ದೇಶ

ಮಹಾ ಶಿವರಾತ್ರಿ: ಮಹಾಕುಂಭ ಮೇಳಕ್ಕೆ ಇಂದು ತೆರೆ, 'ಅಂತಿಮ ಸ್ನಾನ ಆರಂಭ, ಭಕ್ತರ ಮೇಲೆ ಪುಷ್ಪವೃಷ್ಟಿ, ಬಿಗಿ ಭದ್ರತೆ

ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಲಿದ್ದು, ಅಂತಿಮ ಪವಿತ್ರ ಸ್ನಾನಕ್ಕಾಗಿ ಮುಂಜಾನೆಯಿಂದ ಲಕ್ಷಾಂತರ ಜನರು ಮಹಾಕುಂಭ ನಗರಕ್ಕೆ ಆಗಮಿಸುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಮಿಂದೆಳುತ್ತಿದ್ದಾರೆ.

ಮಹಾ ಶಿವರಾತ್ರಿ: ಮಹಾಕುಂಭ ಮೇಳಕ್ಕೆ ಇಂದು ತೆರೆ, 'ಅಂತಿಮ ಸ್ನಾನ ಆರಂಭ, ಭಕ್ತರ ಮೇಲೆ ಪುಷ್ಪವೃಷ್ಟಿ, ಬಿಗಿ ಭದ್ರತೆ
ತ್ರಿವೇಣಿ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
Published On :

ಪ್ರಯಾಗ್ ರಾಜ್: ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿರುವಂತೆಯೇ ಕಳೆದ 45 ದಿನಗಳಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಜಗತ್ತಿನ ದೊಡ್ಡ ಧಾರ್ಮಿಕ ಕಾರ್ಯಕ್ರಮ 'ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಲಿದೆ.

ಪೌಶ್ ಪೂರ್ಣಿಮೆಯ ದಿನವಾದ ಇಂದು ಅಂತಿಮ ಪವಿತ್ರ ಸ್ನಾನಕ್ಕಾಗಿ ಮುಂಜಾನೆಯಿಂದ ಲಕ್ಷಾಂತರ ಜನರು ಮಹಾಕುಂಭ ನಗರಕ್ಕೆ ಆಗಮಿಸುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಮಿಂದೆಳುತ್ತಿದ್ದಾರೆ.

'ಹರ ಹರ ಮಹಾದೇವ್' ಘೋಷಣೆಗಳ ನಡುವೆ,ಸಂಗಮ ಸ್ಥಳದಲ್ಲಿ ಅಥವಾ ಸಮೀಪವಿರುವ ವಿವಿಧ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದು, ಯಾವುದೇ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗದಂತೆ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದಾರೆ.

ತ್ರಿವೇಣಿ ಸಂಗಮದಲ್ಲಿ ಮಹಾಕುಂಭದ ಕೊನೆಯ 'ಸ್ನಾನ'ದಲ್ಲಿ ಭಾಗವಹಿಸುವ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಜನವರಿ 13ರಂದು ಪ್ರಾರಂಭವಾದ ಮಹಾಮೇಳ ಇಂದು ಮುಕ್ತಾಯಗೊಳ್ಳಲಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ 64 ಕೋಟಿಗೂ ಹೆಚ್ಚು ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾಶಿವರಾತ್ರಿಯು ಮಹತ್ವದ ಆಧ್ಯಾತ್ಮಿಕ ಕ್ಷಣವನ್ನು ಗುರುತಿಸುತ್ತಿದ್ದು, ಈ ಸಂಖ್ಯೆ 66 ಕೋಟಿ ಮೀರುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖನೌದಲ್ಲಿನ ತಮ್ಮ ನಿವಾಸದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಮುಂಜಾನೆ 4 ಗಂಟೆಯಿಂದಯಿಂದಲೇ ಪವಿತ್ರ ಸ್ನಾನವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಇಂದು ಮುಂಜಾನೆ 2 ಗಂಟೆಯ ಹೊತ್ತಿಗೆ 11.66 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮದಲ್ಲಿ ಮುಳುಗಿದ್ದಾರೆ. ಈ ಸಂಖ್ಯೆ ಮುಂದಿನ ಎರಡು ಗಂಟೆಗಳಲ್ಲಿ 25.64 ಲಕ್ಷಕ್ಕೆ ಏರಿದ್ದು, ಬೆಳಿಗ್ಗೆ 6 ರ ಹೊತ್ತಿಗೆ ಸುಮಾರು 41.11 ಲಕ್ಷ ಭಕ್ತರು ಸ್ನಾನ ಮಾಡಿದರು.

ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿಸಲಾದ ಮಹಾಕುಂಭ ಮೇಳದ ಕೊನೆಯ ದಿನದಂದು ದೇಶದ ನಾಲ್ಕು ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.