ಭಾರತದ ರಾಯಭಾರಿ ಸ್ವಾಗತಿಸಲು ಇಸ್ರೇಲ್ ನಿಂದ 'The Diplomat' ಸಿನಿಮಾ ಪ್ರದರ್ಶನ!
ಜಾನ್ ಅಬ್ರಹಾಂ ನಟಿಸಿರುವ ಸಿನಿಮಾ ಸಿಂಗ್ ಅವರ ನೈಜ ಜೀವನದ ಕಥೆಯನ್ನಾಧಾರಿಸಿದೆ. ಪ್ರದರ್ಶನಕ್ಕೂ ಮುನ್ನಾ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರನ್ನು ಸಿಂಗ್ ಅವರನ್ನು ಭೇಟಿಯಾಗಿ ಅವರ ಹೊಸ ಕಾರ್ಯದಲ್ಲಿ ಯಶಸ್ಸನ್ನು ಬಯಸಿದರು.

ನವದೆಹಲಿ: ಇಸ್ರೇಲ್ನ ವಿದೇಶಾಂಗ ಸಚಿವಾಲಯ ಮಂಗಳವಾರ 'The Diplomat' ವರ್ಲ್ಡ್ ಫ್ರೀಮಿಯರ್ ಶೋ ಆಯೋಜಿಸುವ ಮೂಲಕ ಭಾರತದ ನೂತನ ರಾಯಭಾರಿ ಜೆ. ಪಿ. ಸಿಂಗ್ ಅವರನ್ನು ಸ್ವಾಗತಿಸಿತು.
ಜಾನ್ ಅಬ್ರಹಾಂ ನಟಿಸಿರುವ ಸಿನಿಮಾ ಸಿಂಗ್ ಅವರ ನೈಜ ಜೀವನದ ಕಥೆಯನ್ನಾಧಾರಿಸಿದೆ. ಪ್ರದರ್ಶನಕ್ಕೂ ಮುನ್ನಾ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರನ್ನು ಸಿಂಗ್ ಅವರನ್ನು ಭೇಟಿಯಾಗಿ ಅವರ ಹೊಸ ಕಾರ್ಯದಲ್ಲಿ ಯಶಸ್ಸನ್ನು ಬಯಸಿದರು.
ರಾಜತಾಂತ್ರಿಕತೆಗೆ ಪ್ರತಿ ದಿನವೂ ಹೊಸ ಸವಾಲುಗಳನ್ನು ಪ್ರಸ್ತುತಪಡಿಸುವುದರೊಂದಿಗೆ, ಪ್ರಮಾಣಿತ ಕಾರ್ಯವಿಧಾನಗಳನ್ನು ಮೀರಿ ಯೋಚಿಸುವ ಅಗತ್ಯವಿದೆ ಎಂಬುದನ್ನು ಚಿತ್ರವು ಹೇಗೆ ನೆನಪಿಸುತ್ತದೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
2002 ರ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿರುವ ಸಿಂಗ್, ಪಾಕಿಸ್ತಾನದಲ್ಲಿ ನಿಯೋಜನೆಗೊಂಡಿದ್ದಾಗ ಭಾರತೀಯ ಹೈಕಮಿಷನ್ ನಲ್ಲಿ ಆಶ್ರಯ ಪಡೆದಿದ್ದ ಉಜ್ಮಾ ಅಹ್ಮದ್ ಎಂಬ ಭಾರತೀಯ ಮಹಿಳೆ, ತನ್ನನ್ನು ಅಪಹರಿಸಿ ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿಸಲಾಗಿದೆ ಎಂದು ಹೇಳುತ್ತಾರೆ. ರಾಜತಾಂತ್ರಿಕತೆ, ಪಾಕಿಸ್ತಾನಿ ಕಾನೂನು ಮತ್ತು ಉಜ್ಮಾ ಸುರಕ್ಷಿತವಾಗಿ ಭಾರತಕ್ಕೆ ವಾಪಾಸ್ ಆಗುವಲ್ಲಿ ಸಿಂಗ್ ಹೇಗೆ ಒತ್ತಡಗಳನ್ನು ನಿಭಾಯಿಸಿದರು ಎಂಬುದನ್ನು ಚಿತ್ರವು ವಿವರಿಸುತ್ತದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.