ದೇಶದಲ್ಲಿ ಸಾವಿರದ ಗಡಿ ದಾಟಿದ JN.1 ಪ್ರಕರಣ; ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೇಸ್!
ಕೊರೋನಾ ವೈರಸ್ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ ಶುಕ್ರವಾರ 1 ಸಾವಿರದ ಗಡಿ...

ನವದೆಹಲಿ: ಕೊರೋನಾ ವೈರಸ್ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ ಶುಕ್ರವಾರ 1 ಸಾವಿರದ ಗಡಿ ದಾಟಿದೆ.
ದೇಶದ 16 ರಾಜ್ಯಗಳಲ್ಲಿ ಇದುವರೆಗೆ 1013 ಜೆಎನ್.1 ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ 214 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 170 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕೇರಳ(154), ಆಂಧ್ರಪ್ರದೇಶ (189), ಗುಜರಾತ್ (76) ಮತ್ತು ಗೋವಾ (66) ನಂತರದ ಸ್ಥಾನದಲ್ಲಿವೆ.
ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಲಾ 32, ಛತ್ತೀಸ್‌ಗಢದಲ್ಲಿ 25, ತಮಿಳುನಾಡಿನಲ್ಲಿ 22, ದೆಹಲಿಯಲ್ಲಿ 16, ಉತ್ತರ ಪ್ರದೇಶದಲ್ಲಿ 6, ಹರಿಯಾಣದಲ್ಲಿ 5, ಒಡಿಶಾದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2 ಮತ್ತು ಉತ್ತರಾಖಂಡದಲ್ಲಿ 1 ಪ್ರಕರಣ ದಾಖಲಾಗಿದೆ.
ದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು JN.1 ರೂಪಾಂತರಿ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ತಕ್ಷಣಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಸೋಂಕಿತರಲ್ಲಿ ಹೆಚ್ಚಿನವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದು ಸೌಮ್ಯ ಅನಾರೋಗ್ಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


