ದೇಶ

'ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ': ಪತ್ನಿ, ಅತ್ತೆ-ಮಾವರಿಂದ ದೌರ್ಜನ್ಯ; ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್!

ಯಾದವ್ ಗುರುವಾರ ಇಟಾವಾ ರೈಲ್ವೆ ನಿಲ್ದಾಣದ ಹೊರಗಿರುವ ಜಾಲಿ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು. ಮರುದಿನ ಬೆಳಿಗ್ಗೆ ಅವರು ತಮ್ಮ ಕೊಠಡಿಯಿಂದ ಹೊರಬಂದಿರಲಿಲ್ಲ.

'ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ': ಪತ್ನಿ, ಅತ್ತೆ-ಮಾವರಿಂದ ದೌರ್ಜನ್ಯ; ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್!
Published On :

ಲಕ್ನೋ: ಉತ್ತರ ಪ್ರದೇಶದ ಇಟಾವಾದಲ್ಲಿ 33 ವರ್ಷದ ಎಂಜಿನಿಯರ್ ಒಬ್ಬರು ತಮ್ಮ ಪತ್ನಿ ಮತ್ತು ಅತ್ತೆಯ ಮೇಲೆ ಕಿರುಕುಳದ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೋಹಿತ್ ಯಾದವ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಅತ್ತೆ-ಮಾವ ಬೆದರಿಕೆಯೊಡ್ಡಿದ್ದಾರೆ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. 'ನನ್ನ ಮರಣದ ನಂತರವೂ ನನಗೆ ನ್ಯಾಯ ಸಿಗದಿದ್ದರೆ, ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ' ಎಂದು ಅವರು ಹೇಳಿದ್ದಾರೆ.

ಯಾದವ್ ಗುರುವಾರ ಇಟಾವಾ ರೈಲ್ವೆ ನಿಲ್ದಾಣದ ಹೊರಗಿರುವ ಜಾಲಿ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು. ಮರುದಿನ ಬೆಳಿಗ್ಗೆ ಅವರು ತಮ್ಮ ಕೊಠಡಿಯಿಂದ ಹೊರಬಂದಿರಲಿಲ್ಲ. ಸಂಜೆ ಕೊಠಡಿಯನ್ನು ಹೋಟೆಲ್ ಸಿಬ್ಬಂದಿ ಪರಿಶೀಲಿಸಿದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಯ್ ನಾಥ್ ತ್ರಿಪಾಠಿ ತಿಳಿಸಿದ್ದಾರೆ.

ಔರೈಯಾ ಜಿಲ್ಲೆಯ ನಿವಾಸಿಯಾದ ಯಾದವ್, ಸಿಮೆಂಟ್ ಕಂಪನಿಯಲ್ಲಿ ಫೀಲ್ಡ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2023ರಲ್ಲಿ ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಬಿಹಾರದಲ್ಲಿ ಪ್ರಿಯಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ವೇಳೆ ಗರ್ಭಿಣಿಯಾಗಿದ್ದ ಪ್ರಿಯಾರಿಗೆ ಆಕೆಯ ತಾಯಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಯಾದವ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಪ್ರಿಯಾಳ ಆಭರಣಗಳನ್ನು ತನ್ನ ಅತ್ತೆ ಅವರ ಬಳಿ ಇಟ್ಟುಕೊಂಡಿದ್ದರು. ನಾವು ಮದುವೆಯಾದಾಗ ವರದಕ್ಷಿಣೆಗೆ ಬೇಡಿಕೆ ಇಟ್ಟಿರಲಿಲ್ಲ. ಆದರೆ, ನನ್ನ ಪತ್ನಿ ತನ್ನ ಕುಟುಂಬದ ಎಲ್ಲ ಸದಸ್ಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

'ನನ್ನ ಮನೆ ಮತ್ತು ಆಸ್ತಿಯನ್ನು ಅವಳ ಹೆಸರಿಗೆ ನೋಂದಾಯಿಸದಿದ್ದರೆ, ನನ್ನ ಕುಟುಂಬವನ್ನು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ನನ್ನ ಹೆಂಡತಿ ನನಗೆ ಬೆದರಿಕೆ ಹಾಕಿದ್ದಳು. ಅವಳ ತಂದೆ ಮನೋಜ್ ಕುಮಾರ್ ಸುಳ್ಳು ದೂರು ದಾಖಲಿಸಿದರು ಮತ್ತು ಅವಳ ಸಹೋದರ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅಂದಿನಿಂದ, ತನ್ನ ಹೆಂಡತಿ ಪ್ರತಿದಿನ ತನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದಳು' ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಈ ವಿಡಿಯೋ ನಿಮಗೆ ಸಿಗುವ ಹೊತ್ತಿಗೆ, ನಾನು ಈ ಲೋಕದಿಂದ ದೂರವಾಗಿರುತ್ತೇನೆ. ಮಹಿಳೆಯರ ಸುಳ್ಳು ಆರೋಪಗಳಿಂದ ಪುರುಷರನ್ನು ರಕ್ಷಿಸುವ ಒಂದು ಕಾನೂನು ಇದ್ದಿದ್ದರೆ ನಾನು ಈ ಹೆಜ್ಜೆ ಇಡುತ್ತಿರಲಿಲ್ಲ. ನನ್ನ ಹೆಂಡತಿ ಮತ್ತು ಆಕೆಯ ಕುಟುಂಬದಿಂದ ಕಿರುಕುಳವನ್ನು ನಾನು ಸಹಿಸಲಾರೆ' ಎಂದಿದ್ದಾರೆ. ತನ್ನ ಹೆತ್ತವರಲ್ಲಿ ಕ್ಷಮೆಯಾಚಿಸಿರುವ ಯಾದವ್, ತನ್ನ ಮರಣದ ನಂತರವೂ ನ್ಯಾಯ ಸಿಗದಿದ್ದರೆ ತನ್ನ ಅಸ್ಥಿಯನ್ನು ಚರಂಡಿಗೆ ಎಸೆಯುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.