ನಿಂತು ಹೋಗಬೇಕಿದ್ದ ಮದುವೆ, ಸರಿಯಾದ ಸಮಯಕ್ಕೆ ನೆರವು ನೀಡಿದ Blinkit
ಬ್ಲಿಂಕಿಟ್ ಡೆಲಿವರಿ ಸೇವಾ ಸಂಸ್ಥೆ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ಅದೂ ಕೂಡ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ.

ನವದೆಹಲಿ: ಮನೆ ಮಂದಿಯ ಗೊಂದಲದಿಂದಾಗಿ ಬಹುತೇಕ ನಿಂತೇ ಹೋಗಿದ್ದ ಮದುವೆಯನ್ನು Blinkit ಡೆಲಿವರಿ ಸೇವೆ ಸರಿಯಾದ ಸಮಯಕ್ಕೆ ನಡೆಯುವಂತೆ ಮಾಡಿರುವ ಅಪರೂಪದ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ಹೌದು.. ಬ್ಲಿಂಕಿಟ್ ಡೆಲಿವರಿ ಸೇವಾ ಸಂಸ್ಥೆ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ಅದೂ ಕೂಡ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ.
ಅಚ್ಚರಿಯಾದರೂ ಇದು ಸತ್ಯ.. ದೆಹಲಿಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿತ್ತು, ಎಲ್ಲಾ ವಿಧಿ ವಿಧಾನಗಳು ನಡೆಯುತ್ತಿದ್ದವು. ಇನ್ನೇನು ವರ ವಧುವಿಗೆ ಸಿಂಧೂರ ಹಚ್ಚಬೇಕು ಎನ್ನುವಷ್ಟರಲ್ಲಿ ತಾವು ಸಿಂಧೂರವನ್ನು ತಂದೇ ಇಲ್ಲ ಎಂಬುದು ಕುಟುಂಬಕ್ಕೆ ನೆನಪಾಗಿದೆ.
ಸಪ್ತಪದಿ ಮುಗಿದಿತ್ತು, ಪತ್ನಿ ಹಣೆಗೆ ಸಿಂಧೂರವಿಡಬೇಕು ಎನ್ನುವಷ್ಟರಲ್ಲಿ ಸಿಂಧೂರವಿರಲಿಲ್ಲ. ಹೀಗಾಗಿ ಉಭಯ ಕುಟುಂಬಗಳು ಗೊಂದಲಕ್ಕೀಡಾದವು.
ನೆರವಿಗೆ ಬಂದ ಬ್ಲಿಂಕಿಟ್
ಸಿಂಧೂರವಿಲ್ಲದ ಕಾರಣ ಮದುವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಅಲ್ಲಿಂದ ಹೊರಗೆ ಹೋಗಿ ಯಾರದರೂ ತರಬೇಕು ಎಂದರೆ ಅಷ್ಟರಲ್ಲಿ ಮಹೂರ್ತ ಮುಗಿದು ಹೋಗುತ್ತದೆ. ಹೀಗಾಗಿ ಕುಟುಂಬಸ್ಥರು ಹೊರಗಿನ ನೆರವಿಗೆ ಎದುರು ನೋಡುತ್ತಿದ್ದರು. ಇದೇ ಸಂರ್ಭದಲ್ಲಿ ನೆನಪಾಗಿದ್ದೇ ಬ್ಲಿಂಕಿಟ್..
ಗೊಂದಲಮಯ ಸ್ಥಿತಿಯಲ್ಲಿ ಭಯಭೀತರಾಗುವ ಅಥವಾ ಅಂಗಡಿಯನ್ನು ಹುಡುಕಲು ಕುಟುಂಬ ಸದಸ್ಯರನ್ನು ಕಳುಹಿಸುವ ಬದಲು, ಅವರು ಬ್ಲಿಂಕಿಟ್‌ನಲ್ಲಿ ತುರ್ತು ಆರ್ಡರ್ ಮಾಡಿದ್ದರು. ಅದರಂತೆ ಬ್ಲಿಂಕಿಟ್ ಸೇವಾ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸಿಂಧೂರವನ್ನು ಮದುವೆ ಮನೆಗೆ ತಲುಪಿಸಿದ್ದಾರೆ.
ಈ ವೇಳೆ ಅಲ್ಲಿ ನೆರೆದಿದ್ದ ಅತಿಥಿಗಳು ಚಪ್ಪಾಳೆ ಮತ್ತು ಹರ್ಷೋದ್ಗಾರದ ನಡುವೆ ವರನು ಮದುವೆ ಆಚರಣೆಯನ್ನು ಮುಗಿಸುತ್ತಾರೆ. ಬ್ಲಿಂಕಿಟ್ ಡೆಲಿವರಿ ಬಾಯ್ನನ್ನು ಸೈಲೆಂಟ್ ಸೂಪರ್ ಹೀರೋ ಎಂದು ಕರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



