೇಳಿದರು.
"ಮರಾಠಿ ಮಾನೂಸ್" (ಸ್ಥಳೀಯ ಮಹಾರಾಷ್ಟ್ರ) ನ್ನು ಕೇವಲ ಮತಕ್ಕಾಗಿ ಬಳಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಎಂಎನ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



