ದೇಶ

ಬೆಂಗಳೂರಿಗೆ ಬರುತ್ತಿದ್ದಾಗ ತಮಿಳುನಟ Yogi babu ಕಾರಿಗೆ ಅಪಘಾತ! ಆಗಿದ್ದೇನು?

ಭಾನುವಾರ ಮುಂಜಾನೆ ವಾಲಾಜಪೇಟೆ ಟೋಲ್ ಪ್ಲಾಜಾ ಬಳಿ ನಟ ಯೋಗಿ ಬಾಬು ಅವರ ಕಾರು ಅಪಘಾತಕ್ಕೀಡಾಗಿದ್ದು, ವಾಹನವು ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ..

ಬೆಂಗಳೂರಿಗೆ ಬರುತ್ತಿದ್ದಾಗ ತಮಿಳುನಟ Yogi babu ಕಾರಿಗೆ ಅಪಘಾತ! ಆಗಿದ್ದೇನು?
ತಮಿಳುನಟ ಯೋಗಿಬಾಬು
Published On :

ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಯೋಗಿ ಬಾಬು ಅವರ ಕಾರು ಅಪಘಾತಕ್ಕೀಡಾಗಿದ್ದು, ನಟ ಬೆಂಗಳೂರಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಭಾನುವಾರ ಮುಂಜಾನೆ ವಾಲಾಜಪೇಟೆ ಟೋಲ್ ಪ್ಲಾಜಾ ಬಳಿ ನಟ ಯೋಗಿ ಬಾಬು ಅವರ ಕಾರು ಅಪಘಾತಕ್ಕೀಡಾಗಿದ್ದು, ವಾಹನವು ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಯೋಗಿ ಬಾಬು ಅವರ ವಾಹನ ಕಂಟ್ರೋಲ್‌ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ಕಾರು ಅಪಘಾತ ಸಂಬಂಧ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿವೆ.

ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ನಟ ಅಪಾಯದಿಂದ ಪಾರು

ಅಪಘಾತದಲ್ಲಿ ನಟ ಯೋಗಿ ಬಾಬು ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಯೋಗಿ ಬಾಬು ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಸ್ಪಷ್ಟನೆ ನೀಡಿದ ನಟ

ಇನ್ನು ಈ ಬಗ್ಗೆ ಸ್ವತಃ ನಟ ಯೋಗಿಬಾಬು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದು, 'ಯಾವುದೇ ವಂದಂತಿಗಳನ್ನು ನಂಬಬೇಡಿ. ನಾನು ಕ್ಷೇಮವಾಗಿದ್ದೇನೆ ಎಂದು ತಿಳಿಸಿದ್ದಾರೆ.

'ಅದು ಯಾವುದೋ ಕಂಪನಿ ಕಾರು. ಬ್ಯಾರಿಕೇಡ್‌ಗೆ ಚೂರು ತಾಗಿ ಘಟನೆ ನಡೆದಿದೆ ಅಷ್ಟೇ. ಎಲ್ಲರೂ ಕ್ಷೇಮವಾಗಿದ್ದೇವೆ, ಯಾರಿಗೂ ಯಾವುದೇ ಅನಾಹುತ ನಡೆದಿಲ್ಲ. ನಾನು ಅಲ್ಲಿ ಏನಾಗಿದೆ ಎಂಬುದನ್ನು ನೋಡಿ ಕೊನೆಗೆ ಎಲ್ಲರನ್ನೂ ಅಲ್ಲಿಂದ ಕಳಿಸಿಕೊಟ್ಟೆವು. ಸುಮ್ಮನೆ ಈ ಬಗ್ಗೆ ಏನೇನೋ ವದಂತಿಗಳು ಹಬ್ಬುತ್ತಿದೆ. ಅದೆಲ್ಲವೂ ಸುಳ್ಳು, ದಯವಿಟ್ಟು ಯಾರೂ ವದಂತಿಗಳನ್ನು ನಂಬಬೇಡಿ" ಎಂದು ಯೋಗಿ ಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.