ಕಾಂಗ್ರೆಸ್ ನಿತೀಶ್ ಗೆ ಮಾಡಿದ ಅವಮಾನದಿಂದ ಇಂಡಿಯಾ ಮೈತ್ರಿಕೂಟ ಪತನ: ಕೆ ಸಿ ತ್ಯಾಗಿ
ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಬಹುತೇಕ ಪತನವಾಗುವುದನ್ನು ಜೆಡಿಯು ರಾಜಕೀಯ ಸಲಹೆಗಾರ ಹಾಗೂ ವಕ್ತಾರ ಕೆ. ಸಿ. ತ್ಯಾಗಿ ಶನಿವಾರ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕತ್ವದ ಒಂದು ವರ್ಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದೇ ಪದೇ 'ಅವಮಾನ' ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಾಟ್ನಾ: ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಬಹುತೇಕ ಪತನವಾಗುವುದನ್ನು ಜೆಡಿಯು ರಾಜಕೀಯ ಸಲಹೆಗಾರ ಹಾಗೂ ವಕ್ತಾರ ಕೆ. ಸಿ. ತ್ಯಾಗಿ ಶನಿವಾರ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕತ್ವದ ಒಂದು ವರ್ಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದೇ ಪದೇ 'ಅವಮಾನ' ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ. ತ್ಯಾಗಿ ಇಂಡಿಯಾ ಮೈತ್ರಿಕೂಟ ಪತನದ ಅಂಚಿನಲ್ಲಿದೆ. ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಇಂಡಿಯಾ ಬ್ಲಾಕ್ ಪಕ್ಷಗಳ ಮೈತ್ರಿ ಬಹುತೇಕ ಮುಗಿದಿದೆ ಎಂದರು.
ಕಾಂಗ್ರೆಸ್ಸೇತರ ಪಕ್ಷಗಳನ್ನು ಕಾಂಗ್ರೆಸ್‌ನೊಂದಿಗೆ ಕರೆತರುವಲ್ಲಿ ಯಶಸ್ವಿಯಾದ ಜೆಡಿಯು ಅಧ್ಯಕ್ಷ ಕುಮಾರ್ ಅವರ ಗುರಿ ಮತ್ತು ಉದ್ದೇಶಗಳನ್ನು ಕಾಂಗ್ರೆಸ್ ನಾಯಕರು 'ತಪ್ಪಾಗಿ ಅರ್ಥೈಸಿದರು. ಇಂಡಿಯಾ ಮೈತ್ರಿಕೂಟದಲ್ಲಿ ಸ್ಥಾನಕ್ಕಾಗಿ ಎಂದಿಗೂ ಹಾತೊರೆಯಲಿಲ್ಲ ಆದರೆ ಕಾಂಗ್ರೆಸ್ ನಾಯಕತ್ವದ ಒಂದು ವಿಭಾಗ ಅವರನ್ನು ಪದೇ ಪದೇ ಅವಮಾನಿಸಿತು ಎಂದು ಅವರು ಹೇಳಿದರು.
ಇಂಡಿಯಾ ಮೈತ್ರಿಕೂಟ 'ಸರ್ವಶಕ್ತ' ಭಾರತೀಯ ಜನತಾ ಪಕ್ಷದ ವಿರುದ್ಧ ಹೇಗೆ ಹೋರಾಡಬಹುದು ಎಂಬುದನ್ನು ಅವರು ನೋಡಲಿಲ್ಲ. ಪಾಟ್ನಾದಲ್ಲಿ ಹಲವಾರು ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ನಿತೀಶ್ ಯಶಸ್ವಿಯಾದರು ಆದರೆ ಚುನಾವಣೆ ಹತ್ತಿರದಲ್ಲಿದ್ದರೂ ನಾಯಕತ್ವ ಹಾಗೂ ಕಾರ್ಯಸೂಚಿ ಬಗ್ಗೆ ಇಂಡಿಯಾ ಮೈತ್ರಿಕೂಟ ಯಾವುದೇ ಜಂಟಿ ಸಭೆ ನಡೆಸಲಿಲ್ಲ. ಇದರಿಂದ ಇಡೀ ಪ್ರಕ್ರಿಯೆ ವ್ಯರ್ಥವಾಯಿತು ಎಂದು ತ್ಯಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


