ದೇಶ

Pahalgam attack: ಕೇಕ್ ಕತ್ತರಿಸಿ ಸಂಭ್ರಮಿಸಿದ್ರಾ ಭಾರತದ ಪಾಕ್ ರಾಯಭಾರ ಕಚೇರಿ ಅಧಿಕಾರಿಗಳು? Video Viral

ಭಾರತ ಮಾತ್ರವೇ ಅಲ್ಲ ಇಡೀ ಜಗತ್ತನ್ನೇ ಬೆಚ್ಚಿ ಬೀಳುವಂತಹ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದು, 28 ಮಂದಿ ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದಾರೆ.

Pahalgam attack: ಕೇಕ್ ಕತ್ತರಿಸಿ ಸಂಭ್ರಮಿಸಿದ್ರಾ ಭಾರತದ ಪಾಕ್ ರಾಯಭಾರ ಕಚೇರಿ ಅಧಿಕಾರಿಗಳು? Video Viral
ಪಾಕ್ ರಾಯಭಾರ ಕಚೇರಿಗೆ ಬಂದ ಕೇಕ್
Published On :

ನವದೆಹಲಿ: ಪೆಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ಮೇಲಿನ ಉಗ್ರ ದಾಳಿಗೆ ಇಡೀ ವಿಶ್ವವೇ ಆಘಾತ ವ್ಯಕ್ತಪಡಿಸುತ್ತಿದ್ದರೆ ಇತ್ತ ಭಾರತದಲ್ಲೇ ಇರುವ ಪಾಕಿಸ್ತಾನ ರಾಯಭಾರ ಕಚೇರಿ ಮಾತ್ರ ಕೇಕ್ ಕತ್ತರಿಸುವ ಮೂಲಕ ಹತ್ಯಾಂಕಾಂಡವನ್ನು ಸಂಭ್ರಮಿಸಿದೆ ಎಂದು ಹೇಳಲಾಗಿದೆ.

ಹೌದು.. ಭಾರತ ಮಾತ್ರವೇ ಅಲ್ಲ ಇಡೀ ಜಗತ್ತನ್ನೇ ಬೆಚ್ಚಿ ಬೀಳುವಂತಹ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದು, 28 ಮಂದಿ ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದಾರೆ.

ಈ ಭೀಕರ ಹತ್ಯಾಕಾಂಡದ ಬೆನ್ನಲ್ಲೇ ಭಾರತ ತನ್ನ ದೇಶದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಅಧಿಕಾರಿಗಳನ್ನು ದೇಶದಿಂದ ಹೊರಹೋಗುವಂತೆ ಸೂಚಿಸಿದೆ. ನರಮೇಧ ಬೆನ್ನಲ್ಲೆ ಪಾಕಿಸ್ತಾನ ರಾಯಭಾರಿಗಳಿಗೆ ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೇಕ್ ಕತ್ತರಿಸಿ ಸಂಭ್ರಮ?

ಇನ್ನು ಭಾರತ ಸರ್ಕಾರ ಅತ್ತ ದೇಶ ಬಿಟ್ಟು ತೊಲಗುವಂತೆ ಸೂಚನೆ ನೀಡಿದ ಬೆನ್ನಲ್ಲೇ ಇತ್ತ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ತಮ್ಮ ಕಚೇರಿಗೆ ಕೇಕ್ ತರಿಸಿಕೊಂಡು ಸಂಭ್ರಮಾಚರಣೆಗೆ ಮುಂದಾಗಿದ್ದರು ಎನ್ನಲಾಗಿದೆ. ಪಾಕ್ ಅಧಿಕಾರಿಗಳು ಕಚೇರಿಯಿಂದ ಹೊರ ಹೋಗುವಾಗ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಅಧಿಕಾರಿಗಳು ಭಾರತೀಯ ಹತ್ಯೆಯನ್ನು ಸಂಭ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಹೀನ ಮನಸ್ಥಿತಿ ಪಾಕಿಸ್ತಾನದವರಿಗೆ ಬಿಟ್ಟು ಬೇರಾರಿಗೂ ಬರಲು ಸಾಧ್ಯವಿಲ್ಲವೆಂದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾರತ ಬಿಟ್ಟು ತೊಲಗಿ ಎಂದ ಕೇಂದ್ರ ಸರ್ಕಾರ

ಇನ್ನು ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ದೇಶದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಭಾರತ ಸರ್ಕಾರ 48 ಗಂಟೆಗಳಲ್ಲಿ ದೇಶ ತೊರೆಯುವಂತೆ ಘೋಷಿಸಿದೆ. ಘಟನೆ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಲ್ಲಿ ಪಾಕ್ ರಾಯಭಾರಿ ಕಚೇರಿ ತೊರೆಯುವಂತೆ ಪಾಕಿಸ್ತಾನ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದು ಪ್ರಮುಖ ಕ್ರಮವಾಗಿದೆ. ಪಾಕಿಸ್ತಾನ ಎಲ್ಲ ನಾಗರಿಕರ ವಿಸಾ ರದ್ದು ಮಾಡಿ ಕ್ರಮವಹಿಸಲಾಗಿದೆ. ಪಾಕ್ ವಿರುದ್ಧ ಇನ್ನಷ್ಟು ಕ್ರಮಗಳು ಜರುಗುವ ಸಾಧ್ಯತೆ ಇದೆ. ಪಾಕ್ ಅಧಿಕಾರಿಗಳು ವಾರದೊಳಗೆ ದೇಶ ತೊರೆಯಬೇಕು. ಪಾಕ್ ರಾಜತಾಂತ್ರಿಕ ಚೇರಿ ಬಂದ್ ಮಾಡುವಂತೆ ನಿರ್ಧಾರ ಕೈಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.