ದೇಶ

ಉತ್ತರ ಪ್ರದೇಶ: ಪ್ಯಾಲೆಸ್ಟೀನ್ ಧ್ವಜ ಹಾರಿಸಿದ ವಿದ್ಯುತ್ ಇಲಾಖೆಯ ಮುಸ್ಲಿಂ ಉದ್ಯೋಗಿ ವಜಾ

ಕೈಲಾಶ್‌ಪುರ ಪವರ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಕಿಬ್ ಖಾನ್, ಮಾರ್ಚ್ 31 ರಂದು ಈದ್ 'ನಮಾಜ್' ನಂತರ ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶ: ಪ್ಯಾಲೆಸ್ಟೀನ್ ಧ್ವಜ ಹಾರಿಸಿದ ವಿದ್ಯುತ್ ಇಲಾಖೆಯ ಮುಸ್ಲಿಂ ಉದ್ಯೋಗಿ ವಜಾ
ಸಾಂದರ್ಭಿಕ ಚಿತ್ರ
Published On :

ಸಹರಾನ್‌ಪುರ: ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಈದ್ ಹಬ್ಬದಂದು ಪ್ಯಾಲೆಸ್ಟೀನ್ ಧ್ವಜ ಹಾರಿಸಿದ ಆರೋಪದ ಮೇಲೆ ವಿದ್ಯುತ್ ಇಲಾಖೆಯ ಗುತ್ತಿಗೆ ಕಾರ್ಮಿಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಪ್ಯಾಲೆಸ್ಟೀನ್ ಧ್ವಜ ಹಿಡಿದಿರುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಉದ್ಯೋಗಿಗೆ ವಜಾಗೊಳಿಸುವ ನೋಟಿಸ್ ನೀಡಲಾಗಿದೆ.

ಕೈಲಾಶ್‌ಪುರ ಪವರ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಕಿಬ್ ಖಾನ್, ಮಾರ್ಚ್ 31 ರಂದು ಈದ್ 'ನಮಾಜ್' ನಂತರ ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಯು ಈ ಕ್ರಮವನ್ನು "ರಾಷ್ಟ್ರವಿರೋಧಿ" ಎಂದು ಪರಿಗಣಿಸಿದೆ. ಹೀಗಾಗಿ ಉದ್ಯೋಗಿಯನ್ನು ವಜಾಗೊಳಿಸಲಾಗಿದೆ ಎಂದು ವಿದ್ಯುತ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ್ ಕುಮಾರ್ ತಿಳಿಸಿದ್ದಾರೆ.

"ಕೈಲಾಶ್‌ಪುರ ಪವರ್ ಹೌಸ್‌ನಲ್ಲಿ ಗುತ್ತಿಗೆ ಕೆಲಸಗಾರನಾಗಿದ್ದ ಸಾಕಿಬ್ ಖಾನ್, ಈದ್ ಹಬ್ಬದಂದು 'ನಮಾಜ್' ಮಾಡಿದ ನಂತರ ಪ್ಯಾಲೆಸ್ಟೀನ್ ಧ್ವಜ ಹಿಡಿದು, ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು" ಎಂದು ಕುಮಾರ್ ಹೇಳಿದ್ದಾರೆ.

"ಈ ವಿಚಾರ ಇಲಾಖೆಯ ಗಮನಕ್ಕೆ ಬಂದಾಗ, ಅದನ್ನು ದೇಶ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಯಿತು. ಸಂಬಂಧಪಟ್ಟ ಗುತ್ತಿಗೆ ಕಂಪನಿಗೆ ಪತ್ರ ಬರೆದು, ಖಾನ್ ಅವರನ್ನು ಸೇವೆಯಿಂದ ತೆಗೆದುಹಾಕುವಂತೆ ಸೂಚಿಸಲಾಯಿತು" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.