ದೇಶ

Tamil Nadu: DMK ಸರ್ಕಾರಕ್ಕೆ ಡಬಲ್ ಆಘಾತ; ಸಚಿವ ಸ್ಥಾನಕ್ಕೆ Senthil Balaji, K Ponmudy ರಾಜಿನಾಮೆ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ತಮಿಳುನಾಡು ಸಚಿವರಾದ ವಿ ಸೆಂಥಿಲ್ ಬಾಲಾಜಿ (V Senthil Balaji) ಮತ್ತು ಕೆ. ಪೊನ್ಮುಡಿ (K Ponmudy) ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Tamil Nadu: DMK ಸರ್ಕಾರಕ್ಕೆ ಡಬಲ್ ಆಘಾತ; ಸಚಿವ ಸ್ಥಾನಕ್ಕೆ Senthil Balaji, K Ponmudy ರಾಜಿನಾಮೆ
ವಿ ಸೆಂಥಿಲ್ ಬಾಲಾಜಿ ಮತ್ತು ಕೆ. ಪೊನ್ಮುಡಿ
Published On :

ಚೆನ್ನೈ: ತಮಿಳುನಾಡಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು ಡಿಎಂಕೆ ಸರ್ಕಾರದ ಇಬ್ಬರು ಪ್ರಮುಖ ಸಚಿವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಹೌದು.. ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ತಮಿಳುನಾಡು ಸಚಿವರಾದ ವಿ ಸೆಂಥಿಲ್ ಬಾಲಾಜಿ (V Senthil Balaji) ಮತ್ತು ಕೆ. ಪೊನ್ಮುಡಿ (K Ponmudy) ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಶಿಫಾರಸಿನ ಮೇರೆಗೆ ರಾಜ್ಯಪಾಲ ಆರ್.ಎನ್. ರವಿ ಭಾನುವಾರ ಸಚಿವರಾದ ವಿ. ಸೆಂಥಿಲ್‌ಬಾಲಾಜಿ ಮತ್ತು ಕೆ. ಪೊನ್ಮುಡಿ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಸೆಂಥಿಲ್ ಬಾಲಾಜಿ ವಿರುದ್ಧ ಅಕ್ರಮ ಹಣವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೇ ವಿಚಾರವಾಗಿ ಈ ಹಿಂದೆ ಇಡಿ ಅವರನ್ನು ಬಂಧಿಸಿತ್ತು. ಅಂತೆಯೇ ಇಂದು ರಾಜಿನಾಮೆ ನೀಡಿರುವ ಕೆ ಪೊನ್ಮುಡಿ ಕೂಡ ಹಿಂದೂ ಧರ್ಮದ ಕುರಿತು ಮತ್ತು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವಿಪಕ್ಷಗಳು ಮಾತ್ರವಲ್ಲದೇ ಸ್ವಪಕ್ಷೀಯರಿಂದಲೂ ಟೀಕೆ ಎದುರಿಸಿದ್ದರು.

ಖಾತೆ ಪುನರ್ ಹಂಚಿಕೆ

ರಾಜಭವನದ ಅಧಿಕೃತ ಪ್ರಕಟಣೆಯ ಪ್ರಕಾರ, ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್ ಅವರಿಗೆ ವಿದ್ಯುತ್ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದ್ದು, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಎಸ್. ಮುತ್ತುಸಾಮಿ ಅವರಿಗೆ ನಿಷೇಧ ಮತ್ತು ಅಬಕಾರಿ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.

ಅಂತೆಯೇ ಗಮನಾರ್ಹ ಪುನರ್ರಚನೆಯಲ್ಲಿ, ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಆರ್.ಎಸ್. ರಾಜಕಣ್ಣಪ್ಪನ್ ಅವರನ್ನು ಅರಣ್ಯ ಮತ್ತು ಖಾದಿ ಸಚಿವರನ್ನಾಗಿ ಮರುನಾಮಕರಣ ಮಾಡಲಾಗಿದೆ. ಏತನ್ಮಧ್ಯೆ, ಮಾಜಿ ಸಚಿವ ಟಿ. ಮನೋ ತಂಗರಾಜ್ ಅವರು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಮತ್ತು ಹಾಲು ಮತ್ತು ಡೈರಿ ಅಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ. ಮನೋ ತಂಗರಾಜ್ ಅವರ ಪ್ರಮಾಣವಚನ ಸಮಾರಂಭವು ಏಪ್ರಿಲ್ 28 ರ ಸೋಮವಾರ ರಾಜಭವನದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.