Instagram ರೀಲ್ಸ್ ಮಾಡಲು ಹೋದ ತಾಯಿ ನೀರು ಪಾಲು; ಮಗು ಹಿಡಿದಿದ್ದ ಮೊಬೈಲ್ ನಲ್ಲಿ ದೃಶ್ಯ ಸೆರೆ! Video
ಇನ್ ಸ್ಟಾಗ್ರಾಂ ರೀಲ್ಸ್ ಮಾಡಲು ಮಣಿಕರ್ಣಿಕಾ ಘಾಟ್ನ ಭಾಗೀರಥಿ ನದಿಗೆ ಇಳಿದಿದ್ದಾರೆ. ಈ ವೇಳೆ ಮಹಿಳೆ ಕಾಲು ಜಾರಿದ್ದು, ಕೂಡಲೇ ನೀರಿನ ವೇಗಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ಡೆಹ್ರಾಡೂನ್: ನದಿ ನೀರಿನಲ್ಲಿ ರೀಲ್ಸ್ ಮಾಡಲು ಹೋಗಿ ತಾಯಿಯೊಬ್ಬಳು ಕೊಚ್ಚಿ ಹೋಗಿದ್ದು, ಈ ದೃಶ್ಯ ಆಕೆಯ ಮಗಳು ಹಿಡಿದಿದ್ದ ಮೊಬೈಲ್ ನಲ್ಲಿ ಸೆರೆಯಾಗಿದೆ.
ಉತ್ತರಾಖಂಡದ ಮಣಿಕರ್ಣಿಕಾ ಘಾಟ್ ನ ಭಾಗಿರಥಿ ನದಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 35 ವರ್ಷದ ವಿಶೇಷ್ಠ ಎಂದು ಗುರುತಿಸಲಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಕೊಚ್ಚಿ ಹೋಗಿರುವ ಮಹಿಳೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಸೋಮವಾರ ನೇಪಾಳ ಮೂಲದ 35 ವರ್ಷದ ವಿಶೇಷ್ಠ ಇನ್ ಸ್ಟಾಗ್ರಾಂ ರೀಲ್ಸ್ ಮಾಡಲು ಮಣಿಕರ್ಣಿಕಾ ಘಾಟ್ನ ಭಾಗೀರಥಿ ನದಿಗೆ ಇಳಿದಿದ್ದಾರೆ. ಈ ವೇಳೆ ಮಹಿಳೆ ಕಾಲು ಜಾರಿದ್ದು, ಕೂಡಲೇ ನೀರಿನ ವೇಗಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಇದೇ ಸಂದರ್ಭದಲ್ಲಿ ಮತ್ತೊಂದು ಬದಿಯಲ್ಲಿದ್ದ ಆಕೆಯ ಪುಟ್ಟ ಮಗಳು ಮೊಬೈಲ್ ನಲ್ಲಿ ಇದರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದು, ಮಗುವಿಗೆ ಏನಾಗುತ್ತಿದೆ ಎಂಬುದು ತಿಳಿಯದೇ ಮಗು ಮಮ್ಮಿ.. ಮಮ್ಮಿ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸ್ಥಳೀಯರಿಂದ ಮಾಹಿತಿ: ಸ್ಥಳಕ್ಕಾಗಮಿಸಿದ ಅಧಿಕಾರಿಗಳು
ಇನ್ನು ಮಹಿಳೆ ಕೊಚ್ಚಿ ಹೋದ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ತ್ವರಿತ ಪ್ರತಿಕ್ರಿಯೆ ತಂಡ (QRT) ಸಮಗ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಈ ಕುರಿತು ಮಾಹಿತಿ ನೀಡಿರುವ SDRF ಇನ್ಸ್ಪೆಕ್ಟರ್ ಕವೀಂದ್ರ ಸಜ್ವಾನ್, 'ಘಾಟ್ನಿಂದ ಕೆಳಗಿರುವ ಜೋಶಿಯಾದ ಬ್ಯಾರೇಜ್ನ ನದಿ ಮತ್ತು ಸರೋವರದಲ್ಲಿ ರಾಫ್ಟ್ ಮತ್ತು ದೋಣಿಗಳನ್ನು ನಿಯೋಜಿಸಲಾಗಿದೆ. ಉಜೇಲಿ ಪೋಸ್ಟ್ನ ಎಸ್ಡಿಆರ್ಎಫ್ ಘಟಕವು ಆಳವಾದ ಡೈವರ್ಗಳನ್ನು ಬಳಸಿಕೊಂಡು ಸಂಪೂರ್ಣ ಹುಡುಕಾಟ ನಡೆಸುತ್ತಿದೆ. ಗುರುವಾರದಾದ್ಯಂತ ನಿರಂತರ ಪ್ರಯತ್ನಗಳ ಹೊರತಾಗಿಯೂ, ಮಹಿಳೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ನೇಪಾಳದ ಕಠ್ಮಂಡುವಿನ ನಿವಾಸಿ ಪೂರ್ಣ ಶಾಹಿ ಎಂಬುವವರು ತನ್ನ ಪತ್ನಿ ವಿಶೇಷ್ಠ ಮತ್ತು ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದ ಅವರ 10 ವರ್ಷದ ಮಗಳು ಇಂಪ್ರೆಸ್ಸಾ ಜೊತೆ ಉತ್ತರಾಖಂಡಕ್ಕೆ ಬಂದಿದ್ದರು. ಆದರೆ ನದಿ ಬಳಿ ಹೋದಾಗ ಈ ದುರಂತ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



