ದೇಶ

ಭಾರತದ ಚುನಾವಣೆಗಳಲ್ಲಿ 'ವಿದೇಶಿ ಪ್ರಭಾವ'ದ ಬಗ್ಗೆ ಮಾಯಾವತಿ ಕಳವಳ

ಭಾರತದಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನೆಪದಲ್ಲಿ ಅಮೆರಿಕದ ಏಜೆನ್ಸಿಯೊಂದು 21 ಮಿಲಿಯನ್ ಡಾಲರ್‌ ಬೃಹತ್ ಪ್ರಮಾಣದ ಹಣ ನೀಡಿದೆ ಎಂದು ವರದಿಯಾಗಿರುವುದು ತುಂಬಾ ಆಘಾತಕಾರಿಯಾಗಿದೆ.

ಭಾರತದ ಚುನಾವಣೆಗಳಲ್ಲಿ 'ವಿದೇಶಿ ಪ್ರಭಾವ'ದ ಬಗ್ಗೆ ಮಾಯಾವತಿ ಕಳವಳ
ಬಿಎಸ್ ಪಿ ನಾಯಕಿ ಮಾಯಾವತಿ
Published On :

ಲಖನೌ: ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಭಾರತದ ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

"ಭಾರತದಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನೆಪದಲ್ಲಿ ಅಮೆರಿಕದ ಏಜೆನ್ಸಿಯೊಂದು 21 ಮಿಲಿಯನ್ ಡಾಲರ್‌ ಬೃಹತ್ ಪ್ರಮಾಣದ ಹಣ ನೀಡಿದೆ ಎಂದು ವರದಿಯಾಗಿರುವುದು ತುಂಬಾ ಆಘಾತಕಾರಿಯಾಗಿದೆ" ಎಂದು ಇಂದು ಬಿಎಸ್ ಪಿ ಬಿಡುಗಡೆ ಮಾಡಿದ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

"ದೇಶದ ಜನರು ಜಾಗರೂಕರಾಗಿರಬೇಕು ಮತ್ತು ಇದು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಲ್ಲಿ ಹಸ್ತಕ್ಷೇಪವೇ? ಎಂದು ಪ್ರಶ್ನಿಸಬೇಕು ಮತ್ತು ನಿಜವಾಗಿದ್ದರೆ ಇದರಿಂದ ಯಾರು ಲಾಭ ಪಡೆಯುತ್ತಿದ್ದಾರೆ" ಎಂದು ಕೇಳಿದ್ದಾರೆ.mus

ಬಿಲಿಯನೇರ್ ಎಲೋನ್ ಮಸ್ಕ್ ನೇತೃತ್ವದ ಯುಎಸ್ ಸರ್ಕಾರಿ ದಕ್ಷತೆ ಇಲಾಖೆ(DOGE) "ಭಾರತದಲ್ಲಿ ಮತದಾರರ ಮತದಾನ ಹೆಚ್ಚಿಸಲು 21 ಮಿಲಿಯನ್ ಡಾಲರ್ ಹಂಚಿಕೆ ಸೇರಿದಂತೆ ಹಲವಾರು ವೆಚ್ಚ ಕಡಿತ ಘೋಷಿಸಿದ ನಂತರ ಮಾಯಾವತಿ ಅವರ ಈ ಪ್ರತಿಕ್ರಿಯೆ ಬಂದಿದೆ.

ಶನಿವಾರ X ನಲ್ಲಿ ಪೋಸ್ಟ್ ಮಾಡಿದ DOGE ನೂರಾರು ಮಿಲಿಯನ್ ತೆರಿಗೆದಾರರ ಡಾಲರ್‌ ವೆಚ್ಚವಾಗುವ ಅನೇಕ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಅದರಲ್ಲಿ ಇಲಾಖೆ ಹೇಳುವಂತೆ, "ಭಾರತದಲ್ಲಿ ಮತದಾರರ ಮತದಾನ ಹೆಚ್ಚಿಸಲು ನೀಡಲಾಗಿದ್ದ 21 ಮಿಲಿಯನ್ ಡಾಲರ್ ಸಹ ಸೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.