ನವದಂಪತಿಗಳಿಗೆ Blue Drum ಗಿಫ್ಟ್: ಬೇಸ್ತು ಬಿದ್ದ ವರ, ಬಿದ್ದು ಬಿದ್ದು ನಕ್ಕ ಸಂಬಂಧಿಕರು! Video Viral
ಸಂಬಂಧಿಕರ ಈ ವಿಶೇಷ ಉಡುಗೊರೆ ನೋಡಿದ ವರ ಬೇಸ್ತು ಬಿದ್ದರೆ ಪಕ್ಕದಲ್ಲೇ ಇದ್ದ ವಧು ಮತ್ತು ಸಮಾರಂಭದಲ್ಲಿ ಹಾಜರಿದ್ದ ಸಂಬಂಧಿಕರು ಬಿದ್ದು ಬಿದ್ದು ನಕ್ಕಿದ್ದಾರೆ.

ಲಖನೌ: ಮೀರತ್ ನ ಸೌರವ್ ರಜಪೂತ್ ಕೊಲೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಉತ್ತರ ಪ್ರದೇಶದಲ್ಲಿ ನವದಂಪತಿಗಳಿಗೆ Blue Drum ಗಿಫ್ಟ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವರನ ಕಡೆಯ ಅತಿಥಿಗಳ ಗುಂಪೊಂದು ನವದಂಪತಿಗಳಿ ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸಂಬಂಧಿಕರ ಈ ವಿಶೇಷ ಉಡುಗೊರೆ ನೋಡಿದ ವರ ಬೇಸ್ತು ಬಿದ್ದರೆ ಪಕ್ಕದಲ್ಲೇ ಇದ್ದ ವಧು ಮತ್ತು ಸಮಾರಂಭದಲ್ಲಿ ಹಾಜರಿದ್ದ ಸಂಬಂಧಿಕರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ನೀಲಿ ಡ್ರಮ್ ಏಕೆ?
ಈ ನೀಲಿ ಡ್ರಮ್ ಉತ್ತರ ಪ್ರದೇಶ ಮಾತ್ರವಲ್ಲ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೀಡಾದ ಅಪರಾಧ ಪ್ರಕರಣದ ಕೇಂದ್ರಬಿಂದುವೇ ಈ ನೀಲಿ ಬಣ್ಣದ ಡ್ರಮ್. ಇದೇ ಉತ್ತರ ಪ್ರದೇಶದ ಮೀರತ್ ನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕ್ರೂರವಾಗಿ ಕೊಂದು ಬಳಿಕ ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಇದೇ ರೀತಿಯ ನೀಲಿ ಡ್ರಮ್ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ಹಾಕಿ ಮುಚ್ಚಿ ಹಾಕಿದ್ದಳು.
ಇದೀಗ ಇದೇ ರೀತಿಯ ಡ್ರಮ್ ಅನ್ನು ವರನ ಸ್ನೇಹಿತರು ಗಿಫ್ಟ್ ನೀಡಿರುವುದು ಮದುವೆ ಗಂಡಿನ ಮುಜುಗರಕ್ಕೆ ಕಾರಣವಾಗಿದೆ. ವೇದಿಕೆ ಮೇಲಿದ್ದ ವರ ಇದನ್ನು ನೋಡಿ ಆಘಾತಕ್ಕೊಳಗಾದರೆ, ಪಕ್ಕದಲ್ಲೇ ಇದ್ದ ಆತನ ಪತ್ನಿ ನಕ್ಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಆದರೆ ವರನ ಕಡೆಯವರ ಈ ನಡೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, "ಇದಕ್ಕಿಂತ ಕೆಟ್ಟ ಜೋಕ್ ಏನಿರಬಹುದು! ಮದುವೆಯಂತಹ ಸಂತೋಷದ ಸಂದರ್ಭದಲ್ಲಿ ಘೋರ ತಮಾಷೆಯಾಗಿ ನೆನಪಿಸಿಕೊಳ್ಳುವುದು ಸಂಪೂರ್ಣವಾಗಿ ಸೂಕ್ತವಲ್ಲ" ಎಂದು ಕೆಲವರು ಕಿಡಿಕಾರುತ್ತಿದ್ದಾರೆ. "ಜಗತ್ತು ಮಾನಸಿಕ ಅಸ್ವಸ್ಥವಾಗಿದೆ, ಜನರು ಪ್ರತಿ ಬೀದಿಯಲ್ಲಿ ಗೇಲಿ ಮಾಡುತ್ತಿದ್ದಾರೆ, ಆದರೆ ಅದು ತನಗೇ ಸಂಭವಿಸಿದಾಗ, ಅವರಿಗೆ ಇತರರ ನೋವು ಅರ್ಥವಾಗುತ್ತದೆ ಎಂದು ಮತ್ತೋರ್ವ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



