'ಹಣ, ಖ್ಯಾತಿ, ಮಾನಸಿಕ ಆರೋಗ್ಯ ಕಳೆದುಕೊಂಡೆ': ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಣವೀರ್ ಅಲ್ಹಾಬಾದಿಯಾ
ಬುಧವಾರ ನಡೆದ ಇನ್ಸ್ಟಾಗ್ರಾಂ ಪ್ರಶ್ನೋತ್ತರ ಅವಧಿಯಲ್ಲಿ, ಅಲ್ಹಾಬಾದಿಯಾ ಅವರು ಘಟನೆಯಿಂದ ಏನು ಕಳೆದುಕೊಂಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಮುಂಬೈ: ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ರಿಯಾಲಿಟಿ ಶೋ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು 'ಅಶ್ಲೀಲ ಮತ್ತು ಅಸಭ್ಯ' ಹೇಳಿಕೆ ನೀಡಿದ ಯೂಟ್ಯೂಬರ್ ಮತ್ತು ಪಾಡ್ಕಾಸ್ಟರ್ ರಣವೀರ್ ಅಲ್ಹಾಬಾದಿಯಾ, ಕಳೆದ ಕೆಲವು ತಿಂಗಳು ಕಠಿಣ ಸಮಯವಾಗಿತ್ತು. ಈ ವಿವಾದವು ತನ್ನ ಮೇಲೆ ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಭಾರಿ ಪರಿಣಾಮ ಬೀರಿತು ಎಂದಿದ್ದಾರೆ.
31 ವರ್ಷದ ರಣವೀರ್ ಅವರು ಈ ವರ್ಷದ ಆರಂಭದಲ್ಲಿ, ಈಗ ಅಳಿಸಲಾಗಿರುವ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಎಂಬ ಯೂಟ್ಯೂಬ್ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ವೈರಲ್ ಆಯಿತು ಮತ್ತು ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ನಂತರ, ಅಲ್ಹಾಬಾದಿಯಾ, ಹಾಸ್ಯನಟ ಸಮಯ್ ರೈನಾ, ಯೂಟ್ಯೂಬರ್ ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ ಮತ್ತು ಜಸ್ಪ್ರೀತ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಮಹಾರಾಷ್ಟ್ರ ಮತ್ತು ಅಸ್ಸಾಂ ಪೊಲೀಸರಿಂದ ಹಲವಾರು ಎಫ್ಐಆರ್ಗಳು ದಾಖಲಾದವು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಇದು ಅಪ್ರಾಪ್ತರಿಗೆ ಹಾನಿಕಾರಕ ಎಂದಿತು.
ಬುಧವಾರ ನಡೆದ ಇನ್ಸ್ಟಾಗ್ರಾಂ ಪ್ರಶ್ನೋತ್ತರ ಅವಧಿಯಲ್ಲಿ, ಅಲ್ಹಾಬಾದಿಯಾ ಅವರು ಘಟನೆಯಿಂದ ಏನು ಕಳೆದುಕೊಂಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
'ಆರೋಗ್ಯ, ಹಣ, ಅವಕಾಶ, ಖ್ಯಾತಿ, ಮಾನಸಿಕ ಆರೋಗ್ಯ, ಶಾಂತಿ, ಪೋಷಕರ ನೆಮ್ಮದಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಕಳೆದುಕೊಂಡಿರುವೆ. ಈ ಮಧ್ಯೆ, ಪರಿವರ್ತನೆ, ಆಧ್ಯಾತ್ಮಿಕ ಬೆಳವಣಿಗೆ, ದೃಢತೆಯನ್ನು ಪಡೆದುಕೊಂಡಿದ್ದೇನೆ. ಕಳೆದುಹೋದ ಎಲ್ಲವನ್ನೂ ಮರಳಿ ಪಡೆಯುವತ್ತ ನಿಧಾನವಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾತನಾಡಲಿ' ಎಂದಿದ್ದಾರೆ.
'ನನ್ನ ತಪ್ಪಿನಿಂದಾಗಿ ನನ್ನ ತಂಡದ ಸದಸ್ಯರ ಕುಟುಂಬಗಳು ಕೂಡ ತೊಂದರೆಗೆ ಸಿಲುಕಿವೆ. ಇದರಿಂದಾಗಿ ಎಷ್ಟು ಜನರ ಉದ್ಯೋಗಗಳು ಅಪಾಯದಲ್ಲಿವೆ ಎಂಬುದು ಹೊರಗಿನವರಿಗೆ ಅರ್ಥವಾಗುತ್ತಿಲ್ಲ. ನನ್ನ ವೃತ್ತಿಜೀವನದ ಮೇಲೆ ದೊಡ್ಡ ಹೊಡೆತ ಬಿತ್ತು ಮತ್ತು ಅದರಿಂದಾಗಿ ನನ್ನನ್ನು ಅವಲಂಬಿಸಿದ್ದ 300ಕ್ಕೂ ಅಧಿಕ ಜನರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿದೆ. ಇಂತಹ ಸಂದರ್ಭಗಳಲ್ಲಿ ಜನರು ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ತಿಳಿಯಿತು. ಯಾರಾದರೂ ಬೀಳುವುದನ್ನು ನೋಡಲು ಜನರು ಇಷ್ಟಪಡುತ್ತಾರೆ. ಆದರೆ, ನಾವು ಮುಂದುವರಿಯುತ್ತೇವೆ. ಅನೇಕರ ಜೀವನ ನನ್ನ ಕೆಲಸದ ಮೇಲೆ ಅವಲಂಬಿತವಾಗಿರುವುದರಿಂದ ನಾನು ಎಲ್ಲವನ್ನೂ ನೀಡಬೇಕಾಗಿದೆ ಎಂದಿದ್ದಾರೆ.
ಅವರ ಕುಟುಂಬದ ಮೇಲಾದ ಪರಿಣಾಮದ ಬಗ್ಗೆ ಕೇಳಿದಾಗ, 'ಈ ಅವ್ಯವಸ್ಥೆಯ ಭಾಗವು ಹೆಚ್ಚು ನೋವುಂಟುಮಾಡಿತು. ನಿಮ್ಮ ಕೆಲಸ, ನಿಮ್ಮ ಕ್ರಿಯೆಗಳು ನಿಮ್ಮ ಪ್ರೀತಿಪಾತ್ರರ ಮೇಲೆ ಪರಿಣಾಮ ಬೀರುತ್ತವೆ. ಆದರೆ, ನನ್ನ ಪೋಷಕರು ಯೋಧರು. ನನ್ನ ಮನಸ್ಥಿತಿ ಅಲ್ಲಿಂದ ಬಂದಿದೆ!. ಪರಿಸ್ಥಿತಿ ಕಠಿಣವಾಗಿತ್ತು, ಆದರೆ ನಾವು ಅದನ್ನು ದಾಟುತ್ತಿದ್ದೇವೆ ಎಂದು ಅಲ್ಹಾಬಾದಿಯಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



