2024 ಭಾರತದ ಪಾಲಿಗೆ ಅತ್ಯಂತ ಹೆಚ್ಚು ಉಷ್ಣತೆಯ ವರ್ಷ: IMD ಮುನ್ಸೂಚನೆ
2024 ರಲ್ಲಿ ಭಾರತದಾದ್ಯಂತ ವಾರ್ಷಿಕ ಸರಾಸರಿ ಭೂ ಮೇಲ್ಮೈ ಗಾಳಿಯ ಉಷ್ಣತೆಯು ದೀರ್ಘಾವಧಿಯ ಸರಾಸರಿ(1991-2020 ಅವಧಿ) ಗಿಂತ 0.65 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ನವದೆಹಲಿ: 2024, 1901 ರಿಂದ ಇಲ್ಲಿಯವರೆಗೆ ಭಾರತದಲ್ಲಿ ದಾಖಲಾಗಿರುವ ಅತ್ಯಂತ ಹೆಚ್ಚು ಉಷ್ಣತೆಯ ವರ್ಷವಾಗಿದ್ದು, ಸರಾಸರಿ ಕನಿಷ್ಠ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.90 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
2024 ರಲ್ಲಿ ಭಾರತದಾದ್ಯಂತ ವಾರ್ಷಿಕ ಸರಾಸರಿ ಭೂ ಮೇಲ್ಮೈ ಗಾಳಿಯ ಉಷ್ಣತೆಯು ದೀರ್ಘಾವಧಿಯ ಸರಾಸರಿ(1991-2020 ಅವಧಿ) ಗಿಂತ 0.65 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2024 ರ ವರ್ಷವು 1901 ರಿಂದ ಇಲ್ಲಿಯವರೆಗೆ ದಾಖಲಾದ ಅತ್ಯಂತ ಹೆಚ್ಚು ಉಷ್ಣತೆಯ ವರ್ಷವಾಗಿದೆ. ಇದು 2016 ಅನ್ನು ಮೀರಿಸುತ್ತದೆ. 2016ರಲ್ಲಿ ಸರಾಸರಿ ಭೂ ಮೇಲ್ಮೈ ಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.54 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಯುರೋಪಿಯನ್ ಹವಾಮಾನ ಏಜೆನ್ಸಿ ಕೋಪರ್ನಿಕಸ್ ಪ್ರಕಾರ, 2024 ಬಹುಶಃ ದಾಖಲೆಯ ಅತ್ಯಂತ ಹೆಚ್ಚು ಉಷ್ಣತೆಯ ವರ್ಷ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



