ಚುನಾವಣಾ ಟ್ರಸ್ಟ್ಗಳ ದೇಣಿಗೆ: ಬಿಜೆಪಿಗೆ ಸಿಂಹಪಾಲು; ದೇಣಿಗೆಯಲ್ಲೂ ಕುಸಿತ ಕಂಡ ಕಾಂಗ್ರೆಸ್ ಪಕ್ಷ!
2024-25ರಲ್ಲಿ ಬಿಜೆಪಿಗೆ 3112 ಕೋಟಿ ರು. (ಶೇ.82), ಕಾಂಗ್ರೆಸ್ಗೆ 299 ಕೋಟಿ ರು.(ಶೇ.8), ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರು.(ಶೇ.10) ದೇಣಿಗೆ ನೀಡಲಾಗಿದೆ.

ನವದೆಹಲಿ: ಸುಪ್ರೀಂ ಕೋರ್ಟ್ ವಿವಾದಾತ್ಮಕ ಚುನಾವಣಾ ಬಾಂಡ್ಗಳನ್ನು ರದ್ದುಗೊಳಿಸಿದ ನಂತರ 2024-25ರಲ್ಲಿ ಚುನಾವಣಾ ಟ್ರಸ್ಟ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು ಮೂರು ಪಟ್ಟು ಹೆಚ್ಚಾಗಿದ್ದು, 3,811 ಕೋಟಿ ರೂ.ಗಳಿಗೆ ತಲುಪಿದೆ.
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ, ಕಳೆದ ಹಣಕಾಸು ವರ್ಷದಲ್ಲಿ ಪಡೆದ ದೇಣಿಗೆಗಳ ಕುರಿತು ಚುನಾವಣಾ ಆಯೋಗಕ್ಕೆ ವರದಿಯನ್ನು ಸಲ್ಲಿಸಿದೆ. ಗಡುವಿಗೆ ಎರಡು ದಿನಗಳ ಮೊದಲು ಡಿಸೆಂಬರ್ 8 ರಂದು ವರದಿಯನ್ನು ಸಲ್ಲಿಸಲಾಗಿದೆ. ಈ ಮಾಹಿತಿ ಈಗ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿದೆ. 2024-25ರಲ್ಲಿ ಬಿಜೆಪಿಗೆ 3112 ಕೋಟಿ ರು. (ಶೇ.82), ಕಾಂಗ್ರೆಸ್ಗೆ 299 ಕೋಟಿ ರು.(ಶೇ.8), ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರು.(ಶೇ.10) ದೇಣಿಗೆ ನೀಡಲಾಗಿದೆ.
ಇದು ಪ್ರಮುಖ ಚುನಾವಣಾ ಟ್ರಸ್ಟ್ಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯನ್ನಾಧರಿಸಿದ ಅಂಕಿ-ಅಂಶಗಳಾಗಿದ್ದು, ಇತರೆ ಸಣ್ಣಪುಟ್ಟ ಟ್ರಸ್ಟ್ಗಳು ಹಾಗೂ ನೋಂದಣಿಯಾಗದ ಮೂಲಗಳಿಂದಲೂ ರಾಜಕೀಯ ಪಕ್ಷಗಳಿಗೆ ಭಾರೀ ಪ್ರಮಾಣದ ದೇಣಿಗೆ ಹರಿದು ಬಂದಿದೆ. ಒಟ್ಟು13 ಚುನಾವಣಾ ಟ್ರಸ್ಟ್ಗಳಲ್ಲಿ 9 ಟ್ರಸ್ಟ್ಗಳು ತಮ್ಮ ದೇಣಿಗೆಯ ವಿವರವನ್ನು ಆಯೋಗಕ್ಕೆ ಸಲ್ಲಿಸಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಅವು ನೀಡಿದ ದೇಣಿಗೆ 3 ಪಟ್ಟು ಹೆಚ್ಚಾಗಿದೆ. ಕಳೆದ ಬಾರಿ ಈ ಟ್ರಸ್ಟ್ಗಳು 1,218 ಕೋಟಿ ರು. ನೀಡಿದ್ದವು.
2668 ಕೋಟಿ ರು. ದೇಣಿಗೆಯೊಂದಿಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಮೊದಲ ಸ್ಥಾನದಲ್ಲಿದೆ. ಇದರ ಬಹುಪಾಲು ದೇಣಿಗೆ ಬಿಜೆಪಿಗೆ ಹೋಗಿದೆ. ಜೊತೆಗೆ, ಕಾಂಗ್ರೆಸ್, ಟಿಎಂಸಿ, ಆಪ್, ಟಿಡಿಪಿ ಮತ್ತು ಇತರೆ ರಾಜಕೀಯ ಪಕ್ಷಗಳಿಗೂ ಹಣ ನೀಡಿದೆ. ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್, ಮೆಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಟರ್ ಲಿ., ಭಾರ್ತಿ ಏರ್ಟೆಲ್, ಅರವಿಂದೋ ಫಾರ್ಮಾ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಈ ಟ್ರಸ್ಟ್ನ ಪ್ರಮುಖ ದೇಣಿಗೆದಾರರಾಗಿದ್ದಾರೆ.
ಪ್ರೋಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್ 914.97 ಕೋಟಿ ರು. ದೇಣಿಗೆಯಾಗಿ ನೀಡಿದ್ದು, ಇದರ ಶೇ.80.82ರಷ್ಟು ಭಾಗ ಬಿಜೆಪಿಗೆ ಹೋಗಿದೆ. ಟಾಟಾ ಸ್ಟೀಲ್, ಟಾಟಾ ಸನ್ಸ್, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಪವರ್ ಮತ್ತು ಇತರೆ ಕಂಪನಿಗಳು ಈ ಟ್ರಸ್ಟ್ನ ದೇಣಿಗೆದಾರರಾಗಿದ್ದಾರೆ.
ಇನ್ನು ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ 160 ಕೋಟಿ ರು. ದೇಣಿಗೆ ನೀಡಿದ್ದು, ಇದರಲ್ಲಿ 150 ಕೋಟಿ ರು. ಬಿಜೆಪಿಗೆ ಹೋಗಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಗ್ರೂಪ್ ಕಂಪನಿಗಳು ಈ ಟ್ರಸ್ಟ್ನ ಪ್ರಮುಖ ದೇಣಿಗೆದಾರರು.
ಅದೇ ರೀತಿ ಹಾರ್ಮೋನಿ ಎಲೆಕ್ಟೋರಲ್ ಟ್ರಸ್ಟ್ ಬಿಜೆಪಿಗೆ 30.15 ಕೋಟಿ ದೇಣಿಗೆ ನೀಡಿದ್ದು, ಭಾರತ್ ಫೋರ್ಜ್ ಇದರ ಪ್ರಮುಖ ದೇಣಿಗೆದಾರರಾಗಿದ್ದಾರೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಗಳನ್ನು ಅಸಾಂವಿಧಾನಿಕ ಎಂದು ಹೇಳಿ ರದ್ದು ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



