ನಾಯಿಯ ವಿಚಾರವಾಗಿ ವಿವಾದ: ಮಹಿಳೆ ಮೇಲೆ ಕಾರು ಹತ್ತಿಸಿ ಬರ್ಬರ ಹತ್ಯೆ!
ಸ್ಥಳೀಯರ ಮನೆಯಲ್ಲಿದ್ದ ಸಾಕು ನಾಯಿಗೆ ಪ್ರವಾಸಿ ಕುಟುಂಬ ತಂದಿದ್ದ ನಾಯಿ ತೊಂದರೆ ನೀಡುತ್ತಿತ್ತು. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಅಂತಿಮವಾಗಿ ಎರಡೂ ಕಡೆಯವರ ನಡುವೆ ಘರ್ಷಣೆಗೆ ಕಾರಣವಾಯಿತು.

ಗೋವಾ: ಸಾಕು ನಾಯಿಯ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದ ಪರಿಣಾಮ ಗೋವಾಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಸ್ಥಳೀಯ ಮಹಿಳೆ ಮೇಲೆ ಕಾರು ಹತ್ತಿಸಿ ಬರ್ಬರ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಹತ್ಯೆ ಆರೋಪದ ಮೇಲೆ ದೆಹಲಿಯ ಪ್ರವಾಸಿಗನನ್ನು ಗೋವಾದಲ್ಲಿ ಬಂಧಿಸಲಾಗಿದೆ. ಮಾಂಡ್ರೆಮ್‌ನಲ್ಲಿ ಸ್ಥಳೀಯ ಮಹಿಳೆಯೊಬ್ಬರು ಪ್ರವಾಸಿ ಕುಟುಂಬಕ್ಕೆ ನಾಯಿಯನ್ನು ತಮ್ಮ ಮನೆಯ ಬಳಿ ತರದಂತೆ ವಿನಂತಿಸಿಕೊಂಡ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾರಿಯಾ ಫೆಲಿಜ್ ಫೆರ್ನಾಂಡಿಸ್ ಪ್ರವಾಸಿಗರಿಗೆ ನಾಯಿಯನ್ನು ತಮ್ಮ ಮನೆಯಿಂದ ದೂರವಿಡುವಂತೆ ಹೇಳಿದರು.
ಸ್ಥಳೀಯರ ಮನೆಯಲ್ಲಿದ್ದ ಸಾಕು ನಾಯಿಗೆ ಪ್ರವಾಸಿ ಕುಟುಂಬ ತಂದಿದ್ದ ನಾಯಿ ತೊಂದರೆ ನೀಡುತ್ತಿತ್ತು. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಅಂತಿಮವಾಗಿ ಎರಡೂ ಕಡೆಯವರ ನಡುವೆ ಘರ್ಷಣೆಗೆ ಕಾರಣವಾಯಿತು.
ಪ್ರವಾಸಿ ಗುಂಪಿನಲ್ಲಿದ್ದ ಓರ್ವ ಮಹಿಳೆ ಫೆರ್ನಾಂಡಿಸ್ ಅವರ ಕೂದಲನ್ನು ಎಳೆದರು ಮತ್ತು ಆಕೆ ಕೆಳಗೆ ಬಿದ್ದರು. ಸ್ವಲ್ಪ ಸಮಯದ ನಂತರ, ಪ್ರವಾಸಿಗರಲ್ಲಿ ಒಬ್ಬರಾದ ದೀಪಕ್ ಬಾತ್ರಾ ಅತಿ ವೇಗದಲ್ಲಿ ಅವರ ಮೇಲೆ ಕಾರು ಚಾಲನೆ ಮಾಡಿ ಡಿಕ್ಕಿ ಹೊಡೆದರು ಎಂದು ಮೂಲಗಳು ತಿಳಿಸಿವೆ.
ಕಾರು ಬಲಿಪಶುವಿನ ದೇಹವನ್ನು ಸುಮಾರು 10 ಮೀಟರ್‌ಗಳಷ್ಟು ಎಳೆದೊಯ್ದಿತು ಮತ್ತು ಮಹಿಳೆಯ ಮಗ ಜೋಸೆಫ್ ರಕ್ಷಣೆ ಮಾಡಲು ಪ್ರಯತ್ನಿಸಿದಾಗ ಅವರ ಭುಜಕ್ಕೆ ಗಾಯವಾಗಿದೆ.
ಗೋವಾ ಪೊಲೀಸರು ದೀಪಕ್ ಬಾತ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



