ದೇಶ

ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ; 50,000 ಫಾಲೋಯರ್ಸ್ ಕಳೆದುಕೊಂಡ ರಣವೀರ್ ಅಲ್ಹಾಬಾದಿಯಾ

ರಣವೀರ್ ಅವರ ಹೇಳಿಕೆಗೆ ಪ್ರೇಕ್ಷಕರು ಮತ್ತು ಸಹ ಕಾಮಿಕ್ಸ್ ಜೋರಾಗಿ ನಕ್ಕರು. ಆದರೆ, ಅದು ಶೀಘ್ರದಲ್ಲೇ ವಿವಾದವನ್ನು ಹುಟ್ಟುಹಾಕಿತು. ರಣವೀರ್ ವಿರುದ್ಧ ಹಲವು ಕಡೆ ಪ್ರಕರಣ ದಾಖಲಾಯಿತು.

ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ; 50,000 ಫಾಲೋಯರ್ಸ್ ಕಳೆದುಕೊಂಡ ರಣವೀರ್ ಅಲ್ಹಾಬಾದಿಯಾ
ರಣವೀರ್ ಅಲ್ಹಾಬಾದಿಯಾ
Published On :

ನವದೆಹಲಿ: ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ರಿಯಾಲಿಟಿ ಶೋ "ಇಂಡಿಯಾಸ್ ಗಾಟ್ ಲ್ಯಾಟೆಂಟ್" ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಪಾಡ್‌ಕಾಸ್ಟರ್ ರಣವೀರ್ ಅಲ್ಹಾಬಾದಿಯಾ ಅವರ ಸಾಮಾಜಿಕ ಮಾಧ್ಯಮದ ಅನುಯಾಯಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

'ಬಿಯರ್‌ಬೈಸೆಪ್ಸ್' ಎಂಬ ಹೆಸರು ಹೊಂದಿರುವ ರಣವೀರ್ ಅಲ್ಹಾಬಾದಿಯಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 50,000 ಅನುಯಾಯಿಗಳು ಕಡಿಮೆಯಾಗಿದ್ದಾರೆ.

ಡೇಟಾ-ಚಾಲಿತ ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ವೇದಿಕೆಯಾದ HypeAuditor ಪ್ರಕಾರ, BeerBiceps ಫೆಬ್ರುವರಿ 9 ರಂದು 45.27 ಲಕ್ಷ Instagram ಅನುಯಾಯಿಗಳನ್ನು ಹೊಂದಿತ್ತು. ಅದಾದ ಮೂರು ದಿನಗಳ ನಂತರ, ಫೆಬ್ರುವರಿ 11 ರಂದು, ಅನುಯಾಯಿಗಳ ಸಂಖ್ಯೆ 44.80 ಲಕ್ಷಕ್ಕೆ ಇಳಿಯಿತು. 'ranveerallahbadia' ಎಂಬ ಹೆಸರಿನ ಅವರ ಇನ್ನೊಂದು ಖಾತೆಯಲ್ಲಿಯೂ ಭಾನುವಾರ 34.39 ಲಕ್ಷವಿದ್ದ ಅನುಯಾಯಿಗಳ ಸಂಖ್ಯೆ ಮಂಗಳವಾರ 34.21 ಲಕ್ಷಕ್ಕೆ ಕುಸಿದಿದೆ ಎಂದಿದೆ.

ಸಾಮಾಜಿಕ ಮಾಧ್ಯಮದ ಪ್ರಭಾವಿ ರಣವೀರ್ ಅಲ್ಹಾಬಾದಿಯಾ ಇತ್ತೀಚೆಗೆ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಕಂಟೆಂಟ್ ಕ್ರಿಯೇಟರ್ ಅಪೂರ್ವ ಮುಖಿಜಾ ಮತ್ತು ಕಾಮಿಕ್ಸ್ ಆಶಿಶ್ ಚಂಚಲಾನಿ ಮತ್ತು ಜಸ್ಪ್ರೀತ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಪೋಷಕರು ಮತ್ತು ಲೈಂಗಿಕತೆ ಕುರಿತಂತೆ ಅಶ್ಲೀಲ ಮತ್ತು ಅಸಭ್ಯ ಹೇಳಿಕೆಯನ್ನು ನೀಡಿದ್ದರು. ಈ ಕ್ಲಿಪ್ ವೈರಲ್ ಆಗಿತ್ತು ಮತ್ತು ರಣವೀರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ರಣವೀರ್ ಅವರ ಹೇಳಿಕೆಗೆ ಪ್ರೇಕ್ಷಕರು ಮತ್ತು ಸಹ ಕಾಮಿಕ್ಸ್ ಜೋರಾಗಿ ನಕ್ಕರು. ಆದರೆ, ಅದು ಶೀಘ್ರದಲ್ಲೇ ವಿವಾದವನ್ನು ಹುಟ್ಟುಹಾಕಿತು. ರಣವೀರ್ ವಿರುದ್ಧ ಹಲವು ಕಡೆ ಪ್ರಕರಣ ದಾಖಲಾಯಿತು.

ಇದು ವಿವಾದದ ಸ್ಪರೂಪ ಪಡೆದುಕೊಳ್ಳುತ್ತಿದ್ದಂತೆ ರಣವೀರ್ ಅಲ್ಹಾಬಾದಿಯಾ ಅವರು, ಕ್ಷಮೆಯಾಚಿಸಿದರು ಮತ್ತು ನಾನು ಆ ರೀತಿ ಹೇಳಬಾರದಿತ್ತು ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.