ರಾಜ್ಯಸಭಾ ಅಭ್ಯರ್ಥಿಯಾದ ನಂತರ DCW ಅಧ್ಯಕ್ಷೆ ಸ್ಥಾನಕ್ಕೆ ಸ್ವಾತಿ ಮಲಿವಾಲ್ ರಾಜೀನಾಮೆ
ಆಮ್ ಆದ್ಮಿ ಪಕ್ಷ ರಾಜ್ಯಸಭೆ ಚುನಾವಣೆಗೆ ದೆಹಲಿ ಮಹಿಳಾ ಆಯೋಗ(DCW)ದ ಅಧ್ಯಕ್ಷ ಸ್ವಾತಿ ಮಲಿವಾಲ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸ್ವಾತಿ ಮಲಿವಾಲ್ ಅವರು DCW ಅಧ್ಯಕ್ಷೆ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ...

ನವದೆಹಲಿ: ಆಮ್ ಆದ್ಮಿ ಪಕ್ಷ ರಾಜ್ಯಸಭೆ ಚುನಾವಣೆಗೆ ದೆಹಲಿ ಮಹಿಳಾ ಆಯೋಗ(DCW)ದ ಅಧ್ಯಕ್ಷ ಸ್ವಾತಿ ಮಲಿವಾಲ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸ್ವಾತಿ ಮಲಿವಾಲ್ ಅವರು DCW ಅಧ್ಯಕ್ಷೆ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಾತಿ ಮಲಿವಾಲ್ ಅವರು ತಮ್ಮ ರಾಜೀನಾಮೆ ಪತ್ರಕ್ಕೆ ಸಹಿ ಹಾಕುವಾಗ ಭಾವುಕರಾದರು ಮತ್ತು ಐಟಿಒನ ವಿಕಾಸ್ ಭವನದಲ್ಲಿರುವ ಕಚೇರಿಯಿಂದ ಹೊರಡುವ ಮುನ್ನ ತಮ್ಮ ಸಹೋದ್ಯೋಗಿಗಳನ್ನು ತಬ್ಬಿಕೊಂಡರು.
ಜನವರಿ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಸ್ವಾತಿ ಮಲಿವಾಲ್ ತನ್ನ ಅಭ್ಯರ್ಥಿ ಎಂದು ಎಎಪಿ ಘೋಷಿಸಿಗೆ ಮತ್ತು ಜೈಲಿನಲ್ಲಿರುವ ಸಂಜಯ್ ಸಿಂಗ್ ಹಾಗೂ ಎನ್ ಡಿ ಗುಪ್ತಾ ಅವರನ್ನು ಎರಡನೇ ಅವಧಿಗೆ ಕಣಕ್ಕಿಳಿಸಲು ಆಪ್ ನಿರ್ಧರಿಸಿದೆ.
ರಾಜ್ಯಸಭಾ ಸದಸ್ಯರಾಗಿ ಸುಶೀಲ್ ಕುಮಾರ್ ಗುಪ್ತಾ ಅವರ ಅಧಿಕಾರಾವಧಿ ಇದೇ ತಿಂಗಳು ಕೊನೆಗೊಳ್ಳಲಿದ್ದು, ಈ ಸ್ಥಾನಕ್ಕೆ ಸ್ವಾತಿ ಮಲಿವಾಲ್ ಬರಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


