Stamp paper ಮೇಲೆ ಸಹಿ ಹಾಕಿ ವ್ಯಕ್ತಿಗೆ ತನ್ನ ಅಧಿಕಾರ-ಹಕ್ಕು ಹಸ್ತಾಂತರ ಮಾಡಿದ ಸರಪಂಚ್ ಸದಸ್ಯೆ!
ಜನವರಿ 24 ರಂದು ಜಿಲ್ಲೆಯ ದಾತಾ ಗ್ರಾಮ ಪಂಚಾಯತಿಯ ಸದಸ್ಯೆ (ಸರಪಂಚ್) ಕೈಲಾಶಿ ಬಾಯಿ ಕಛಾವಾ ಅವರು ಪಂಚಾಯತಿಯ ತಮ್ಮ ಸದಸ್ಯತ್ವದ ಅಧಿಕಾರ-ಹಕ್ಕುಗಳನ್ನು ದಾತಾ ಗ್ರಾಮದ ಸುರೇಶ್ ಗರಾಸಿಯಾ ಎಂಬಾತನಿಗೆ ವರ್ಗಾಯಿಸಿದ್ದಾರೆ.

ಭೂಪಾಲ್: ತಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ಪುರುಷನಿಗೆ ಹಸ್ತಾಂತರಿಸುವುದಾಗಿ ಮಹಿಳಾ ಸರಪಂಚ್ ಒಬ್ಬರು 500 ರೂಪಾಯಿಯ ಪೇಪರ್ ಮೇಲೆ ಒಪ್ಪಂದಕ್ಕೆ ಸಹಿ ಹಾಕಿರುವ ಘಟನೆ ಮಧ್ಯಪ್ರದೇಶದ ನೀಮೂಚ್ ಜಿಲ್ಲೆಯಲ್ಲಿ ನಡೆದಿದೆ.
ಜನವರಿ 24 ರಂದು ಜಿಲ್ಲೆಯ ದಾತಾ ಗ್ರಾಮ ಪಂಚಾಯತಿಯ ಸದಸ್ಯೆ (ಸರಪಂಚ್) ಕೈಲಾಶಿ ಬಾಯಿ ಕಛಾವಾ ಅವರು ಪಂಚಾಯತಿಯ ತಮ್ಮ ಸದಸ್ಯತ್ವದ ಅಧಿಕಾರ-ಹಕ್ಕುಗಳನ್ನು ದಾತಾ ಗ್ರಾಮದ ಸುರೇಶ್ ಗರಾಸಿಯಾ ಎಂಬಾತನಿಗೆ ವರ್ಗಾಯಿಸಿದ್ದಾರೆ. ಗ್ರಾಮಸ್ಥರೊಂದಿಗೆ ಒಪ್ಪಂದ ಮಾಡಿಕೊಂಡು ಅಧಿಕಾರ ಹಸ್ತಾಂತರಿಸಿರುವ ಕೈಲಾಶಿ ಅವರಿಗೆ ಜಿಲ್ಲಾ ಪಂಚಾಯತ್ ಸಿಇಒ ಅಮನ್ ವೈಷ್ಣವ್ ಅವರು ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈಲಾಶಿ ಬಾಯಿ ಅವರು ತಮ್ಮ ಸರಪಂಚ್ ಹಕ್ಕುಗಳನ್ನು ಸುರೇಶ್ ಎಂಬಾತನಿಗೆ ಹಸ್ತಾಂತರಿಸಿದ್ದಾರೆ ಎಂಬ ದೂರು ಬಂದಿದೆ. ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 40ರ ಅಡಿಯಲ್ಲಿ ಸರಪಂಚ್ ಸ್ಥಾನದಿಂದ ಕೈಲಾಶಿ ಅವರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೂ ಮುನ್ನ, ಆರೋಪಗಳ ಬಗ್ಗೆ ಕೈಲಾಶಿ ಅವರಿಂದ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಲಾಗಿದೆ.
ಗ್ರಾಮ ಪಂಚಾಯತಿ ಕಾರ್ಯದರ್ಶಿಗೂ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಉತ್ತರಗಳು ಬಂದ ಬಳಿಕ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಮನ್ ವೈಷ್ಣವ್ ಹೇಳಿದ್ದಾರೆ. ಒಪ್ಪಂದದ ಫೋಟೋ ಪ್ರತಿ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.
ಕೈಲಾಶಿ ಬಾಯಿ ಅವರು ಸಹಿ ಮಾಡಿರುವ ಸ್ಟಾಂಪ್ ಪೇಪರ್ನ ಛಾಯಾಚಿತ್ರವನ್ನು ಪಡೆದಿದ್ದೇವೆ. ಆದರೆ ಉತ್ತರ ಬಂದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


