ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!
ಜಮ್ಮುವಿನಲ್ಲಿ ನಿನ್ನೆ ದಾಖಲೆಯ 380 ಮಿ.ಮೀ ಮಳೆಯಾಗಿದೆ ಎಂದು ಎಂಇಟಿ ಕಾಶ್ಮೀರ ನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 380 ಮಿ.ಮೀ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಹಲವು ಕಡೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಮ್ಮುವಿನಲ್ಲಿ ನಿನ್ನೆ ದಾಖಲೆಯ 380 ಮಿ.ಮೀ ಮಳೆಯಾಗಿದೆ ಎಂದು ಎಂಇಟಿ ಕಾಶ್ಮೀರ ನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದ್ದಾರೆ.
"1988 ರಲ್ಲಿ ಜಮ್ಮುವಿನಲ್ಲಿ ದಾಖಲಾಗಿದ್ದ 270 ಮಿ.ಮೀ ಮಳೆಯ ಹಿಂದಿನ ದಾಖಲೆಯನ್ನು ಇದು ಮುರಿದಿದೆ. ಇದು ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ" ಎಂದು ಅವರು ಹೇಳಿದ್ದಾರೆ.
ಜಮ್ಮುವಿನಲ್ಲಿ ದಾಖಲೆಯ ಮಳೆಯ ಜೊತೆಗೆ, ಕತ್ರಾದಲ್ಲಿ 284 ಮಿ.ಮೀ ಮಳೆಯಾಗಿದೆ, ನಂತರ ರಿಯಾಸಿಯಲ್ಲಿ 282 ಮಿ.ಮೀ, ಸಾಂಬಾದಲ್ಲಿ 170 ಮಿ.ಮೀ, ದಾದಾದಲ್ಲಿ 130 ಮಿ.ಮೀ, ಕಥುವಾದಲ್ಲಿ 116.5 ಮಿ.ಮೀ, ಬನಿಹಾಲ್‌ನಲ್ಲಿ 83.8 ಮಿ.ಮೀ, ರಾಜೌರಿಯಲ್ಲಿ 57.4 ಮಿ.ಮೀ ಹಾಗೂ ಕಿಶ್ತ್ವಾರ್‌ನಲ್ಲಿ 49 ಮಿ.ಮೀ ಮಳೆಯಾಗಿದೆ.
ಜಮ್ಮು ಮತ್ತು ಜಮ್ಮು ಪ್ರದೇಶದ ಇತರ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮತ್ತು ಭಾರೀ ಮಳೆಯಾಗುತ್ತಿದೆ. ನಿರಂತರ ಭಾರೀ ಮಳೆಯಿಂದಾಗಿ ಜಮ್ಮುವಿನಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ತಗ್ಗು ಪ್ರದೇಶದ ಮನೆಗಳು ನೀರಿನಲ್ಲಿ ಮುಳುಗಿವೆ ಮತ್ತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಆಗಸ್ಟ್ 23 ರಂದು ಜಮ್ಮುವಿಗೆ ಆರೆಂಜ್ ಅಲರ್ಟ್ ನೀಡಲಾಗಿತ್ತು ಮತ್ತು ನಿರಂತರ ಮಳೆಯ ನಂತರ ಆಗಸ್ಟ್ 25 ರಂದು ರೆಡ್ ಅಲರ್ಟ್ ಘೋಷಿಸಲಾಗಿತ್ತು ಎಂದು ಮುಖ್ತಾರ್ ಹೇಳಿದ್ದಾರೆ.
"ಜಮ್ಮುವಿನಲ್ಲಿ ಇಷ್ಟೊಂದು ಮಳೆಯಾಗುತ್ತಿರುವುದು ಇದೇ ಮೊದಲು. ಜಮ್ಮು ನಗರದಲ್ಲಿ ಮಳೆನೀರಿನಲ್ಲಿ ಮನೆಗಳು ಮುಳುಗಿರುವುದನ್ನು ನಾನು ನನ್ನ ಜೀವನದಲ್ಲಿ ಇದೇ ಮೊದಲು ನೋಡಿದ್ದೇನೆ" ಎಂದು ಜಮ್ಮು ನಿವಾಸಿ ನವೀನ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



