ದೇಶ

ಮರಾಠ ಮೀಸಲಾತಿ: ಆಗಸ್ಟ್ 29 ರಂದು ಮುಂಬೈನಲ್ಲಿ ಮತ್ತೆ ಜಾರಂಗೆ ಪ್ರತಿಭಟನೆ

ಆಗಸ್ಟ್ 27 ರಂದು ಜಲ್ನಾ ಜಿಲ್ಲೆಯ ತಮ್ಮ ಅಂತರವಾಲಿ ಸಾರತಿ ಗ್ರಾಮದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಮುಂಬೈಗೆ ಹೊರಡುವುದಾಗಿ ತಿಳಿಸಿದ್ದಾರೆ.

ಮರಾಠ ಮೀಸಲಾತಿ: ಆಗಸ್ಟ್ 29 ರಂದು ಮುಂಬೈನಲ್ಲಿ ಮತ್ತೆ ಜಾರಂಗೆ ಪ್ರತಿಭಟನೆ
ಮನೋಜ್ ಜಾರಂಗೆ
Published On :

ಜಲ್ನಾ: ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಅವರು ಆಗಸ್ಟ್ 29 ರಂದು ಮುಂಬೈನಲ್ಲಿ ಹೊಸದಾಗಿ ಪ್ರತಿಭಟನೆ ಆರಂಭಿಸುವುದಾಗಿ ಗುರುವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, ಮರಾಠಾ ಸಮುದಾಯದ ಇತರ ಸದಸ್ಯರೊಂದಿಗೆ ಆಗಸ್ಟ್ 27 ರಂದು ಜಲ್ನಾ ಜಿಲ್ಲೆಯ ತಮ್ಮ ಅಂತರವಾಲಿ ಸಾರತಿ ಗ್ರಾಮದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಮುಂಬೈಗೆ ಹೊರಡುವುದಾಗಿ ತಿಳಿಸಿದ್ದಾರೆ.

ಎಲ್ಲಾ ಮರಾಠರನ್ನು(ಕುಂಬಿಸ್) ಇತರ ಹಿಂದುಳಿದ ವರ್ಗಗಳ ಕೋಟಾದಡಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ ಅವರು ಅನೇಕ ಬಾರಿ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದಾರೆ.

"ನಾವು ಆಗಸ್ಟ್ 27 ರಂದು ಬೆಳಗ್ಗೆ 10 ಗಂಟೆಗೆ ಅಂತರವಾಲಿ ಸಾರ್ತಿಯಿಂದ ಮುಂಬೈಗೆ ಹೊರಡುತ್ತೇವೆ. ಪುಣೆ ಜಿಲ್ಲೆಯ ಜುನ್ನಾರ್ ಪ್ರದೇಶದ ಶಿವನೇರಿ ಕೋಟೆಯ ಬಳಿ ನಾವು ಉಳಿದುಕೊಳ್ಳುತ್ತೇವೆ. ಅಂತರವಾಲಿಯಿಂದ ಶೇವ್‌ಗಾಂವ್, ಅಹಲ್ಯಾನಗರ ಮತ್ತು ಅಲೆಫಾಟಾ ಮೂಲಕ ಶಿವನೇರಿಗೆ ಹೋಗುತ್ತೇವೆ ಮತ್ತು ಮಳೆಗಾಲದ ಕಾರಣ ಮಲ್ಶೇಜ್ ಘಾಟ್ ಮೂಲಕ ಹೋಗುವುದಿಲ್ಲ" ಎಂದು ಜಾರಂಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.