ದೇಶ

ನಾಗಾ ಸಾಧುಗಳ ಕಿನ್ನಾರ್ ಅಖಾಡ 'ಮಹಾಮಂಡಲೇಶ್ವರ' ಆಗಿ ಮುಂದುವರೆಯುತ್ತೇನೆ: ಮಮತಾ ಕುಲಕರ್ಣಿ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜನವರಿ 24 ರಂದು ಮಮತಾ ಕುಲಕರ್ಣಿ ಅವರನ್ನು ಮಹಾಮಂಡಲೇಶ್ವರ ಆಗಿ ನೇಮಕ ಮಾಡಲಾಗಿತ್ತು.

ನಾಗಾ ಸಾಧುಗಳ ಕಿನ್ನಾರ್ ಅಖಾಡ 'ಮಹಾಮಂಡಲೇಶ್ವರ' ಆಗಿ ಮುಂದುವರೆಯುತ್ತೇನೆ: ಮಮತಾ ಕುಲಕರ್ಣಿ
ಮಮತಾ ಕುಲಕರ್ಣಿ
Published On :

ಮುಂಬೈ: ನನ್ನ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಹೀಗಾಗಿ ನಾಗಾ ಸಾಧುಗಳ ಕಿನ್ನಾರ್ ಅಖಾಡ 'ಮಹಾಮಂಡಲೇಶ್ವರ' ಆಗಿ ಮುಂದುವರಿಯುತ್ತೇನೆ ಎಂದು ಬಾಲಿವುಡ್ ಮಾಜಿ ನಟಿ ಮಮತಾ ಕುಲಕರ್ಣಿ ಅವರು ಶುಕ್ರವಾರ ಹೇಳಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜನವರಿ 24 ರಂದು ಮಮತಾ ಕುಲಕರ್ಣಿ ಅವರನ್ನು ಮಹಾಮಂಡಲೇಶ್ವರ ಆಗಿ ನೇಮಕ ಮಾಡಲಾಗಿತ್ತು. ಇದಕ್ಕೆ ಹಲವು ಭಕ್ತರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮಹಾಮಂಡಲೇಶ್ವರ ಸ್ಥಾನಕ್ಕೆ ಅವರು ರಾಜೀನಾಮೆ ಘೋಷಿಸಿದ್ದಾರೆ.

ಆದರೆ ಗುರುವಾರ ವಿಡಿಯೋವೊಂದರಲ್ಲಿ ಬಾಲಿವುಡ್ ಮಾಜಿ ನಟಿ "ಮಹಾಮಂಡಲೇಶ್ವರ ಹುದ್ದೆಗೆ ನನ್ನ ರಾಜೀನಾಮೆ ಅಂಗೀಕರಿಸಿಲ್ಲ. ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ನನ್ನನ್ನು ಉಳಿಸಿಕೊಂಡಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ" ಎಂದು ಹೇಳಿದ್ದಾರೆ.

ಕಿನ್ನಾರ್ ಅಖಾಡದ 'ಆಚಾರ್ಯ ಮಹಾಮಂಡಲೇಶ್ವರ' ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ಕುಲಕರ್ಣಿ ತಮ್ಮ ಹುದ್ದೆಯಲ್ಲಿ ಮುಂದುವರೆಯುತ್ತಾರೆ ಎಂದು ಪಿಟಿಐಗೆ ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.